ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಬಜೆಟ್-ನಲ್ಲಿ ಉತ್ತರ ಕರ್ನಾಟಕಕ್ಕೆ ಮೋಸವಾಗಿದೆ ಎಂದು ಆರೋಪಿಸಿ ಪ್ರತ್ಯೇಕ ರಾಜ್ಯಕ್ಕೆ ಹೋರಾಟ!!

0
331
demand-for-separate-karnataka-state-rours

ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಮಲತಾಯಿ ದೋರಣೆಯಿಂದ ಬೇಸತ್ತ ಜನರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಎಂದು ಘೋಷಣೆ ಮಾಡಿವ ಮೂಲಕ ಆಗಸ್ಟ್ 2 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ
ಈ ಸಮಿತಿಯ ಅಧ್ಯಕ್ಷ ಸೋಮಶೇಖರ್‌ ಮಾಧ್ಯಮ ರೊಂದಿಗೆ ಮಾತಾನಾಡಿ, ಈ ಸರ್ಕಾರದ ಹೊಸ ಬಜೆಟ್‌ನಲ್ಲಿ ಕುಮಾರಸ್ವಾಮಿಯವರು ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ, ಉತ್ತರ ಕರ್ನಾಟಕಕ್ಕೆ ಸೇರಿದ 13 ಜಿಲ್ಲೆಯಲ್ಲಿ ಯಾವುದೇ ಅಭಿವೃದಿಯ ಯೋಜನೆಗಳ ಪೂರಕವಾದ ಕೆಲಸವಾಗದ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ಸ್ಥಾಪನೆ ಮಾಡಲು ಶಿಫಾರಸ್ಸು ಮಾಡಿ.

Also read: ರಾಜ್ಯೋತ್ಸವದ ದಿನದಂದು ಪ್ರತ್ಯೇಕ ರಾಜ್ಯ ಬೇಕೆಂದು ಪ್ರತಿಭಟನೆ ಮಾಡಿದ ಕಲುಬರ್ಗಿಯ ಕೆಲ ನಾಡದ್ರೋಹಿಗಳು!!

ಈ ಕುರಿತು ಜಿಲ್ಲೆವಾರು ಸಮೀಕ್ಷೆ ನಡೆಸಲು ಸಮಿತಿ ರಚನೆ ಮಾಡಬೇಕು ಎಂದು 13 ಜಿಲ್ಲೆಯ ಜನರು ಸಂಪೂರ್ಣವಾಗಿ ಬೇಸತು ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ನಮಗೆ ಈ ಗೋಳು ತಪ್ಪಿದ್ದಲ್ಲ ಆದ್ದರಿಂದ ಇತಂಹ ತಿರ್ಮಾನಕ್ಕೆ ಬಂದ್ದಿದೇವೆ ಎಂದರು. ನೂತನ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬರಿ ಬೆಂಗಳೂರಿನ ಆಸುಪಾಸು ಇರುವ ಜಿಲ್ಲೆಗಳಾದ ರಾಮನಗರ, ಮಂಡ್ಯ, ಹಾಸನ, ಮೈಸೂರು ಚಾಮರಾಜ್ ನಗರ, ಕನಕಪುರ, ಇಂತಹ ಅಭಿವೃದ್ದಿ ಹೊಂದಿದ ಪ್ರದೇಶಗಳಿಗೆ ಹಾಲು ಉಣ್ಣಿಸಿ ನಮ್ಮ ಭಾಗಕ್ಕೆ ಸುಣ್ಣದ ನೀರು ಎರಚುತ್ತಿದಾರೆ ಈ ವಿಷಯಕ್ಕೆ ಸಂಬಂಧಿಸಿ ಅವರಲ್ಲಿ ಮನವಿ ಸಲ್ಲಿಸಿದರೂ ಅವರು ಇದರತ್ತ ಗಮನ ಹರಿಸಿಲ್ಲ. ನಮ್ಮ ಬಗ್ಗೆ ಕಾಳಜಿ ವಹಿಸುವ ಪ್ರತ್ಯೇಕ ರಾಜ್ಯವನ್ನು ನಾವು ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.

Also read: ಪ್ರತ್ಯೇಕತೆಯ ಕೂಗು ಏಳುವುದು ನಿರಂತರ ಶೋಷಣೆಯಿಂದಲೇ….

ಈ ಮೊದಲು ಶಾಸಕರಾದ ಉಮೇಶ್ ಕತ್ತಿ, ಎ.ಎಸ್.ಪಾಟೀಲ್ ನಡಹಳ್ಳಿ, ಶ್ರೀರಾಮುಲು ಕೂಡ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿದ್ದರು. ಇದೀಗ ಆ ಭಾಗದ ಹಲವಾರು ಸಂಘಟನೆಗಳು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಲೇ ಬರಲಾಗಿದೆ ಎಂದು ಆರೋಪಿಸಿ ಆ.2 ರಂದು ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ಬಂದ್‍ಗೆ ಕರೆ ನೀಡಿದ್ದೇವೆ. ಇದಕ್ಕೆ ಉತ್ತರ ಕರ್ನಾಟಕ ರೈತ ಸಮಿತಿ, ಹಾಗು ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿಗಳ ಒಕ್ಕೂಟ, ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿವೆ ಎಂದು ಹೇಳಿದರು. ಮತ್ತೆ ನಮಗೆ ಬೇಕಾದ ಹಾಗೇ ನಮ್ಮ ಬಗ್ಗೆ ಕಾಳಜಿ ವಹಿಸುವ ಪ್ರತ್ಯೇಕ ರಾಜ್ಯವನ್ನು ನಾವು ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ. ಮಹದಾಯಿ ವಿಷಯದಲ್ಲಿವು ನಮ್ಮ ಭಾಗಕ್ಕೆ ಅಪಾರವಾದ ಮೋಸವಾಗಿದೆ ಈ ಹೋರಾಟವು ಸಾವಿರಾರು ದಿನಗಳನ್ನು ಮುಟ್ಟಿದರು ಯಾವುದೇ ಗೆಲವು ಕಾಣುತ್ತಿಲ್ಲ ಅಂತಹ ಗಾಯದ ಮೆಲ್ಲೆ ಇಂತಹ ಬರೆ ಹಾಕ್ಕುತ್ತಿದಾರೆ ಎಂದರು.