ದೇವೇಗೌಡರು ಒಕ್ಕಲಿಗ ಸಮುದಾಯಕ್ಕೆ ಏನೂ ಒಳಿತು ಮಾಡಿಲ್ಲ, ಬದಲಿಗೆ ಅವರು ಕೆಡುಕನ್ನೇ ಮಾಡಿದ್ದಾರೆ: ಚೆಲುವುನಾರಯಣಸ್ವಾಮಿ!! ಇದು ಒಪ್ಪುವಂಥ ಮಾತಾ??

1
517

ಎಚ್​​.ಡಿ.ದೇವೇಗೌಡ ಕರ್ನಾಟಕ ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ.. ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಗೌಡ್ರು, ಒಕ್ಕಲಿಗರು. ಅವರು ಒಕ್ಕಲಿಗ ಸಮುದಾಯಕ್ಕೆ ನೀಡಿದ ಕೊಡುಗೆ ಏನು ಎಂದು ಶಾಸಕ ಚೆಲುವುನಾರಯಣಸ್ವಾಮಿ ಪ್ರಶ್ನಿಸಿದ್ದಾರೆ.

ಶ್ರೀರಂಗಪಟ್ಟದಲ್ಲಿ ಮಾತನಾಡಿದ ಚೆಲುವನಾರಾಯಣಸ್ವಾಮಿ, ದೇವೇಗೌಡ ಒಕ್ಕಲಿಗರ ಮಠಕ್ಕೆ ಗೌರವದಿಂದ ನಡೆದುಕೊಂಡಿಲ್ಲ. 2004ರ ಚುನಾವಣೆ ವೇಳೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸಮಾಜದ ಸಮಾವೇಶವನ್ನು ನಡೆಸಿ, ದೇವೇಗೌಡರನ್ನು ಬೆಂಬಲಿಸಿದ್ದರು. ರಾಜಕೀಯವಾಗಿ ದೇವೇಗೌಡರು ಈ ಎತ್ತರಕ್ಕೆ ಬೆಳೆಯಲು ಮಠದ ಕಾಣಿಕೆ ಅಪಾರ. ಆದ್ರೆ, ಮಠಕ್ಕೆ ಗೌರವ ತರುವಂತೆ ನಡೆದುಕೊಳ್ಳಲಿಲ್ಲ ಎಂದು ಟೀಕಿಸಿದರು.

2004ರಲ್ಲಿ ಕಾಂಗ್ರೆಸ್​ ಬೆಂಬಲ ನೀಡಿದ್ದ ಜೆಡಿಎಸ್​ ಕೆಲವು ಶರತ್ತುಗಳನ್ನು ವಿಧಿಸಿತ್ತು. ಅದ್ರಂತೆ ಧರ್ಮಸಿಂಗ್​ರನ್ನು ಸಿಎಂ ಮಾಡಬೇಕು. ಅಲ್ಲದೆ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಗೆರೆ ಎಳೆದಿದ್ದರು. ಅಲ್ಲದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗರಾದ 7 ಜನ ಅಭ್ಯರ್ಥಿಗಳನ್ನು ಟಾರ್ಗೆಟ್​ ಮಾಡಲಾಗಿದೆ. ಅದ್ರಲ್ಲಿ ನಮ್ಮದೆ ಜಾತಿಯ ಮೂವರು ಜನರಿದ್ದಾರೆ. ನಮ್ಮ ಮೇಲೆ ಏಕೆ ಇಲ್ಲದ ಹಗೆ, ನಮಗು ಸಮಾಜದಲ್ಲಿ ಉತ್ತಮ ಬಾಳು ನಡೆಸುವ ಹಕ್ಕಿದೆ. ಜಿಲ್ಲೆಯಲ್ಲಿ ಸ್ಥಳೀಯ ನಾಯಕರು ಹುಟ್ಟ ಬಾರದು ಎಂಬುದೇ ಮಾಜಿ ಪ್ರಧಾನಿಗಳ ಉದ್ದೇಶ. ನಾನು ಜಾತಿ ಹಾಗೂ ರಾಜಕಾರಣವನ್ನು ಎಂದಿಗೂ ಒಂದು ಮಾಡಿಲ್ಲ. ಮಠದ ಏಳಿಗೆಗೆ ನಾನು ಕೈಲಾದ ಸಹಾಯ ಮಾಡುತ್ತೇನೆ ಎಂದು ತಿಳಿಸಿದ್ರು. ಒಕ್ಕಲಿಗರೇ ಹೆಚ್ಚಿರುವ ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡರ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಸೋಲಿಗೆ ಕಾರಣರಾದಿರಿ. ಬಚ್ಚೇಗೌಡರು ನಿಮಗೆ ಮಾಡಿದ ದ್ರೋಹವೇನು ಎಂದು ಪ್ರಶ್ನಿಸಿದರು.