ಯಾವುದೇ ದಾಖಲೆಗಳು ಇಲ್ಲದೆ ಇಲ್ಲಿ ಉಚಿತವಾಗಿ ಪುಟ್ಟ ಗಾಲಿ ಮನೆ ನೀಡುತ್ತಿದ್ದಾರೆ; ಈ ಯೋಜನೆ ಯಾರಿಗೆ ಸಿಗುತ್ತೆ ನೋಡಿ..

0
390

ಬಡವರಿಗಾಗಿ ಕೆಲವೊಬ್ಬರು ವಯಕ್ತಿಕ ಸಹಾಯ ಮಾಡಲು ಮುಂದಾಗಿ ಸರ್ಕಾರವೆ ಯೋಚಿಸದ ಕೆಲವು ಮಹತ್ವದ ಯೋಜನೆಗಳನ್ನು ಹಾಕಿಕೊಂಡು ಸಮಾಜದಲ್ಲಿ ಕಡು ಬಡತನ ನಡೆಸುತ್ತಿರುವರಿಗೆ ಸಹಾಯ ಮಾಡುತ್ತಾರೆ. ಇದರಿಂದ ಸಮಾಜದಲ್ಲಿ ಹೆಮ್ಮೆಯ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾರೆ. ಇಂತಹ ಕೆಲಸಗಳನ್ನು ಸರ್ಕಾರವು ಕೂಡ ಪ್ರೋತ್ಸಾಹಿಸುತ್ತದೆ. ಅಂತಹ ಒಳ್ಳೆಯ ಕೆಲಸವನ್ನು ಮಾಡುವ ಯೋಜನೆಯನ್ನು ಹಾಕಿಕೊಂಡು ಸೂರು ಇಲ್ಲದೇ ಬೀದಿ ಬದಿ ಗುಡಿ ಗುಂಡಾರ ದಲ್ಲಿ ವಾಸ ಮಾಡುವ ನಿರ್ಗತಿಕರಿಗಾಗಿ ಗಾಲಿ ಇರುವ ಪುಟ್ಟ ಮನೆಗಳನ್ನು ನೀಡುತ್ತಿರುವ ಸಮಾಜದ ಖಾಳಜಿ ಹೇಗಿದೆ ನೋಡಿ.

Also read: ಮಾಜಿ ಪ್ರಧಾನಿ ರಾಜೀವ್ ಗಾಂಧಿ INS ವಿರಾಟ್ ಯುದ್ಧನೌಕೆಯನ್ನು ತಮ್ಮ ಖಾಸಗಿ ಟ್ಯಾಕ್ಸಿಯಂತೆ ಪ್ರವಾಸಕ್ಕೆ ಬಳಸಿದ್ದು ನೆಹರು ಕುಟುಂಬದವರು ಏನು ಮಾಡಿದ್ರು ನಡೆಯುತ್ತೆ ಅನ್ನೋ ದರ್ಪದಿಂದಾನಾ??

ಹೌದು ಬಡವರು, ನಿರ್ಗತಿಕರು ನೆಲೆ ಇಲ್ಲದವರು, ಸಮಾಜದಿಂದ ಸ್ವಲ್ಪ ದೂರವೇ ಉಳಿದು ದಿನಕ್ಕೊಂದು ಊರುಗಳಲ್ಲಿ ವಾಸಮಾಡುತ್ತ ಜೀವನ ಸಾಗಿಸುತ್ತಿರುವ ಜನರ ಜೀವನ, ಊಹಿಸಲು ಸಾದ್ಯ ವಾಗದಷ್ಟು ಕಷ್ಟದಿಂದ ಕೂಡಿರುತ್ತದೆ. ಇಂತಹವರನ್ನು ಕಂಡ ವಿಜಯಪುರದ ಶರಣ ಪಡೆ ಲಿಂಗಾಯತ ಜಾಗರಣ ವೇದಿಕೆಯಿಂದ ವಿಶಿಷ್ಟ ಕೊಡುಗೆ ನೀಡಲು ಮುಂದಾಗಿ ದುಡ್ಡು ಇಲ್ಲದ ನಿರ್ಗತಿಕರಿಗೆ ಉಚಿತವಾಗಿ ಗಾಲಿ ಮನೆಯನ್ನು ವಿತರಣೆ ಮಾಡುತ್ತಿದ್ದಾರೆ. ಅದಕ್ಕೆ ಟೈನಿ ಹೌಸ್ ಆನ್ ವ್ಹೀಲ್ ಎಂದು ಹೆಸರಿಟ್ಟಿದ್ದಾರೆ. ಈ ಮನೆ ಪಡೆಯಲು ಆಧಾರ ಕಾರ್ಡ್, ರೇಶನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್ ಬುಕ್, ಪಾನ್ ಕಾರ್ಡ್ ಯಾವುದೂ ಬೇಕಿಲ್ಲ. ‘ಗಾಲಿ ಮೇಲೆ ಮನೆಗೆ’ ಅರ್ಜಿ ಹಾಕಿಕೊಂಡರೆ ಸಾಕು. ಅವರು ನಿರ್ಗತಿಕರು ಇರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಮನೆ ಕೊಡುತ್ತಾರೆ.

