ರುಚಿ ರುಚಿಯಾದ ಪನ್ನೀರ್- ಚಿಕನ್ ಗ್ರೇವಿ ಮಾಡುವ ವಿಧಾನ..!!

0
427

ವಾರದ ಕೊನೆಯಲ್ಲಿ ಮಾಡುವ ಚಿಕನ್ ತಯಾರಿಯಲ್ಲಿ ಕೊಂಚ ಬದಲಾವಣೆ ಇದ್ದರೆ ಮಜಾ ಸಿಗೋದು ಪ್ರತಿ ವಾರಾವು ಒಂದೇ ರುಚಿ ಸವಿದು ಬೇಸತ ಚಿಕನ್ ಪ್ರಿಯರಿಗೆ ಹೊಸ ಹೊಸ ರೆಸಿಪೆಯನ್ನು ತೋರಿಸುವ ನಮ್ಮ ಲೇಖನದಲ್ಲಿ ಓದುಗರ ಆಸಕ್ತಿಯು ಅಡಗಿದೆ ಹಾಗೆಯೇ ಈ ಎಲ್ಲ ವಿಚಾರವನ್ನು ಹೊತ್ತ ನಮ್ಮ ಮಾಧ್ಯಮ ಈ ವಾರದ ರಜೆಗೆ ಕೋಳಿ ಮಾಂಸದಿಂದ ಸಸ್ಯಾಹಾರಿಗಳಿಗೆ ಒಪ್ಪುವಂತೆ ಮಾಡಬೇಕಾದ ಪನ್ನೀರ್ ಹಾಕಿ ಮಾಂಸಾಹಾರದ್ದೇ ರುಚಿಯನ್ನು ಪಡೆಯಬಹುದು.

Also read: ಚಿಕನ್ ಪ್ರಿಯರಿಗೆ ಇಷ್ಟವಾಗುವ ಮೊಸರು ಚಿಕನ್ ಮಸಾಲ ಮಾಡುವ ವಿಧಾನ..!!

ಒಂದು ವೇಳೆ ಇವೆರಡನ್ನೂ ಒಂದೇ ಖಾದ್ಯದಲ್ಲಿ ಸೇರಿಸಿದರೆ ಅದ್ಭುತ ರುಚಿಯಾದ, ಮೃದುವಾದ ಚಿಕನ್ ಪನ್ನೀರ್ ಸಾರಿನ ರುಚಿಯನ್ನು ನೀವು ನೋಡಬಹುದು. ಪನ್ನೀರ್ ಹಾಲಿನಿಂದ ಮಾಡಿರುವ ಕಾರಣ ಹಾಲಿನ ಗುಣಗಳನ್ನೆಲ್ಲಾ ಪಡೆದಿರುತ್ತದೆ. ಮುಖ್ಯವಾಗಿ ಹಾಲಿನ ಕ್ಯಾಲ್ಸಿಯಂ ಪನ್ನೀರಿನಲ್ಲಿಯೂ ಇದ್ದು ಹಾಲಿಗಿಂತ ಹೆಚ್ಚು ಸಾಂದ್ರೀಕೃತವಾದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತದೆ. ಇತ್ತ ಕೋಳಿಮಾಂಸದಲ್ಲಿರುವ ಉತ್ತಮ ಪ್ರಮಾಣದ ಪ್ರೋಟೀನು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಒಟ್ಟಾರೆ ಇದು ದೇಹಕ್ಕೆ ಅತ್ಯಂತ ಪುಷ್ಟಿಕರ ಆಹಾರವಾಗಿದೆ. ಈ ಚಿಕನ್ ಪನ್ನೀರ್ ಜೋಡಿಯಿಂದ ಖಾರವಾದ ಸಾರು ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾದ ಪದಾರ್ಥಗಳು:

ಮಾಡುವ ವಿಧಾನ:

    Also read: ಪೋಷಕಾ೦ಶ, ಕ್ಯಾಲರಿಅ೦ಶವುಳ್ಳ ಚಿಕನ್ ಗೀ ಮಸಾಲಾ ಮಾಡುವ ವಿಧಾನ..!!

  • ಬಾಣಲೆ ಅಥವಾ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಮಾಡಿ. ಇದರಲ್ಲಿ ಪನ್ನೀರ್ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಪನ್ನೀರ್ ತುಂಡುಗಳನ್ನು ಇನ್ನೊಂದು ಪಾತ್ರೆಯಲ್ಲಿ ಇಡಿ.
  • ನಂತರ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಬಳಿಕ ಈರುಳ್ಳಿ ಮತ್ತು ಹಸಿಮೆಣಸು ಹಾಕಿ ಈರುಳ್ಳಿ ಕೊಂಚ ಕೆಂಪು ಬಣ್ಣ ಬರುವವರೆಗೆ ಹುರಿಯಿರಿ.
  • ಈಗ ಟೊಮೇಟೋ ಪ್ಯೂರಿ, ಈರುಳ್ಳಿ ಪ್ಯೂರಿ, ಗರಂ ಮಸಾಲೆ ಪುಡಿ, ಮೆಣಸಿನ ಪುಡಿ, ಧನಿಯ ಪುಡಿ ಹಾಕಿ ಹುರಿಯಿರಿ.
  • ಕೊಂಚ ಎಣ್ಣೆ ಬಿಡುತ್ತಿದ್ದಂತೆಯೇ ಪನ್ನೀರ್ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ.
  • ಬಳಿಕ ಕೋಳಿಮಾಂಸದ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ ಉಪ್ಪು ಸೇರಿಸಿ ಇದರ ಮೇಲೆ ಲಿಂಬೆರಸ ಸೇರಿಸಿ ಚಿಕ್ಕ ಉರಿಯಲ್ಲಿ ಕೋಳಿ ಮಾಂಸ ಬೇಯುವವರೆಗೆ ನಡುನಡುವೆ ತಿರುವುತ್ತಾ ಬೇಯಿಸಿರಿ.
  • ಈಗ ನಿಮ್ಮ ಇಷ್ಟದ ಪನ್ನೀರ್-ಚಿಕನ್ ಗ್ರೇವಿ, ರೆಡಿಯಾಗಿದೆ ಇದನ್ನು ರೊಟ್ಟಿ ಮತ್ತು ಅನ್ನದೊಂದಿಗೆ ಸೇವಿಸಲು ತುಂಬಾ ರುಚಿಯಾಗಿರುತ್ತದೆ.