ಧಾರವಾಡ ವಾಣಿಜ್ಯ ಮಳಿಗೆ ಕುಸಿತ ಸಾವಿನ ಸಂಖ್ಯೆ 11 ಕ್ಕೆ ಏರಿಕೆ; ಇನ್ನೂ 15 ವಿದ್ಯಾರ್ಥಿನಿಯರು ಸೇರಿ 20 ಕ್ಕೂ ಹೆಚ್ಚು ಜನರು ಸಿಲುಕಿರುವ ಮಾಹಿತಿ ಲಭ್ಯ..

0
305

ಧಾರವಾಡ ನಾಲ್ಕು ಅಂತಸ್ಥಿನ ವಾಣಿಜ್ಯ ಕಟ್ಟಡವೊಂದು ನೆಲಸವಾಗಿದ್ದ ಸುದ್ದಿ ಹರಿದಾಡುತ್ತಿದೆ. ಇನ್ನೂ ಈ ಕಟ್ಟಡ ನಿರ್ಮಾಣದ ಹಂತದಲ್ಲಿತ್ತು. ಮಂಗಳವಾರ ಸಂಪೂರ್ಣ ಕಟ್ಟಡ ಕುಸಿದಿದೆ. ಇದರ ಪರಿಣಾಮವಾಗಿ ಸುಮಾರು 11 ಜನರು ಮೃತಪಟ್ಟಿದ್ದು, 67 ಜನರನ್ನು ರಕ್ಷಿಸಲಾಗಿದೆ. ಇನ್ನೂ ಕಟ್ಟಡ ಕೆಳಗೆ 20 ಕ್ಕೂ ಹೆಚ್ಚು ಜನರು ಇರುವ ಮಾಹಿತಿ ಲಭ್ಯವಾಗಿದ್ದು. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ. ಘಟನೆಗೆ ಪ್ರಮುಖ್ಯ ಕಾರಣ ಕಟ್ಟಡ ಪಿಲ್ಲರ್ ಬಿರುಕು ಬಿಟ್ಟಿತ್ತು, ಅದನ್ನು ಸರಿಪಡಿಸಲು ಸಪೋರ್ಟ್ ಪಿಲ್ಲರ್ ಕಟ್ಟಲಾಗುತಿತ್ತು ಅದಕ್ಕಾಗಿ ಬಿರುಕು ಕಟ್ಟಡದ ಮಗ್ಗಲಲ್ಲಿ ಗುಂಡಿ ತೊಡಲಾಗಿತ್ತು ಇದೆ ಈ ಘಟನೆಗೆ ಕಾರಣ ಎಂದು ತಿಳಿದಿದೆ.

Also read: ಹೋಟೆಲ್ ಬಿಲ್ ಪಾವತಿಸದೇ ಎಸ್ಕೇಪ್ ಆದ ಮುಂಗಾರುಮಳೆ ಪೂಜಾ ಗಾಂಧಿಯ ವಿರುದ್ದ ಪೊಲೀಸ್ ಕೇಸ್..

ಹೌದು ಜೀವನ ಕಟ್ಟಿಕೊಳ್ಳಲು ಸಾಲ-ಸೂಲ ಮಾಡಿ ಮಳಿಗೆಯನ್ನು ಖರಿಧಿಸಿ ಅಥವಾ ಬಾಡಿಗೆ ಪಡೆದು ವ್ಯಾಪಾರ ಮಾಡುತ್ತಿದ್ದ ಜನ ಸಾಮಾನ್ಯರು ಕಳೆಪೆ ಕಾಮಗಾರಿಯಿಂದ ನಿರ್ಮಾಣವಾದ ಕಾಂಪ್ಲೆಕ್ಸ್ ನಲ್ಲಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನೂ 48 ಘಂಟೆಗಳಿಂದ ರಕ್ಷಣಾ ಕಾರ್ಯ ನಡೆಯುತಿದ್ದು. ಅವಶೇಷಗಳಡಿ ಇದ್ದ ಮೂರು ಶವಗಳನ್ನು ಇಂದು ಮಧ್ಯಾಹ್ನ ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದರು. ಈಗ ಎನ್​​ಡಿಆರ್​​ಎಫ್​ ಸಿಬ್ಬಂದಿ ಮತ್ತೊಂದು ಶವವನ್ನು ಹೊರತೆಗೆದಿದ್ದಾರೆ. ಮೃತ ವ್ಯಕ್ತಿಯನ್ನು ಜಹಾಂಗಿರಬಾಶಾ ಹರಿಹರ(31) ಎಂದು ಗುರುತಿಸಲಾಗಿದೆ.

ಈ ವೇಳೆ ಕಾಮಗಾರಿಯಲ್ಲಿ ತೊಡಗಿದ್ದ ಸಾಕಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದರು. ಕಾರ್ಯಾಚರಣೆ ಸದ್ಯ ಪ್ರಗತಿಯಲ್ಲಿದ್ದು, ಇಂದು ಮಗು, ಓರ್ವ ಮಹಿಳೆ, ಪುರುಷನ ಶವ ಹೊರತೆಗೆಯಲಾಗಿದೆ. ಇನ್ನೂ ಸಹ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನಷ್ಟು ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ಅದರಲ್ಲಿ ಉತ್ತರ ಕರ್ನಾಟಕ ಭಾಗದ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕೂಡ ಸಿಲುಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು. ಪ್ರತ್ಯಕ್ಷದರ್ಶಿಯೊಬ್ಬರು ಕೂಗು ಕೇಳಿರುವುದಾಗಿ ತಿಳಿಸಿದ್ದಾರೆ. ಅಲ್ಲಿಯೇ ಹೆಣ್ಣುಮಕ್ಕಳ ಪಿಜಿಯೂ ಕೂಡ ಇತ್ತು ಎನ್ನಲಾಗುತ್ತಿದೆ.

