ಇವರು ತಮ್ಮ 15 ಲಕ್ಷದ ಸಾಲವನ್ನೂ ತೀರಿಸಿ 20 ಕೋಟಿ ವಹಿವಾಟಿನ ಸಂಸ್ಥೆ ಕಟ್ಟಿದ್ದು, ವಡಾ-ಪಾವ್ ಮಾರಾಟದಿಂದ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!!!

0
1874

ಸಂಜೆಗೊಂದಿಷ್ಟು ರುಚಿಕಟ್ಟಾದ ಸ್ನಾಕ್ಸ್, ಬಾಯಿಚಪಲ ತೀರಿಸುವ ತಿಂಡಿ ಅಂತ ನೆನೆಸಿಕೊಂಡರೆ ಮೊದಲಿಗೆ ನೆನಪಿಗೆ ಬರೋದು ವಡಾಪಾವ್. ಅಪ್ಪಟ ಮಹಾರಾಷ್ಟ್ರದ ಈ ತಿನಿಸು, ನಮ್ಮ ದೇಶಕ್ಕೆ ಬರ್ಗರ್‌ ಕಾಲಿಡುವ ಮುಂಚೆಯೇ ಅಭ್ಯಾಸದಲ್ಲಿದೆ. ಬೆಳಗ್ಗೆ ತಿಂದರೆ ಉಪಹಾರ, ಮಧ್ಯಾಹ್ನ ತಿಂದರೆ ಹೊಟ್ಟೆ ತುಂಬಿಸುವ, ಶಕ್ತಿ ನೀಡುವ ಊಟ, ಸಂಜೆ ಚಹಾದ ಜೊತೆಗೆ ಸೇವಿಸಿದರಂತೂ ಅತಿ ಸೊಗಸಿನ ಜೊತೆ ತಿನಿಸು. ಅಲ್ಲಿ ಕಳೆದ 14 ವರ್ಷಗಳಿಂದಲೂ ವಡಾಪಾವ್ ದಿನಾಚರಿಸಲಾಗುತ್ತಿದೆ. ಇದರ ಹಿಂದೆ ಜಂಬೋಕಿಂಗ್ ಯಶಸ್ಸಿನ ಕಥೆ ಇದೆ.

source: MensXP.com

ಇದೀಗ ದೇಶದಲ್ಲಿ ಅಂದಾಜು 70 ಔಟ್‌ಲೆಟ್‌ಗಳಿವೆ. ಬಿಸಿಬಿಸಿ ವಡಾಪಾವ್‌, ಕಿಂಗ್‌ ವಡಾಪಾವ್‌, ಮಸಾಲಾ ವಡಾಪಾವ್‌ ಮಾರಾಟ ಮಾಡುತ್ತಿವೆ. ಎಲ್ಲೇ ಹೋದ್ರೂ ಒಂದೇ ತೆರನಾದ ರುಚಿ. ಗುಣಮಟ್ಟ ಮತ್ತು ಒಂದೇ ಅಳತೆಯ ವಡಾಪಾವ್‌ ಸಿಗುತ್ತವೆ. ಜಂಬೋಕಿಂಗ್ ಅನ್ನು ಸ್ಥಾಪಿಸಿದವರು ಧೀರಜ್ ಗುಪ್ತಾ. ಮೂಲತಃ ಉದ್ಯಮಿಗಳ ಕುಟುಂಬವೊಂದರಲ್ಲಿ ಜನಿಸಿದ ಧೀರಜ್ ಗುಪ್ತ ಕುಟುಂಬವು ಹೊಟೇಲ್, ಕ್ಯಾಟರಿಂಗ್, ಸ್ವೀಟ್ ಮಳಿಗೆಗಳು ಹೀಗೆ ಆಹಾರಕ್ಕೆ ಸಂಬಂಧಪಟ್ಟ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