ಹಾಗೆಯೇ ಈ ಕೊಡುಗೆ ಎಲ್ಲರಿಗೂ ಸಿಗುವುದಿಲ್ಲ. ಸೂರು ಇಲ್ಲದೇ ಬೀದಿ ಬದಿ ಗುಡಿ ಗುಂಡಾರದಲ್ಲಿ ವಾಸ ಮಾಡುವ ನಿರ್ಗತಿಕರು ಇಂತಹ ಮನೆ ಪಡೆಯಬಹುದಾಗಿದೆ. ಮುಖ್ಯವಾಗಿ ಇದನ್ನು ವಿಜಯಪುರದ ಕಲ್ಲಪ್ಪ ಕಡೇಚೂರ ಅವರು ಬಡ, ನಿರ್ಗತಿಕರಿಗೆ ಕಡಿಮೆ ದರದಲ್ಲಿ ಸೂರು ಒದಗಿಸಲು ಗಾಲಿ ಮೇಲೆ ಮನೆ ವಿತರಿಸುವ ಈ ವಿನೂತನ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಹಗುರವಾದ ತಗಡಿ(ಪತ್ರಾಸ)ನಿಂದ ನಿರ್ಮಿ ಸಿದ ಈ ಪುಟ್ಟ ಮನೆಗೆ ನೆಲಕ್ಕೆ ಹೊಂದಿಕೊಂಡಂತೆ ಕೆಳ ಬದಿಯಲ್ಲಿ 10 ಇಂಚು ಹೊಂದಿದ 2 ಗಾಲಿಯನ್ನು ಅಳವಡಿಸಲಾಗಿದೆ. ಈ ಮನೆ ಎತ್ತರ 15 ಅಡಿ. ಇರುತ್ತದೆ. ನೆಲೆಯಿಲ್ಲದವರು ಎಲ್ಲಿಗೆ ಬೇಕಾದರೂ ಎಳೆದುಕೊಂಡು ಹೋಗಬಹುದಾಗಿದೆ.

ಗಾಲಿ ಮನೆಯ ವಿಶೇಷತೆ ಏನು?

Also read: ದೇವೇಗೌಡರೇ ನನ್ನನ್ನು ಜೆಡಿಎಸ್ ಪಕ್ಷದಿಂದ ಹೊರಹಾಕಿದ್ರು; ನಾನೇ ಜೆಡಿಎಸ್​ನಿಂದ ಹೊರಬರಲಿಲ್ಲ, ಸತ್ಯ ಬಾಯಿಬಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ..