Also read: ಮನೆ ಮಕ್ಕಳಾಗಿ ಸುಮಲತಾ ಬೆಂಬಲಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ನಟರು; ಅಂಬಿ ಅಣ್ಣನ ಮೇಲಿನ ಅಭಿಮಾನದ ಎದುರು ನಿಖಿಲ್-ಗೆ ಗೆಲ್ಲೋಕ್ಕಾಗುತ್ತಾ??

ಪ್ರಮುಖ್ಯ ಆರೋಪಿ ಬಂಧನ

ಪ್ರಕರಣದ ಸಂಬಂಧ ಒಟ್ಟು 6 ಜನರ ವಿರುದ್ಧ ಕೇಸ್​ ದಾಖಲಾಗಿತ್ತು. ಕಟ್ಟಡ ಕುಸಿದ ನಂತರ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದರು. ಪೊಲೀಸರು ವಿಶೇಷ ತಂಡ ರಚಿಸಿ. ಇಂದು ಮಾಜಿ ಸಚಿವ ವಿನಯ ಕುಲಕರ್ಣಿಯ ಮಾವ ಗಂಗಣ್ಣ ಶಿಂತ್ರಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ರವಿ ಸಬರದ, ಬಸವರಾಜ ನಿಗದಿ, ಮಹಾಬಲೇಶ್ವರ ಕುರಬಗುಡ್ಡಿ, ರಾಜು ಘಾಟಿ ಇನ್ನೂ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕಟ್ಟಡ ಕುಸಿತದ ಮುನ್ಸೂಚನೆ ಸಿಕ್ಕಿತ್ತೇ?

Also read: ಒಂದೇ ತಿಂಗಳಲ್ಲಿ 2 ಬಾರಿ ಸಂಚಾರ ನಿಯಮ ಉಲ್ಲಂಘಿಸಿ ಎಚ್ ಡಿ ಕುಮಾರಸ್ವಾಮಿ ಕಾರಿಗೆ ನೋಟಿಸ್; ನಿಯಮ ಉಲ್ಲಂಘಿಸಿದರೂ ದಂಡ ಕಟ್ಟದ ಮುಖ್ಯಮಂತ್ರಿಗಳು..

ಈ ಕಟ್ಟಡವನ್ನು ನಿರ್ಮಿಸುವಾಗ ಪಿಲ್ಲರ್​ಗಳನ್ನು ಸದೃಢವಾಗಿ ಹಾಕಿರಲಿಲ್ಲ. ಪಿಲ್ಲರ್​ಗಳ ಸಾಮರ್ಥ್ಯ ಕಡಿಮೆ ಇದ್ದ ಕಾರಣ ಕಟ್ಟಡ ಕುಸಿಯುವ ಒಂದು ವಾರ ಹಿಂದಿನಿಂದ ಪಿಲ್ಲರ್​ ಸುತ್ತ ಗುಂಡಿ ತೆಗೆದು ಪಿಲ್ಲರ್​ಗೆ ಹೆಚ್ಚುವರಿ ಸ್ಟೀಲ್​ ಜೋಡಿಸಿ ಅದರ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೆ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದಲ್ಲಿ ಒಂದು ಕಂಪ್ಯೂಟರ್ ಸೆಂಟರ್ ಇತ್ತು. ಇಲ್ಲಿ ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಅವಷೇಶದಡಿ ಸಿಲುಕಿದವರಿಗೆ ನಿರಂತರವಾಗಿ ಪೈಪ್ ಮುಖಾಂತರ ನೀರು ಮತ್ತು ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸಂಸದ ಪ್ರಹ್ಲಾದ್​ ಜೋಶಿ ಭೇಟಿ

ಕಟ್ಟಡ ನಿರ್ಮಾಣಕ್ಕೆ ಕಳಪೆ ಸಾಮಗ್ರಿ ಬಳಸಿದ್ದಾರೆ. ಹಣದ ಆಸೆಗೆ ಹೆಚ್ಚು ಅಂತಸ್ತಿನ ಕಟ್ಟಡ ಕಟ್ಟಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಕಾಣದ ಕೈಗಳ ಕೈವಾಡವಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಕೊಡಿ ಎಂದು ಪ್ರಹ್ಲಾದ್​ ಜೋಶಿ ಆಗ್ರಹ ಮಾಡಿದ್ದಾರೆ. ಇದೆ ವೇಳೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಂಜಿನಿಯರ್​ಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಿ. ಯಾರ ಒತ್ತಡಕ್ಕೂ ಮಣಿಯದಂತೆ ಕ್ರಮ ಕೈಗೊಳ್ಳಬೇಕು. ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂದು ಆಗ್ರಹಿಸಿದ್ದಾರೆ.