ದೇವೇಗೌಡರವರ ಕುಟುಂಬದ ಆಸ್ತಿ 2 ಎಕರೆ ಇದ್ದದ್ದು ಸಾವಿರಾರು ಎಕರೆ ಆಗಿದ್ದು ಭ್ರಷ್ಟಾಚಾರದಿಂದ : ಬಿ.ಜೆ.ಪಿ. ನಾಯಕರ ಗಂಭೀರ ಆರೋಪ…

0
415

ಬಡವನು ದಿಡಿರನೇ ಶ್ರೀಮಂತನಾಗಲು, ಅಂಗೈಅಷ್ಟು ಇರುವ ಆಸ್ತಿ ಆಕಾಶದಷ್ಟು ಬೆಳೆಯಲು, ಎಲೋ ಪರದೆಯಲ್ಲಿರುವನ್ನು ಪರದೇಶದ ವರೆಗೆ ಹೆಸರು ಮಾಡಲು ದೇವರು ಕೋಟ್ಟ ಒಂದು ಹುದ್ದೆ ಅಂದ್ರೆ ರಾಜಕೀಯ ಅನ್ಸುತ್ತೆ! ಈ ವಿಚಾರವಾಗಿ ನೀವೇ ಪರೀಕ್ಷಿಸಿ ನೋಡಿ, ರಾಜಕೀಯ ಬಿಟ್ಟು ಬೇರೆ ಯಾವುದೇ ಕೆಲಸದಿಂದ ಶ್ರೀಮಂತರಾಗಿ ಕೊನೆಗೆ ಬಿಕಾರಿಯಾದ ನಿದರ್ಶನಗಳು ತುಂಬಾನೆ ಇವೆ, ಆದ್ರೆ ರಾಜಕೀಯದಿಂದ ಶ್ರೀಮಂತರಾದವರು ಬಿಕಾರಿಯಾದ ಯಾವುದೇ ನಿದರ್ಶನಗಳು ಇಲ್ಲ. ಇವರ ಆಸ್ತಿ ವರ್ಷದಿಂದ ವರ್ಷಕ್ಕೆ ಸಾವಿರಾರು ಕೋಟಿಯಲ್ಲಿ ಬೆಳೆಯುತ್ತಾನೆ ಇರುತ್ತೆ ಇದಕೊಂದು ಅಪ್ಪಟ ಉದಾಹರಣೆ ಅಂದ್ರೆ ಎಚ್‍ಡಿ ದೇವೇಗೌಡರ ಕುಟುಂಬ.

ಹೌದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರ ಕುಟುಂಬದ ಮೂಲತ ಆಸ್ತಿ ಅಂದ್ರೆ ಎರಡೇ ಎರಡು ಎಕರೆ ಮೂರೇಮೂರು ಗುಂಟೆ ಜಮೀನು ಹೊಂದಿದ ಎಚ್ ಡಿ ಕುಟುಂಬ ಈಗ ಸಾವಿರಾರು ಎಕರೆ ಆಗಿದ್ದು ಹೇಗೆ ಎಂದು ವಿರೋಧ ಪಕ್ಷದ ಪ್ರಶ್ನೆಯಾಗಿದೆ. ಇದನ್ನು ಬಹಿರಂಗ ಪಡಿಸಬೇಕು ಎಂದು ಮಾತನಾಡಿದ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ಜೆಡಿಎಸ್ ಪಕ್ಷವನ್ನು ಹೇಗೆ ಕಟ್ಟಿದ್ದಾರೆ ಎಂಬುವುದನ್ನು ಪ್ರಜ್ವಲ್ ರೇವಣ್ಣ ಅವರೇ ಈ ಹಿಂದೆ ಬಹಿರಂಗ ಪಡಿಸಿದ್ದಾರೆ. 2 ಎಕರೆ 3 ಗುಂಟೆ ಜಮೀನು ಹೊಂದಿದ್ದ ಎಚ್‍ಡಿಡಿ ಕುಟುಂಬ ಇಂದು ಸಾವಿರಾರು ಎಕರೆ ಆಸ್ತಿ ಬಂದಿದ್ದು ಹೇಗೆ ಎಂಬುದನ್ನು ರೈತರಿಗೆ ಸಿಎಂ ಕುಮಾರಸ್ವಾಮಿ ಅವರು ತಿಳಿಸುವ ಅಗತ್ಯವಿದೆ. ಹಾಗೆಯೇ ಪ್ರಜ್ವಲ್ ರೇವಣ್ಣ ಅವರೇ ಹೇಳಿದಂತೆ ಜೆಡಿಎಸ್ ಸೂಟ್ ಕೇಸ್ ಪಾರ್ಟಿ ಎಂದು ಆರೋಪಿಸಿದರು.