source: theweekendleader.com

ಪುಣೆಯಲ್ಲಿ ಸಿಂಬ್ಯೋಸಿಸ್​​ನಲ್ಲಿ ಎಂಬಿಎ ಮುಗಿಸಿದಾಗ ಗೆಳೆಯರಿಗೆಲ್ಲಾ ದೊಡ್ಡ ದೊಡ್ಡ ಕೆಲಸ ಕೈತುಂಬಾ ಸಂಬಳ ಸಿಕ್ಕಿತ್ತು. ಅವರು ಗುಪ್ತಾರನ್ನು ನೋಡಿ ನಗುತ್ತಿದ್ದರಂತೆ ಮತ್ತು ಬೀದಿ ವ್ಯಾಪಾರ ಮಾಡಲು ಎಂಬಿಎ ಮಾಡಿದ್ದಿಯ ಅಂತ ಹಿಯಲಿಸುತ್ತಿದ್ದರು. ಅಷ್ಟೆಲ್ಲ ಮಾತುಗಳನ್ನು ಕೇಳಿದರು ತಾಳ್ಮೆಯಿಂದ ಇರುತ್ತಿದ್ದರು. ನಂತರ ಅವರು ನೇರ ಆಹಾರೋದ್ಯಮಕ್ಕೆ ಧುಮುಕಿದರು. ದುಬೈನಂತಹ ಭಾರತೀಯರ ಸಂಖ್ಯೆ ಹೆಚ್ಚಿರುವ ನಗರಗಳಿಗೆ ಸ್ವೀಟ್​​ಗಳನ್ನು ರಫ್ತು ಮಾಡಲು ಆರಂಭಿಸಿದರು. ಅಂದು 15 ಲಕ್ಷ ಸಾಲ ಮಾಡಿ ಸಣ್ಣ ಸಿಹಿ ತಯಾರಿಕೆ ಘಟಕವನ್ನು ಪ್ರಾರಂಭಿಸಿದರು. ಅವರು ಶುರು ಮಾಡಿರುವ ಮಳಿಗೆ ಇದ್ದ ಜಗದಲ್ಲಿ ಅಷ್ಟು ವ್ಯಾಪಾರ ವಗುತ್ತಿರಲಿಲ್ಲ, ಇದರಿಂದಾಗಿ ಅವರಿಗೆ ತುಂಬಾ ನಷ್ಟ ಅನುಭವಿಸಿ ತಮ್ಮ ಉದ್ಯಮಕ್ಕೆ ಶಟರ್ ಎಳೆದರು. ಉದ್ಯಮಿಗಳ ಕುಟುಂಬದಿಂದ ಬಂದು, ಅದರಲ್ಲೂ ಬ್ಯುಸಿನೆಸ್ ಸ್ಕೂಲ್ ಪದವೀಧರನಿಗೆ ಹಾದಿ ಬೀದಿಯಲ್ಲಿ ಕೆಲಸ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಅಷ್ಟಾದರೂ ಗುಪ್ತ ಅವರು ಹೆದರಲಿಲ್ಲ. ಮೊದಲು ಮುಂಬೈ ಉಪನಗರ ಮತ್ತು ಮಲಾದ್ ಗಳಲ್ಲಿ ಚಾಟ್ ಫ್ಯಾಕ್ಟರಿ ಹೆಸರಿನಲ್ಲಿ ಸ್ಟ್ರೀಟ್ ಫುಡ್ ಸೆಂಟರ್ ಆರಂಭಿಸಿದರು ಅದು ಅವರನ್ನು ಕೈ ಬಿಡಲಿಲ್ಲ. ಅಲ್ಲಿ ಅವರಿಗೆ ತಿಳಿದು ಬಂದಿದ್ದು ಏನೆಂದರೆ ಅವರ ಚಾಟ್ ಫ್ಯಾಕ್ಟರಿ ನಲ್ಲಿ ಬಹು ಬೇಡಿಕೆ ವಡಾಪಾವ್ ಆಗಿತ್ತು ಇದನ್ನು ಅರಿತ ಗುಪ್ತ ವಡಾಪಾವ್ ಮೇಲೆಯೇ ಕೆಲಸ ಆರಂಭಿಸಿದರು. ಹಾಗೆ ಜಂಬೋ ಕಿಂಗ್ ಆರಂಭವಾಯಿತು.

