ಧೋನಿ ನಿವೃತಿಗೆ ಡೆಡ್ ಲೈನ್ ಫಿಕ್ಸ್…!?

0
822

ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಯಶಸ್ವಿ ನಾಯಕರಲ್ಲಿ ಒಬ್ಬರು. ನ್ಯೂಜಿಲೆಂಡ್ ವಿರುದ್ಧ ಇಂದು ರಾಂಚಿಯಲ್ಲಿ ನಡೆಯಲಿರುವ ಪಂದ್ಯ ನಾಯಕ ಎಂ ಎಸ್ ಧೋನಿ ತವರಿನಲ್ಲಿ ಆಡುವ ಕೊನೇ ಆಟವಾ? ಹೀಗೊಂದು ಅನುಮಾನ ಕಾಡುತ್ತಿದೆ.

35 ವರ್ಷದ ಧೋನಿ ಈಗಾಗಲೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದಾರೆ, ವಿರಾಟ್ ಕೊಹ್ಲಿ ಸದ್ಯ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆದಿದ್ದಾರೆ. ಆದರೆ ಧೋನಿ ಮಾತ್ರ ಏಕದಿನ ಪಂದ್ಯಗಳಲ್ಲಿ ಮೊದಲಿನಂತೆ ಆಡುತ್ತಿಲ್ಲ. ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ಸ್ವತಃ ಧೋನಿ ಕ್ರಿಕೆಟ್ ಜಗತ್ತಿನಿಂದ ನಾನು ನಿವೃತ್ತಿ ಘೋಷಿಸುವ ಸಮಯ ಇನ್ನೂ ದೂರವಿದೆ ಎಂದು ಹೇಳಿಕೆ ನೀಡಿದ್ದರು. ಆದರೂ ತನ್ನಲ್ಲಿ ಮೊದಲಿನಂತೆ ಸ್ಟ್ರೈಕ್ ರೊಟೇಟ್ ಮಾಡುವ ಶಕ್ತಿ ಉಳಿದಿಲ್ಲ ಎಂದು ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಧೋನಿ ಪಾಲಿಗೆ ರಾಂಚಿ ಕೊನೆಯ ಪಂದ್ಯವಾಗಬಹುದು ಎನ್ನಲಾಗುತ್ತಿದೆ. ಹೀಗಾಗಿ ಭಾರತ ಎರಡು ಕಾರಣಕ್ಕೆ ಈ ಪಂದ್ಯ ಗೆಲ್ಲಬೇಕಾಗಿದೆ. ಭಾರತ ಇಂದು ಗೆದ್ದರೆ ಸರಣಿ ಗೆಲುವು ಸಿಗುತ್ತದೆ ಮತ್ತು ಧೋನಿ ಕೊನೆಯ ಪಂದ್ಯವಾಗಬಹುದು ಎಂಬ ಕಾರಣಕ್ಕಾಗಿಯೂ ಭಾರತ ಗೆಲ್ಲಬೇಕಿದೆ.

ಆದರೆ ಗುಟ್ಟು ಬಿಟ್ಟುಕೊಡದ ಧೋನಿ “ನಾನು ಸದ್ಯಕ್ಕೆ ನನ್ನ ಆಟದ ಮೇಲೆ ಗಮನ ಕೇಂದ್ರೀಕರಿಸಲು ಒತ್ತು ನೀಡಿದ್ದೇನೆ. ಹಿಂದಿನ ಅನುಭವಗಳಿಂದ ಮುಂದಿನ ಗುರಿಯ ಬಗ್ಗೆ ಯೋಚಿಸುತ್ತೇನೆ. ನನ್ನ ಯಶಸ್ಸಿಗೆ, ಗುರಿ ಸಾಧನೆಗೆ ಕುಟುಂಬದವರು, ಗೆಳೆಯರು ಹಾಗೂ ದೇಶದ ಜನರ ಸ್ಪೂರ್ತಿ ಕಾರಣ ಎಂದು ಹೇಳಿದ್ದಾರೆ”.

ಇದೇ ಸಂದರ್ಭದಲ್ಲಿ ಏಕದಿನ ಮತ್ತು ಟಿ-20 ಪಂದ್ಯಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ‘ಎಂ.ಎಸ್.ಧೋನಿ-ದಿ ಅನ್ ಟೋಲ್ಡ್ ಸ್ಟೋರಿ’ ಬಾಲಿವುಡ್ ಸಿನಿಮಾ ಬಿಡುಗಡೆಗೊಂಡಿದ್ದು, ಎಲ್ಲರ ಮನ ಗೆಲ್ಲಲು ಯಶಸ್ವಿಯಾಗಿದೆ.