Demonetization-ಇಂದ ದೇಶದ ಆರ್ಥಿಕತೆ ಕುಗಿಲ್ಲ; ಮೋದಿಯಿಂದ ಭಾರತ ಆರ್ಥಿಕ ವ್ಯವಸ್ಥೆ ದಾಪುಗಾಲು!!

0
492
ಭ್ರಷ್ಟಾಚಾರ ನಿಗ್ರಹ ಹಾಗೂ ಕಪ್ಪು ಹಣಕ್ಕೆ ಬ್ರೇಕ್ ಹಾಕಲು ನರೇಂದ್ರ ಮೋದಿ ಅವರ ನೋಟ್ ಬ್ಯಾನ್ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ಬೀಳುವ ಪಂಡಿತರ ಲೆಕ್ಕಾಚಾರ ಹುಸಿಯಾಗಿದೆ. ಮೂರನೇ ತ್ರೈಮಾಸಿಕದಲ್ಲಿ ದೇಶ ಒಟ್ಟು ಜಿಡಿಪಿ ಶೇ.೭ ರಷ್ಟಾಗಿದೆ.
Image result for demonetization
ಕೇಂದ್ರ ಅಂಕಿ ಅಂಶ ಕಚೇರಿಯ ಈ ಮೊದಲೇ ತಿಳಿಸಿದಂತೆ ಆರ್ಥಿಕ ವೃದ್ಧಿಯ ಅಂದಾಜಿನ ಹೇಳಿಕೆ ಬದ್ಧವಾಗಿದೆ ಎಂದು ತಿಳಿಸಿದೆ. ೫೦೦-೧೦೦೦ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದ ಸರ್ಕಾರದ ನಿರ್ಧಾರದಿಂದ ಆರ್ಥಿಕತೆಯ ಮೇಲೆ ವ್ಯತರಿಕ್ತ ಪರಿಣಾಮ ಬೀರುವ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಅಲ್ಲದೆ ಇದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಭಾರಿ ಕುಸಿತ ಆಗಬಹುದೆಂದು ಆರೋಪಿಸಲಾಗಿತ್ತು. ವಿಶ್ವ ಮಟ್ಟದಲ್ಲೂ ತುಂಬಾ ಸದ್ದ ಮಾಡಿದ್ದ ಈ ವಿಷಯಕ್ಕೆ ಸಂಬಂಧಿಸಿದಂತೆ ಆರ್ಥಿಕ ತಜ್ಞರು ಜಿಡಿಪಿ ಇಳಿಮುಖ ವಾಗುತ್ತದೆ ಎಂದು ಹೇಳಿದ್ದರು. ಆದರೆ ಅದು ಹುಸಿಯಾಗಿದೆ.
ಕೃಷಿ ಅರಣ್ಯ, ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಶ್ರೇ ೪.೪ ಪ್ರಗತಿ ನಿರೀಕ್ಷೆ ಇದೆ ಎಂದು ಲೆಕ್ಕಾಚಾರ ಹಾಕಲಾಗಿದೆ. 
Image result for demonetization
ಸಿಎಸ್‌ಒ ಜಿಡಿಪಿ ದರವನ್ನು ಮುಂಬರುವ ಮೊದಲ ಮತ್ತು ೨ನೇ ತ್ರೈಮಾಸಿಕದಲ್ಲಿ ಅನುಕ್ರಮವಾಗಿ ಶೇ.೭.೨  ಮತ್ತು ೭.೪ಕ್ಕೆ ಅಂದಾಜು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ೧೨೧.೬೫ ಲಕ್ಷ ಕೋಟಿ ರೂ. ಉಳಿಯಲಿದೆ ಎಂದು ನಿರೀಕ್ಷೆ ಇದೆ. ದೇಶದ ಅರ್ಥ ವ್ಯವಸ್ಥೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ ಎಂಬ ಹೆಗ್ಗಳಿಕೆಯನ್ನು ಹಾಗೆಯೇ ಉಳಿಸಿಕೊಂಡಿದೆ.
ನೋಟ್ ಅಮಾನ್ಯತೆಯಿಂದ ತೀರ ಸಕಾರಾತ್ಮಕ ಪರಿಣಾಮವಾಗಿಲ್ಲ ಎಂಬುದನ್ನು ಅಂಕಿ ಅಂಶಗಳು ಸಾಬೀತು ಪಡಿಸಿವೆ.