source: yourstory.com

2001ರಲ್ಲಿ ಜಂಬೋಕಿಂಗ್​​ನ ಮೊದಲ ಔಟ್ಲೆಟ್ ಅನ್ನು ಆರಂಭಿಸಿದರು. ಮೊದಲು 2 ರೂಪಾಯಿ ದರದಲ್ಲಿ ಮಾರಿದರು ನಂತರ ಪ್ರೀಮಿಯಂ ದರವನ್ನು 5 ರೂಪಾಯಿಗೆ ನಿಗದಿಪಡಿಸಿದದರು. ಹೀಗೆ ತುಂಬಾ ಸ್ವಚ್ಛ ವಾದ ಮತ್ತು ರುಚಿಕರವಾದ ವಡಾಪಾವ್ ತಿನ್ನಲು ಜನರು ಬರಲಾರಂಭಿಸಿದರು. ತದನಂತರ ಬೇರೆ ಬೇರೆ ಫ್ಲೇವರ್​​ಗಳನ್ನು ಪರಿಚಯಿಸಿದರು. ಚೀಸ್ ವಡಾಪಾವ್, ಬಟರ್ ವಡಾಪಾವ್, ಶೇಜ್ವಾನ್ ವಡಾಪಾವ್ ಹೀಗೆ ವೈವಿಧ್ಯಮಯವಾಗಿ ಮತ್ತು ಬಲು ರುಚಿಕರವಾದ ತಿನಿಸಿಗಳನ್ನು ಕೊಡಲಾರಂಭಿಸಿದರು ಇದರಿಂದ ವ್ಯಾಪಾರವು ಸ್ಥಿರವಾಗಿ ಅಭಿವೃದ್ಧಿಯಾಯಿತು.

source: blogbrasilcomz.com

ಅಷ್ಟಕ್ಕೇ ಸುಮ್ಮನಾಗದ ಗುಪ್ತ ಅವರು ಹೊಸ ಹೊಸ ವಿಚಾರಗಳನ್ನು ತಮ್ಮ ಜಂಬೋಕಿಂಗ್ ನಲ್ಲಿ ಅಳವಡಿಸಲು ಪ್ರಾರಂಭಿಸಿದರು. ಮೊದಲು ಭಾರೀ ಪ್ರಮಾಣದಲ್ಲಿ ಜನರ ಓಡಾಟ ಇರುವ ರೈಲ್ವೇ ನಿಲ್ದಾಣಗಳ ಬಳಿ 200-300 ಚದರ ಅಡಿ ಜಾಗದಲ್ಲಿ ಮಳಿಗೆಗಳನ್ನು ನಡೆಸಿದರು. ಅಲ್ಲಿ ಸಿಗುವ ರೆಡಿಮೇಡ್ ವಡಾಪಾವ್​​ಗಳು ಜನರಿಗೆ ಭಾರೀ ಇಷ್ಟವಾದವು. ಈ ರೀತಿಯಾಗಿ ಗುಪ್ತ ಅವರು ಭಾರಿ ಪ್ರಮಾಣದ ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ಅಂದರೆ ಆಫೀಸ್, ಕಾಲೇಜು ಇರುವ ಜಾಗಗಳಲ್ಲಿ ತಮ್ಮ ಮಳಿಗೆಗಳನ್ನು ಸ್ಥಾಪಿಸುತ್ತ ಬಂದರು. ನಂತರ 2007ರ ಆರಂಭದಲ್ಲಿ ಫ್ರಾಂಚೈಸಿ ಮಾದರಿಯಲ್ಲಿ ಜಂಬೋಕಿಂಗ್ ಸ್ವಂತ ಮಳಿಗೆಗಳನ್ನು ಸ್ಥಾಪಿಸಲು ನಿರ್ಧರಿಸಿದರು. ಮುಂದಿನ ಮೂರು ವರ್ಷಗಳ ಕಾಲದಲ್ಲಿ ಗುಪ್ತಾ ಅವರು ಫ್ರಾಂಚೈಸಿಗಳನ್ನು ವಾಪಸ್ ಖರೀದಿಸಿ, ಸ್ವಂತ ಮಳಿಗೆಗಳನ್ನು ಆರಂಭಿಸಿದರು. ಅದರಲ್ಲಿ ಅವರು ತಮ್ಮ ಗಮನವನ್ನೆಲ್ಲಾ ಒಂದೇ ಉತ್ಪನ್ನದ ಮೇಲೆ ಕೇಂದ್ರೀಕರಿಸಿದರು. ನಂತರ ಅವರು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿದರು.

source: youtube.com

ಹೀಗೆ ಪರಿಶ್ರಮದಿಂದ 16 ವರ್ಷದೊಳಗೆ ಒಟ್ಟು 70 ಫ್ರ್ಯಾಂಚೈಸ್ ಮಳಿಗೆಗಳಿಂದ 20 ವೆರೈಟಿ ವಡಾಪಾವ್ ಗಳನ್ನು ನೀಡಲಾರಂಭಿಸಿದರು. 47 ಮಳಿಗೆಗಳು ಮುಂಬೈ ಮತ್ತು ಪುಣೆಯಲ್ಲಿವೆ, ಮತ್ತು ಉಳಿದವು ಹೈದರಾಬಾದ್, ಇಂದೋರ್, ಬೆಂಗಳೂರು, ಲಕ್ನೋ, ಮತ್ತು ಅಮರಾವತಿ ಸೇರಿದಂತೆ ಏಳು ನಗರಗಳಲ್ಲಿವೆ.

