ಹೆಚ್ಚುತ್ತಿರುವ ಮರೆಗುಳಿತನ ಕಾರಣವೇನು? ಇದರಿಂದ ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬಿರುತ್ತೆ? ಇದಕ್ಕೆ ಚಿಕಿತ್ಸೆ ಪಡೆಯುವ ವಿಧಾನ ಇಲ್ಲಿದೆ ನೋಡಿ..

0
508

ಸಾಮಾನ್ಯವಾಗಿ ಇತರೆ ಕಾಯಿಲೆಗಳಂತೆ ಮರೆಗುಳಿತನ ಕೂಡ ಹೆಚ್ಚಾಗುತ್ತಿದ್ದು, ಇದು ದಿನದಿಂದ ದಿನಕ್ಕೆ ಹೆಚ್ಚು ಜನರಲ್ಲಿ ಕಂಡು ಬರುತ್ತಿದೆ. ಆದರೆ ಇದನ್ನು ಎಲ್ಲರಲ್ಲೂ ಇರುವ ಸಹಜತೆ ಎಂದು ಬಿಡಲು ಆಗುವುದಿಲ್ಲ ಏಕೆಂದರೆ ಮರೆಗುಳಿತನವನ್ನು ಪ್ರತಿಯೊಬ್ಬರಲ್ಲಿಯೂ ಒಂದೇ ಮಾನದಂಡದಲ್ಲಿ ಅಳೆಯಲು ಸಾಧ್ಯವಿಲ್ಲ. ಜಾಣಮರೆವಿನ ಹೊರತಾಗಿ ಕೆಲವರಲ್ಲಿ ಮರೆವು ಅಲ್ಪಮಟ್ಟಿಗಿದ್ದರೆ ಅಲ್ಜೀಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಅತಿ ಹೆಚ್ಚು ಇರುತ್ತದೆ. ಇದು ಅಲ್ಪಾವಧಿಯ ಮರೆವು, ದೀರ್ಘಾವಧಿಯ ಮರೆವು ಹಾಗೂ ಪೂರ್ಣವಾಗಿ ಮರೆಯುವುದು ಇವೆಲ್ಲವೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

Also read: Arthritis ಖಾಯಿಲೆಗೆ ಅನೇಕ ಮಾತ್ರೆಗಳನ್ನು ತೆಗೆದುಕೊಂಡರೂ ನೋವು ಕಡಿಮೆಯಾಗಿಲ್ಲವೆಂದರೆ, ಈ ನೈಸರ್ಗಿಕ ಚಿಕಿತ್ಸೆಗಳ ಮೊರೆಹೋಗಿ!!

ಹೌದು ವೈದ್ಯವಿಜ್ಞಾನದಲ್ಲಿ ಇದನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಅಲ್ಪಾವಧಿಯ ಮರೆಗುಳಿತನ ಹಾಗೂ ಎರಡನೆಯದು ದೀರ್ಘಾವಧಿಯ ಮರೆಗುಳಿತನ.

ಅಲ್ಪಾವಧಿಯ ಮರೆಗುಳಿತನ:

ಈ ತೊಂದರೆ ಇರುವ ವ್ಯಕ್ತಿಗಳು ಇತ್ತೀಚೆಗೆ ಘಟಿಸಿದ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಅಸಮರ್ಥರಾಗಿರುತ್ತಾರೆ. ಈ ವ್ಯಕ್ತಿಗಳಿಗೆ ತಮ್ಮ ಜೀವನದ ಇಪ್ಪತ್ತು ವರ್ಷ ಹಿಂದಿನ ನೆನಪುಗಳೆಲ್ಲವೂ ಸ್ಪಷ್ಟವಾಗಿ ನೆನಪಿರುತ್ತವೆ ಆದರೆ ನಿನ್ನೆ ಮೊನ್ನೆಯ ವಿಷಯಗಳು ನೆನಪಿರುವುದಿಲ್ಲ. ಸುಮಾರು ಹತ್ತು ನಿಮಿಷ ಹಿಂದೆ ನಡೆದ ಪ್ರಮುಖ ವಿಷಯವನ್ನು ಈಗ ಕೇಳಿದಾಗ ಇವರು ಉತ್ತರಿಸಲು ತಡವರಿಸುತ್ತಾರೆ.

Also read: ಸೈನುಸ್ ಸಮಸ್ಯೆಗೆ ದುಬಾರಿ ಚಿಕಿತ್ಸೆ ಪಡೆಯೋಕ್ಕೆ ಮೊದಲು ಈ ಸುಲಭ ಮನೆ ಮದ್ದುಗಳನ್ನು ಪಾಲಿಸಿ ನೋಡಿ…

ದೀರ್ಘಾವಧಿಯ ಮರೆಗುಳಿತನ:

ಈ ತೊಂದರೆ ಇರುವ ವ್ಯಕ್ತಿಗಳಿಗೆ ಯಾವ ಸಮಯದಲ್ಲಿ ಯಾವ ವಿಷಯ ಅಗತ್ಯವಾಗಿ ನೆನಪಾಗಬೇಕೋ ಆಗ ಆ ವಿಷಯ ನೆನಪಾಗುವುದೇ ಇಲ್ಲ. ಕಾರ್ಯಕ್ರಮದ ಸಮಯ, ಕೆಲವು ಅಗತ್ಯ ಮಾಹಿತಿಗಳು, ಮನೆಗೆ ಹೋಗುವ ದಾರಿ ಮೊದಲಾದವುಗಳನ್ನು ಇವರು ಅಗತ್ಯವಾಗಿ ಬೇಕಾದಾಗ ಮರೆತಿರುತ್ತಾರೆ. ಮೂಲತಃ ಇವರಿಗೆ ನಿತ್ಯದ ಸಾಮಾನ್ಯ ಚಟುವಟಿಕೆಗಳನ್ನು ನಿರ್ವಹಿಸುವುದೇ ಮರೆತು ಹೋಗುತ್ತಿರುತ್ತದೆ.

