ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳದೇ ಧರ್ಮಸ್ಥಳಕ್ಕೆ ಹೋದರೆ, ನಿಮಗೆ ಪ್ರವೇಶವಿಲ್ಲ!!

0
1003

ಕರ್ನಾಟಕದ ಜನರ ನೆಚ್ಚಿನ ಪ್ರವಾಸಿ ಸ್ಥಳ ಹಾಗೂ ಆರಾಧ್ಯ ದೈವಗಳಲ್ಲಿ ಒಂದು ಧರ್ಮಸ್ಥಳ ಮಂಜುನಾಥ್​. ದೇವರ ಕಷ್ಟಗಳನ್ನು ದೂರ ಮಾಡಿ ಸುಖಃ ಶಾಂತಿಯನ್ನು ನೀಡಿ ಉದ್ಧರಿಸುವ ಕರುಣಾಮಯಿ.

ನೇತ್ರಾವತಿ ನದಿಯ ದಡದಲ್ಲಿ ನೆಲೆಸಿರವು, ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೆ 8 ಶತಮಾನಗಳ ಇತಿಹಾಸವಿದೆ. . ಮಂಜುನಾಥ ಸ್ವಾಮಿಯ ವಿಗ್ರಹವನ್ನು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಯತಿಗಳಾಗಿದ್ದ ಶ್ರೀ ವಾದಿರಾಜರು ಸ್ವತಃ ತಂದು ಪ್ರತಿಷ್ಠಾಪಿಸಿದ್ದರು. ಧರ್ಮಸ್ಥಳ ದಾನ ಧರ್ಮಕ್ಕೆ ಪ್ರಸಿದ್ಧವಾಗಿರುವುದಲ್ಲದೆ, ಭಕ್ತರಿಗೆ ನೈತಿಕ – ಸಾಂಸ್ಕೃತಿಕ ಕೇಂದ್ರವಾಗಿಯೂ ಆಕರ್ಷಿಸುತ್ತದೆ.

ಧರ್ಮಸ್ಥಳವನ್ನು “ಕುಡುಮ” ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ದಾನ ಧರ್ಮಗಳಿಗೆ ಹೆಸರಾಗಿದ್ದ ಕುಡುಮ ಕ್ಷೇತ್ರಕ್ಕೆ ವಾದಿರಾಜರು ಭೇಟಿ ನೀಡಲು ಒಪ್ಪಿದರು. ಆದ್ರೆ ಶ್ರೀ ಕ್ಷೇತ್ರದಲ್ಲಿ ಪ್ರಸಾದವನ್ನು ಸ್ವೀಕರಿಸಲಿಲ್ಲ. ವಾದಿರಾಜರು ದೇವಾಲಯದ ಶಿವಲಂಗ ವೈದಿಕ ಸಂಪ್ರದಾಯದಂತೆ ಪ್ರತಿಷ್ಠಾಪಿಸಲಿಲ್ಲ ಎಂದು ಅಭಿಪ್ರಾಯಿಸಿದ್ರು. ಇದಕ್ಕೆ ದೇವಸ್ಥಾನ ಆಡಳಿತ ಮಂಡಳಿ ಗುರುಗಳಿಗೆ ಲಿಂಗವನ್ನು ಸ್ಥಾಪನೆ ಮಾಡುವಂತೆ ಕೇಳಿಕೊಂಡಿತು. ಅದ್ರಂತೆ ಈ ಕ್ಷೇತ್ರಕ್ಕೆ ಧರ್ಮಸ್ಥಳ ಎಂದು ನಾಮಕರಣ ಮಾಡಿದ್ರು.

ಈ ದೇವರು ಸುಳ್ಳನ್ನು ಸಹಿಸನು ಎಂಬ ಪ್ರತೀತ ನಮ್ಮ ರಾಜ್ಯದ ಭಕ್ತರಲ್ಲಿ ಆಳವಾಗಿ ಬೇರೂರಿದೆ. ಹೀಗಾಗಿ ಏನೇ ತಪ್ಪು ಕೆಲಸ ಮಾಡಿದ್ರೆ, ಆಣೆಗೆ ಮಂಜುನಾಥನ ಆಣೆ ಹಾಕುತ್ತಾರೆ. ಇದೆಲ್ಲಾ ನಿಮಗೆ ಗೊತ್ತಿರುವ ವಿಚಾರವೇ ಆದ್ರೆ ಧರ್ಮಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅವರಿಗೆ ಹಲವು ಸೂಚನೆಗಳನ್ನು ಈಗಾಗಲೇ ಆಡಳಿತ ಮಂಡಳಿ ತಿಳಿಸಿದೆ. ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.

ನೀವು ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೋಗ ಬೇಕಾದ್ರೆ, ಇನ್ನು ಮುಂದೆ ಈ ನಿಯಮವನ್ನು ಪಾಲಿಸಲೇ ಬೇಕು. ಇಲ್ಲದಿದ್ದರೆ, ನಿಮಗೆ ದರ್ಶನ ಸಿಗದು. ಹೌದು.. ಆಡಳಿತ ಮಂಡಳಿ ದೇವರ ದರ್ಶನಕ್ಕೆ ಬರುವ ಭಕ್ತರು ಕಪ್ಪು ಬಣ್ಣದ ವಸ್ತ್ರವನ್ನು ಧರಿಸುವಂತಿಲ್ಲ ಎಂದು ತಿಳಿಸಿದೆ. ಒಂದು ವೇಳೆ ಧರಿಸಿದ್ರೆ ಒಳಗೆ ಪ್ರವೇಶ ನಿರಾಕರಿಸಲಿದೆ. ಅಲ್ಲದೆ ದರ್ಶನ ಪಡೆಯುವಾಗ ಶೆರ್ಟ್​​ ಬನಿಯನ್​ ತೆಗೆಯುವುದ ಖಡ್ಡಾಯ.