source: ekplate.com

ಧೀರಜ್ ಗುಪ್ತರವ ಜಂಬೋಕಿಂಗ್ ಮಳಿಗೆಯ ವಾರ್ಷಿಕ ಅದ್ಯ 12 ಕೋಟಿ. ಜಂಬೋಕಿಂಗ್ ಮಳಿಗೆಯಲ್ಲಿ ಈಗ 10-75 ರೂಪಾಯಿಗಳವರೆಗಿನ ವಿಭಿನ್ನವಾದ ವಡಾಪಾವ್ ಗಳು ದೊರೆಯುತ್ತವೆ. ಇತ್ತೀಚೆಗಷ್ಟೇ ವಡಾಪಾವ್ ರೂಪದಲ್ಲಿ ಸಮೋಸಾವನ್ನೂ ಪರಿಚಯಿಸಲಾಗಿದೆ. ಗಂಟೆಗೆ 1.5 ಟನ್​ನಷ್ಟು ವಡಾಪಾವ್ ತಯಾರಿಸುವ ಸಾಮರ್ಥ್ಯದ ಪಾಕಶಾಲೆಯನ್ನೂ ಜಂಬೋಕಿಂಗ್ ಹೊಂದಿದೆ. ಇಷ್ಟು ಸಾಮರ್ಥ್ಯ ಹೊಂದಿರುವುದರಿಂದಲೇ ಗ್ರಾಹಕರಿಗೆ ಕೊರತೆಯಾಗದಷ್ಟು ಮಟ್ಟದಲ್ಲಿ ವಡಾಪಾವ್ ತಯಾರಿಸಲಾಗುತ್ತಿದೆ.

source: theweekendleader.com

ಧೀರಜ್ ಗುಪ್ತಾ ಅವರ ಇಡಿ ಸಾಧನೆಯಲ್ಲಿ ಅವರ ಪತ್ನಿ ರೀತಾ ಗುಪ್ತಾ ಇಡೀ ಉದ್ಯಮವನ್ನು ಕಟ್ಟಿ ಬೆಳೆಸುವಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದರೆ. ರೀತಾ ಕೂಡಾ ಸಿಂಬ್ಯೋಸಿಸ್​​ನಲ್ಲಿ ಮ್ಯಾನೇಜ್​​ಮೆಂಟ್ ಪದವೀಧರೆ. ಜೀವನ ಸಾಂಗತ್ಯದಂತೆಯೇ, ಮಾರ್ಕೆಟಿಂಗ್, ಬ್ರಾಂಡಿಂಗ್, ಪೊಸಿಷನಿಂಗ್ ಎಲ್ಲದರಲ್ಲೂ ಪತಿ-ಪತ್ನಿ ಜೊತೆಯಾಗಿ ಸಾಗಿದ್ದಾರೆ. ರೀತಾ ಅತಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈಗಲೂ ಅವರು ಜಂಬೋಕಿಂಗ್​​ನಲ್ಲಿ ತೊಡಗಿಸಿಕೊಂಡಿದ್ದಾರೆ.

source: indiaprwire.com

ಉದ್ಯಮಿ ಕುಟುಂಬದಲ್ಲಿ ಬೆಳೆದರು ಪದವಿ ಮುಗಿದ ಮಾಲಿಕ ಕೆಲಸ ಮಾಡುವುದು ಅವರಿಗೆ ಕಷ್ಟವೇನು ಆಗಿರಲಿಲ್ಲ ಹಾಗಂತ ಅಲ್ಪ ಯಶಶ್ವಿಗೊಸ್ಕರ ಶಾರ್ಟ್​ಕಟ್ ಹಾದಿ ಹಿಡಿಯಲಿಲ್ಲ. ಅತ್ಯಂತ ಕಠಿಣ ಪರಿಶ್ರಮದಲ್ಲಿ ಮತ್ತು ಸುದೀರ್ಘ ಯಶಸ್ಸಿನಲ್ಲಿ ನಂಬಿಕೆ ಇಡುತ್ತಾರೋ ಅವರಿಗೆ ಮಾತ್ರ ಯಶಸ್ಸು ಲಭಿಸುತ್ತದೆ ಎನ್ನುವುದು ಅವರ ಸಿದ್ಧಾಂತ.