ಮರೆಗುಳಿತನಕ್ಕೆ ಕಾರಣಗಳು

Also read: ಪ್ರಕೃತಿ ಚಿಕಿತ್ಸೆಯ ಈ ವಿಧಾನಗಳನ್ನು ಪಾಲಿಸಿದರೆ ಹೆಚ್ಚು ಕಾಲ ಆರೋಗ್ಯದಿಂದ ಬಾಳುತೀರಿ!!

ಖಿನ್ನತಾನಿವಾರಕ, ಉದ್ವೇಗ ನಿವಾರಕ, ಸ್ನಾಯುಗಳ ಸೆಡೆತ ನಿವಾರಿಸುವ, ಅಲರ್ಜಿ ನಿವಾರಕ, ಪ್ರಜ್ಞೆ ತಪ್ಪಿಸಲು ಬಳಸುವ, ನಿದ್ದೆಯನ್ನು ಪ್ರಚೋದಿಸುವ ಹಾಗೂ ಶಸ್ತ್ರಚಿಕಿತ್ಸೆಯ ಬಳಿಕ ನೀಡಲಾಗುವ ನೋವು ನಿವಾರಕ ಔಷಧಿಗಳು ಮರೆಗಳುತನಕ್ಕೆ ನೇರವಾಗಿ ಕಾರಣವಾಗುತ್ತವೆ. ಅದರಂತೆ ಮದ್ಯಪಾನ, ತಂಬಾಕು ಅಥವಾ ಮಾದಕಪದಾರ್ಥ ಸೇವನೆಯಿಂದ ಸ್ಮರಣಶಕ್ತಿ ಕುಂದಲು ಧೂಮಪಾನ ಪ್ರಮುಖ ಕಾರಣವಾಗಿದೆ. ಏಕೆಂದರೆ ಶ್ವಾಸಕೋಶದಿಂದ ಮೆದುಳಿಗೆ ತಲುಪಬೇಕಾದ ಆಮ್ಲಜನಕದ ಮಟ್ಟವನ್ನು ಇದು ತಗ್ಗಿಸುತ್ತದೆ. ಮತ್ತು ಕ್ಯಾನ್ಸರ್ ಗೆ ನೀಡಲಾಗುವ ಕೆಲವು ಚಿಕಿತ್ಸಾ ವಿಧಾನಗಳಾದ ಖೀಮೋಥೆರಪಿ, ವಿಕಿರಣ ಚಿಕಿತ್ಸೆ, ಅಸ್ಥಿಮಜ್ಜೆ ಬದಲಿ ಚಿಕಿತ್ಸೆ, ತಲೆಗೆ ಬಿದ್ದ ಏಟು ಅಥವಾ ಹಿಂದೆ ಎದುರಾಗಿದ್ದ ಢಿಕ್ಕಿ, ಆಘಾತಗಳು ಮರೆಗುಳಿತನಕ್ಕೆ ಕಾರಣವಾಗಿದೆ.

ಮರೆಗುಳಿತನಕ್ಕೆ ಚಿಕಿತ್ಸೆ?

Also read: ಮಧುಮೇಹಕ್ಕೆ ಆಯುರ್ವೇಧ ಚಿಕಿತ್ಸೆಯೊಂದೇ ಪರಿಹಾರ

ಇದು ಹೇಗೆ ಬಂತು ಎನ್ನುವುದರ ಕುರಿತು ನಿಖರವಾದ ಕಾರಣವನ್ನು ಕಂಡುಕೊಂಡ ಬಳಿಕವೇ ಸೂಕ್ತವಾದ ಚಿಕಿತ್ಸೆಯನ್ನು ವೈದ್ಯರೇ ನಿರ್ಧರಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಚಿಕಿತ್ಸೆ ಪಡೆಯುವ ಮೂಲಕ ಸ್ಮರಣಶಕ್ತಿ ಹಿಂದಿಗಿಂತಲೂ ಉತ್ತಮಗೊಳ್ಳುವುದು ಕಂಡುಬಂದಿದೆ. ಒಂದು ವೇಳೆ ಔಷಧಿಗಳ ಪ್ರಭಾವದಿಂದ ಮರೆಗುಳಿತನ ಎದುರಾಗಿದ್ದರೆ ವೈದ್ಯರು ಇದಕ್ಕೆ ಬದಲಿ ಔಷಧಿಗಳನ್ನು ನೀಡುತ್ತಾರೆ. ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳು ಕಾರಣವಾಗಿದ್ದರೆ ಇದಕ್ಕೆ ಮಾನಸಿಕ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಪೋಷಕಾಂಶಗಳ ಕೊರತೆಯಿಂದಾಗಿ ಎದುರಾಗಿದ್ದರೆ ಇದಕ್ಕೆ ಸೂಕ್ತ ಪ್ರಮಾಣದ ಹೆಚ್ಚುವರಿ ಔಷಧಿ ಮತ್ತು ಆಹಾರಗಳನ್ನು ಸೇವಿಸಲು ಸಲಹೆ ಮಾಡಲಾಗುತ್ತದೆ.