ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ನ.13 ರಂದು ಆರಂಭ…!!

0
971

ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಇಲ್ಲಿ ನೋಡಿದರಲೂ ವಿದ್ಯುತ್ ದೀಪಗಳಿಂದ  ಕಂಗೊಳಿಸುತ್ತಿತ್ತು. ಕ್ಷೇತ್ರ ಸೇರಿದಂತೆ ಪರಿಸರವೆಲ್ಲ ಬಣ್ಣ ಬಣ್ಣದಿಂದ ಪ್ರಕಾಶಮಾನವಾಗಿತ್ತು. ಮಂಜುನಾಥನಿಗೆ ಅತಿ ಪ್ರೀಯವಾದ ಲಕ್ಷದೀಪೋತ್ಸವವಕ್ಕೆ ಚಾಲನೆ ದೊರೆತಿದ್ದು ನ. 13 ರಿಂದ 17ರ ವರೆಗೆ ನಡೆಯಲಿದ್ದು ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನದ 85ನೇ ಅಧಿವೇಶನ ನ. 16 ಮತ್ತು 17 ರಂದು ನಡೆಯಲಿದೆ. ಐದು ದಿನಗಳ ಕಾಲ ಅದ್ದೂರಿ ದೀಪೋತ್ಸವ. ಬನ್ನಿ ಸಂಭ್ರಮದಲ್ಲಿ ಪಾಲ್ಗೊಳ್ಳೋಣ.

ನವಂಬರ್ ತಿಂಗಳು ಕಾರ್ತಿಕ ಮಾಸದಲ್ಲಿ 5 ದಿನಗಳ ಕಾಲ  ದೀಪಾವಳಿ ಬೆಳಕಿನ ಹಬ್ಬ  ನಮ್ಮ ದೇಶದಲ್ಲಿ ತುಂಬ ಮಹತ್ವದ ಆಚರಣೆ. ದಕ್ಷಿಣ ಭಾಗದಲ್ಲಿ ಈ ಹಬ್ಬವನ್ನು ಇನ್ನು ವಿಶೇಷವಾಗಿ ಆಚರಿಸುತ್ತೇವೆ. ಕರ್ನಾಟಕದ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿವರ್ಷ ನಡೆಯುವ ಲಕ್ಷದೀಪೋತ್ಸವವಂತೂ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವರ್ಷಂಪ್ರತಿ ನಡೆಯುವ ಲಕ್ಷದೀಪೋತ್ಸವ ಈ ಬಾರಿಯೂ ಅದ್ದೂರಿಯಾಗಿ ನಡೆಯಲಿದೆ. ಮಂಜುನಾಥನಿಗೆ ಅತಿ ಪ್ರಿಯವಾದ ಈ ದೀಪೋತ್ಸವಕ್ಕೆ ಹಿಂದಿನ ಕಾಲದಲ್ಲಿ ಮಂಜುನಾಥನ ಸನ್ನಿಧಿಯ ಸುತ್ತಲೂ ಒಂದು ಲಕ್ಷದೀಪಗಳನ್ನು (ಮಣ್ಣಿನ ಹಣತೆಗಳನ್ನು) ಉರಿಸಿತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ದೀಪಗಳಿಂದಲೇ ದೇವಾಲಯವನ್ನು ಶೃಂಗರಿಸಲಾಗುತ್ತದೆ. ಹೀಗಾಗಿ ಧರ್ಮಸ್ಥಳ ಮಂಜುನಾಥನ ಸನ್ನಿಧಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ.

ಲಕ್ಷ ದೀಪೋತ್ಸವದಂದು ಕ್ಷೇತ್ರದ ದೇವರಾದ ಮಂಜುನಾಥ ಈ ಸಂದರ್ಭದಲ್ಲಿ ಕ್ಷೇತ್ರದಿಂದ ಹೊರಗೆ ಸಂಚರಿಸುತ್ತಾರೆ. ವಿವಿಧ ಪ್ರದೇಶಗಳಿಂದ ಮಂಜುನಾಥನ ಮೂರ್ತಿಯೊಂದಿಗೆ ಮೆರವಣಿಗೆ ಸಾಗಿ ಪ್ರಮುಖ ಐದು ಕಟ್ಟೆಗಳ್ಳಿ ವಿಶೇಷ ಪೂಜೆ ಪಡೆಯುತ್ತಾರೆ. ದೀಪೋತ್ಸವದ ಪ್ರಯುಕ್ತ ಬೆಳ್ಳಿಯ ರಥೋತ್ಸವವೂ ಈ ಸಂಧರ್ಭ ಅದ್ದೂರಿಯಾಗಿ ನಡೆಯಿಲಿದೆ. ದೇಶ ವಿದೇಶಗಳಿಂದ ಆಗಮಿಸಲಿರುವ ಲಕ್ಷಾಂತರ ಮಂದಿ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥತಿಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲಿವೆ. ಎಲ್ಲಾದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಕಾರ್ಯಕ್ರಮಗಳ ವಿವರ

ಧಾರ್ಮಿಕ ಕಾರ್ಯಕ್ರಮವಾಗಿ ನ. 13 ರಿಂದ 17ರ ವರೆಗೆ ಶ್ರೀಮಂಜುನಾಥ ಸ್ವಾಮಿಯ ಉತ್ಸವ ಪ್ರತಿದಿನ ರಾತ್ರಿ 9 ಗಂಟೆಯ ನಂತರ ನಡೆಯಲಿದೆ. ನ. 18 ರಂದು ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ. ನ. 13 ರಂದು ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 6 ರಿಂದ ಜಾದೂ ಪ್ರದರ್ಶನ, ಬಳಿಕ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ದೇವರದ ಉತ್ಸವದ ಅಂಗವಾಗಿ ಹೊಸಕಟ್ಟೆ ಉತ್ಸವ ನಡೆಯಲಿದೆ. ನ. 14 ರಂದು ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 5-30 ರಿಂದ ಜಾದೂ ಮತ್ತು ವೈವಿಧ್ಯಮಯ ಕಾರ್ಯಕ್ರಮ, ಬಳಿಕ ರಸಮಂಜರಿ ಕಾರ್ಯಕ್ರಮ ನಂತರ ನಿಮ್‌ಗೊತ್ತ ಎಂಬ ಹಾಸ್ಯಮಯ ನಾಟಕ ನಡೆಯಲಿದೆ. ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಲಿದೆ.