ಧೋನಿಗೆ ಗ್ಲೌಸ್ ಬದಲಿಸುವಂತೆ ಐಸಿಸಿ ಸೂಚನೆ; ಯಾವುದೇ ಕಾರಣಕ್ಕೂ ಗ್ಲೌಸ್ ತೆಗೆಯದಂತೆ ಧೋನಿ ಬೆಂಬಲಕ್ಕೆ ನಿಂತ ಬಿಸಿಸಿಐ, ಹೇಳಿದ್ದು ಹೀಗೆ..

0
551

ಭಾರತದ ಕ್ರಿಕೆಟ್ ಆಟಗಾರರು ದೇಶದ ಅಭಿಮಾನ ಮತ್ತು ಭಾರತೀಯ ಸೈನ್ಯದ ಮೇಲೆ ಹೊಂದಿರುವ ಅಭಿಮಾನವನ್ನು ಸಹಿಸಿಕೊಳ್ಳದ ಕೆಲವು ದೇಶಗಳು ಐಸಿಸಿ ಮಂಡಳಿಯ ಕಿವಿಯಲ್ಲಿ ಉದುತ್ತಿದ್ದಾರೆ, ಇದರಿಂದ ಐಸಿಸಿ ಸೇನಾ ಲಾಂಛನ ಇರುವ ಗ್ಲೌಸನ್ನು ಧರಿಸಿ ಆಟವಾಡುತ್ತಿರುವ ಧೋನಿ ಗ್ಲೌಸ್ ಬದಲಿಸುವಂತೆ ಐಸಿಸಿ ಸೂಚಿಸಿ ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಗುರಿಯಾಗಿತ್ತು. ಈಗ ವಿವಾದ ತೀವ್ರ ಸ್ವರೋಪ ಪಡೆದುಕೊಂಡಿದ್ದು, ಬಿಸಿಸಿಐ ಧೋನಿ ಪರ ಬ್ಯಾಟ್ ಮಾಡಿ. ನಿಮ್ಮ ಅಂಪೈರ್‍ ಗಳಿಗೆ ಪಿನ್ ಇಡುವುದು ಬಿಟ್ಟು ಸರಿಯಾಗಿ ತೀರ್ಪು ನೀಡಲು ಹೇಳಿ ಎಂದು ತಿರುಗೇಟು ನೀಡಿದೆ.

ಏನಿದು ವಿವಾದ?

ಇಂಗ್ಲೆಂಡ್‍ನ ಸೌಥಾಂಪ್ಟನ್ ಮೈದಾನದಲ್ಲಿ ಬುಧವಾರ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಧೋನಿ ಪ್ಯಾರಾಚೂಟ್ ರೆಜಿಮೆಂಟ್‍ನ ಬಲಿದಾನ್ ಲಾಂಛನ ಇರುವ ಗ್ಲೌಸ್ ಧರಿಸಿದ್ದರು. ಈ ಪಂದ್ಯದಲ್ಲಿ ಧೋನಿ ಆಂಡಿಲೆ ಫೆಹ್ಲುಕ್ವವೋ ಅವರನ್ನು ಸ್ಟಂಪ್ ಔಟ್ ಮಾಡಿದ್ದರು. ಈ ವೇಳೆ ಕ್ಯಾಮೆರಾದಲ್ಲಿ ಧೋನಿ ಗ್ಲೌಸ್ ಸೆರೆಯಾದ ಬಳಿಕ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಒಂದೆಡೆ ಐಸಿಸಿ ಸೇನಾ ಚಿಹ್ನೆ ತೆಗೆಯಲು ಮನವಿ ಮಾಡಿದ್ದರೆ, ಮತ್ತೊಂದೆಡೆ ಧೋನಿ ‘ಬಲಿದಾನ್’ ಚಿಹ್ನೆ ತೆಗೆಯಬಾರದೆಂದು ಬಹುದೊಡ್ಡ ಅಭಿಯಾನವೇ ಆರಂಭವಾಗಿದ್ದು, ಬಿಸಿಸಿಐ ಕೂಡ ಧೋನಿಗೆ ಬೆಂಬಲ ನೀಡಿದ್ದು, ಐಸಿಸಿಯನ್ನೇ ಪ್ರಶ್ನಿಸಿದೆ.

ದೋನಿಗೆ ICC ತಾಕೀತು ಏನು?

ಧೋನಿ ಕೈಯಲ್ಲಿದ್ದ ಗ್ಲೌಸ್‍ಗೆ ಐಸಿಸಿ ಅಕ್ಷೇಪ ಮಾಡಿತ್ತು. ಐಸಿಸಿ ಉಪಕರಣ ಮತ್ತು ಪೋಷಾಕು ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವಾಗ ಯಾವುದೇ ರಾಜಕೀಯ, ಜಾತಿ ಇಲ್ಲವೇ ಜನಾಂಗೀಯ ಚಟುವಟಿಕೆಗಳಿಗೆ ಸಂಬಂಧಿತ ಸಂದೇಶಗಳನ್ನು ಪ್ರದರ್ಶನ ಮಾಡುವಂತಿಲ್ಲ. ಆದಕ್ಕಾಗಿ ಈ ಲಾಂಛನ ಇರುವ ಗ್ಲೌಸ್‍ನ್ನು ತೆಗೆದು ಆಡಲು ಧೋನಿಗೆ ಸೂಚಿಸುವಂತೆ ಬಿಸಿಸಿಐಗೆ ತಾಕೀತು ಮಾಡಿತ್ತು.

ಐಸಿಸಿ ಗೆ ಬಿಸಿಸಿಐ ಚಾಟಿ ಏನು?

ಸೇನೆಯ ಬಲಿದಾನದ ಚಿಹ್ನೆ ಬಳಸಿರುವ ಗ್ಲೌಸ್ ಬದಲಿಸುವಂತೆ ಐಸಿಸಿ ಸೂಚಿಸಿದ ಬೆನ್ನಲ್ಲೇ, ಎಲ್ಲರೂ ಧೋನಿ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಬಿಸಿಸಿಐ ಕೂಡ ಧೋನಿಗೆ ಸಪೂರ್ಟ್ ನೀಡಿದ್ದು, ಗ್ಲೌಸ್ ಬದಲಿಸ ಬೇಕಿಲ್ಲ ಎಂದಿದ್ದು. ಬಿಸಿಸಿಐ ಹಾಗೂ ಎಂ.ಎಸ್.ಧೋನಿ ಗ್ಲೌಸ್ ಕುರಿತು ಐಸಿಸಿಗೆ ವಿವರಣೆ ನೀಡಿದ್ದಾರೆ. ಧೋನಿ ಧರಿಸಿದ ಗ್ಲೌಸ್, ಧಾರ್ಮಿಕ, ರಾಜಕೀಯ ಅಥವಾ ಯಾವುದೇ ಜನಾಂಗಿಯ ನಿಂದನೆಗೆ ಒಳಪಡುತ್ತಿಲ್ಲ. ಇದು ಬಲಿದಾನದ ಚಿಹ್ನೆ ಎಂದು ಐಸಿಸಿಗೆ ವಿವರಣೆ ನೀಡಿ ಮೊದಲು ನಿಮ್ಮ ಅಂಪೈರ್‍ ಗಳಿಗೆ ಸರಿಯಾಗಿ ತೀರ್ಪು ನೀಡಲು ಹೇಳಿ. ಇಂತಹ ಸಿಲ್ಲಿ ವಿಚಾರಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ.

ಈ ಪ್ಯಾರಾಚೂಟ್ ರೆಜಿಮೆಂಟ್‍ನ ಬಲಿದಾನ್ ಲಾಂಛನ ಇರುವ ವಸ್ತುಗಳನ್ನು ಬಳಸಲು ಕೇವಲ ಪ್ಯಾರಾಮಿಲಿಟರಿ ಕಾಮಾಂಡೋಗಳಿಗೆ ಮಾತ್ರ ಅನುಮತಿ ಇದೆ. 2011 ರಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇರಿದ್ದ ಧೋನಿ, 2015ರಲ್ಲಿ ಪ್ಯಾರಾ ಬ್ರಿಗೇಡ್‍ನಿಂದ ತರಬೇತಿ ಪಡೆದಿದ್ದರು. ಆದ್ದರಿಂದ ಅವರು ಧರಿಸಬಹುದು. ಸೇನೆ ನಮ್ಮ ದೇಶದ ಹೆಮ್ಮೆಯ ವಿಚಾರ. ಹೀಗಾಗಿ ಗ್ಲೌಸ್ ಧರಿಸಿದರೆ ತಪ್ಪೇನು ಎಂದು ಬರೆದು ಐಸಿಸಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಕುರಿತು ಐಸಿಸಿ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು ಎಂದು ಬಿಸಿಸಿಐ COA ವಿನೋದ್ ರೈ ಹೇಳಿದ್ದಾರೆ.