ತಾಯಂದಿರ ತ್ಯಾಗಕ್ಕೆ ಕೃತಜ್ಞತೆ ಹೇಳಿದ ಧೋನಿ ಪಡೆ!

0
685

ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ತಂಡದ ಜಯಭೇರಿ ಹಿಂದೆ ಅಮ್ಮಂದಿರು ಇದ್ದರು!

ವಿಶಾಖಪಟ್ಟಣದಲ್ಲಿ ಶನಿವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ೫ನೇ ಹಾಗೂ ಅಂತಿಮ ಏಕದಿನ ಪಂದ್ಯ ಭಾರತದ ಪಾಲಿಗೆ ಮಹತ್ವದ್ದಾಗಿತ್ತು. ಆದರೆ ಇಂತಹ ಒತ್ತಡದ ನಡುವೆಯೂ ಭಾರತ ತಂಡದ ಆಟಗಾರರು ವಿಶೇಷ ರೀತಿಯಲ್ಲಿ ಅಮ್ಮಂದಿರನ್ನು ನೆನಪಿಸಿಕೊಳ್ಳಲು ನಿರ್ಧರಿಸಿತ್ತು.

ಆಟಗಾರರು ಪಂದ್ಯದ ವೇಳೆ ತಮ್ಮ ಜೆರ್ಸಿ ಹಿಂದೆ ಸಂಖ್ಯೆಯ ಮೇಲೆ ತಮ್ಮ ಹೆಸರು ಹಾಕಿಕೊಳ್ಳುವುದು ಸಾಮಾನ್ಯ. ಆದರೆ ಶನಿವಾರ ಭಾರತ ತಂಡದ ಆಟಗಾರರು ತಮ್ಮ ಜೆರ್ಸಿ ಮೇಲೆ ತಮ್ಮ ತಾಯಂದಿರ ಹೆಸರು ಹಾಕಿಕೊಳ್ಳುವ ಮೂಲಕ ವಿಶೇಷ ರೀತಿಯಲ್ಲಿ ಅಮ್ಮಂದಿರನ್ನು ನೆನಪಿಸಿಕೊಂಡರು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡುವ ಅಮ್ಮಂದಿರಿಗಾಗಿ ಈ ರೀತಿ ನೆನಪಿಸಿಕೊಳ್ಳುವ ಮೂಲಕ ಧೋನಿ ಬಾಯ್ಸ್ ಎಲ್ಲರ ಗಮನ ಸೆಳೆದರು.

ತಾಯಂದಿರ ತ್ಯಾಗಕ್ಕೆ ಕೃತಜ್ಞತೆ ಹೇಳುವ ಸಣ್ಣ ಪ್ರಯತ್ನ ಇದು. ನಾವು ಎಷ್ಟು ಅಮ್ಮಂದಿರೊಂದಿಗೆ ಭಾವನಾತ್ಮಕ ವಾಗಿ ಹೊಂದಿಕೊಂಡಿರುತ್ತೇವೆ ಎಂಬುದು ಇದು ತೋರಿಸುತ್ತದೆ. ತಂದೆ ಏನೂ ಮಾಡಿಲ್ಲ ಎಂಬ ಅರ್ಥವೂ ಇದಲ್ಲ. ಆದರೆ ಅಮ್ಮಂದಿರ ತ್ಯಾಗ ಅತ್ಯಂತ ಮಹತ್ವದ್ದು ಎಂದು ತಾಯಿ ದೇವಕಿ ಹೆಸರು ಹಾಕಿಕೊಂಡ ಬಗ್ಗೆ ಧೋನಿ ಪ್ರತಿಕ್ರಿಯಿಸಿದರು.

ನಾವು ಯೋಧರನ್ನು ಹೇಗೆ ನೆನಪಿಸಿಕೊಳುವುದು ಹೇಗೆ ದೇಶಪ್ರೇಮ ಎನ್ನುತ್ತೇವೋ ಹಾಗೆ ಅಮ್ಮಂದಿರನ್ನು ನೆನಪಿಸಿ ಕೊಳ್ಳುವುದು ನಮ್ಮ ಕರ್ತವ್ಯ ಎಂದು ಧೋನಿ ನುಡಿದರು.