ಈ ಎಲ್ಲ ವಿಷಯಗಳು ಬಂದಿರುವುದು ಸಿಎಂ ಕುಮಾರಸ್ವಾಮಿ ವಿರೋಧಪಕ್ಷದ ನಾಯಕ ಯಡಿಯೂರಪ್ಪ ಅವರ ವಿರುದ್ಧ ಇಂದು ಹೇಳಿಕೆ ನೀಡುತ್ತಿದ್ದಂತೆ ಬಿಜೆಪಿ ನಾಯಕರೂ ಕೂಡ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಹಳೆಯ ಕೇಸ್‍ಗಳನ್ನು ಮತ್ತೊಮ್ಮೆ ಕೆದಕಿ ವ್ಯಂಗ್ಯವಾಡಿದ ಬಿ.ಜೆ.ಪುಟ್ಟಸ್ವಾಮಿ ಭೂ ಕಬಳಿಕೆ ವಿಚಾರದಲ್ಲಿ ದೇವೇಗೌಡರು ಹಾಗೂ ಅವರ ಮಕ್ಕಳಿಗೆ ಪಿಎಚ್‌ಡಿ ನೀಡಬೇಕು. ಭೂ ರಹಿತರು ಎಂದು ಘೋಷಿಸಿಕೊಂಡು ಹಾಸನದಲ್ಲಿ ದೇವೇಗೌಡರು ಹಾಗೂ ಅವರ ಪತ್ನಿ ಚನ್ನಮ್ಮ ಭೂ ಮಂಜೂರು ಮಾಡಿಸಿಕೊಂಡು ಅದನ್ನು ರೇವಣ್ಣ ಅವರಿಗೆ ವರ್ಗಾಯಿಸಿದ್ದಾರೆ. ಮತ್ತು ಹಾಸನದ ಹೊಳೆನರಸಿಪುರದಲ್ಲಿ 82 ಎಕರೆ ಜಾಗವನ್ನು ನುಂಗಿ ರಾಮನಗರದ ಕೇತಗಾನಹಳ್ಳಿಯಲ್ಲಿ ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದ 46 ಎಕರೆ ಭೂಮಿ ಕಬಳಿಸಿದ್ದೀರಿ ಈ ಬಗ್ಗೆ ವಿಭಾಗೀಯ ಆಯುಕ್ತೆ ಶಾಂತಕುಮಾರಿ ನೀಡಿರುವ ವರದಿಯಲ್ಲಿ ಹಗಲು ದರೋಡೆ ನಡೆದಿರುವ ಉಲೇಖವಿದೆ ಎಂದು ಪುಟ್ಟಸ್ವಾಮಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಅಪಾದಿಸಿದ್ದಾರೆ.

ಇದೆ ಸಮಯದಲ್ಲಿ ಮಾತನಾಡಿದ ಮಾಜಿ ಸಚಿವ ಎ.ಮಂಜು, ಕುಮಾರಸ್ವಾಮಿ ವಿರುದ್ಧ ಈಗಾಗಲೇ ದಾಖಲಾಗಿರುವ ಭೂ ಹಗರಣದ ಪ್ರಕರಣಗಳ ಪಟ್ಟಿಯನ್ನು ಪ್ರದರ್ಶನ ಮಾಡಿ ”ಜಂತಕಲ್‌ ಮೈನಿಂಗ್‌ ಪ್ರಕರಣಕೆ ಸಂಬಂಧಪಟ್ಟ ಭೂಗತ ಪಾತಕಿ ವಿನೋದ್‌ ಗೋಯಲ್‌” ಜತೆಕುಮಾರಸ್ವಾಮಿಯವರು ನಂಟಸ್ತಿಕೆ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ರಾಜಕೀಯ ನಾಯಕರು ರಾಜ್ಯದ ಜನರಿಗೆ ಪಂಗನಾಮ ಹಾಕಿ ಮಾಡಿದ ಆಸ್ತಿಹಣದ ವಿವರ ಅವರವರ ಬಾಯಿಯಿಂದ ಹೊರ ಬಿಳುತ್ತಿರುವುದು ರಾಜ್ಯದ ಜನರಲ್ಲಿ ಪ್ರಶ್ನೆಗಳು ಮೂಡುತ್ತಿವೆ.