ಒಂದು ಮನೆ ನಿರ್ಮಾಣಕ್ಕೆ 20 ತಗಡು ಬಳಸಲಾಗಿದೆ. ಈ ಪೈಕಿ 6 ಅಡಿ 10 ತಗಡು, 5.5 ಅಡಿಯ 10 ತಗಡು ಅಳವಡಿಸಲಾಗಿದೆ. ಮನೆಯ ಒಳ ಬದಿ 6-8 ಅಡಿ ಅಳತೆಯ ಪ್ಲೈವುಡ್ ಹಾಸು ಇದೆ. 5.5 ಅಡಿ ಫೋಲ್ಡೇಬಲ್ ಬೆಡ್ ಕಂ ಕಾಟು ಸೌಲಭ್ಯವಿದೆ. ಮನೆಗೆ ಬಾಗಿಲು, ಕಿಟಕಿ ಅಳವಡಿಸಲಾಗಿದೆ. ಬಾಗಿಲ ಮೇಲ್ಭಾಗದಲ್ಲಿ ಒಳಬದಿಯಲ್ಲಿ ಅಟ್ಟ ಮಾಡಲಾಗಿದೆ. ಈ ಅಟ್ಟದಲ್ಲಿ ಸಾಮಗ್ರಿಗಳನ್ನು ಇಡಬಹುದು. ಈ ಮನೆಯಲ್ಲಿ ಇಬ್ಬರು ಆರಾಮವಾಗಿ ವಾಸಿಸಬಹುದಾಗಿದೆ. ಮಳೆಗೆ ಮನೆ ಸೋರದಂತೆ ಇನ್ಸುಲೇಟೆಡ್ ತಗಡು ಅಳವಡಿಸಲಾಗಿದೆ. ಹೀಗಾಗಿ ಈ ಮನೆಯಲ್ಲಿ ವಾಸಿಸುವವರಿಗೆ ಮಳೆ ತಾಗುವುದಿಲ್ಲ. ಅಡುಗೆ ಮಾಡಿಕೊಳ್ಳಲು ಅವಕಾಶವಿದೆ. ಈ ಮನೆಯ ಮುಂಭಾಗದಲ್ಲಿ ಟ್ರ್ಯಾಕ್ಟರ್ ಟ್ರಾಲಿ ರೂಪದಲ್ಲಿ ಹುಕ್ ಮಾಡಲಾಗಿದೆ. ಈ ಮನೆ ಕೆಳಬದಿಯಲ್ಲಿ ೨ ಗಾಲಿ ಅಳವಡಿಸಲಾಗಿದೆ. ಈ ಮನೆಯನ್ನು ಮತ್ತೊಂದು ಸ್ಥಳಕ್ಕೆ ಸಲೀಸಾಗಿ ಸಾಗಿಸಬಹುದಾಗಿದೆ.

ಈ ಮನೆಗೆ ಹಣವೆಷ್ಟು ನೀಡಬೇಕು?

ಸಂಪೂರ್ಣವಾಗಿ ತಗಡಿನಿಂದ ತಯಾರಿಸಿದ ಮನೆಯಾಗಿದ್ದು ಇದನ್ನು ತಯಾರಿಸಲು ರೂ 15 ರಿಂದ 20 ಸಾವಿರ ವೆಚ್ಚವಾಗುತ್ತದೆ. ಆದರೆ ಮನೆ ಪಡೆಯುವವರಿಗೆ ಉಚಿತ ಮನೆ ಎಂಬ ಭಾವನೆ ಬರಬಾರದು ಎಂಬ ಉದ್ದೇಶದಿಂದ ಮತ್ತು ಹಣ ನೀಡಿ ಮನೆ ಪಡೆದರೆ ಅದನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಎಂಬುವುದು ವಿತರಕರ ಅಭಿಪ್ರಾಯವಾಗಿದೆ. ಒಂದು ವೇಳೆ ದುಡ್ಡು ಇರದಿದ್ದರೂ ಉಚಿತವಾಗಿ ಮನೆ ವಿತರಿಸಲು ವೇದಿಕೆ ಮುಂದಾಗಿದೆ. ಒಟ್ಟಾರೆಯಾಗಿ ಇಂತಹ ಕೆಲಸಗಳು ಸಮಾಜದಲ್ಲಿ ಆಗಬೇಕಿದೆ. ಇದರಿಂದ ಬಡವರಿಗೆ ಮನೆಯಿಲ್ಲದವರಿಗೆ ಅಲ್ಪ ಮಟ್ಟಿನ ಜೀವನ ಮಾಡಲು ಎಷ್ಟೋ ನೆರವಾಗಿತ್ತೆ.