ಧೋತಿಗೆ ಹೊಸ ಟ್ವಿಸ್ಟ್ ನೀಡಿದ ಫ್ಯಾಷನ್ ಡಿಸೈನರ್ ನ ಸಲಹೆ

0
1393

ಗಂಟೆಗಟ್ಟಲೇ ಸಮಯ ವ್ಯಯಿಸಿ ಧೋತಿ ಕಟ್ಟುವುದು ಬೇಕಿಲ್ಲ. ಸುಲಭವಾಗಿ ಪ್ಯಾಂಟಿನಂತೆಯೇ ಧರಿಸಬಹುದಾದ ಇನ್ ಸ್ಟಂಟ್ ಇಂದು ಇ-ಜನರೇಷನ್ ಹೈಕಳ ಫೇವರಿಟ್ ಲಿಸ್ಟ್ ಸೇರಿದೆ. ಎಥ್ನಿಕ್ ಲುಕ್ ನೀಡಿತ್ತಿದೆ.

ಧೋತಿ ಪ್ರಿಯರಿಗೆ ಸಲಹೆ

*ಖರೀದಿಸುವ ಸಂದರ್ಭದಲ್ಲಿ ಕ್ವಾಲಿಟಿ ನೋಡಿಕೊಳ್ಳಿ.

*ಧೋತಿಯ ಇಲಾಸ್ಟಿಕ್ ಅಥವಾ ಟೈಯಿಂಗ್ ಥ್ರೆಡ್ ಉತ್ತಮವಿದೆಯೇ ನೋಡಿಕೊಳ್ಳಿ.

*ಮೊದಲೇ ಟ್ರಯಲ್ ನೋಡಿ ಖರೀದಿಸಿ.

*ಕ್ವಾಲಿಟಿಗೆ ಪ್ರಾಮುಖ್ಯತೆ ನೀಡಿ.

*ಡಿಸೈನರ್ ವೇರ್ ಜೊತೆಗೂ ದೊರಕುವುದು.

*ಬ್ರಾಂಡೆಡ್ ಆದಲ್ಲಿ ವೇಸ್ಟ್ ಲೈನ್ ಸೇರಿದಂತೆ ಫಿಟ್ಟಿಂಗ್ ಸರಿಯಾಗಿರುವುದು.

ಪಟಿಯಾಲ ಸ್ಟೈಲ್ ನ ಧೋತಿ

ಸಿಂಪಲ್ ಪ್ಲೀಟ್ ಗಳಲ್ಲಿದ್ದ ಧೋತಿ ಡಿಸೈನ್ ಇದೀಗ ಪಟಿಯಾಲ ಟಚ್ ಪಡೆದುಕೊಂಡಿದೆ. ನೋಡಲು ಹುಡುಗಿಯರ ಪಟಿಯಾಲದಂತೆ ಇದ್ದರೂ ಕೂಡ, ಹುಡುಗರ ಬಾಡಿಗೆ ಸೂಟ್ ಆಗುವಂತೆ ಹಾಗೂ ಕಾಲುಗಳು ಸುಂದರವಾಗಿ ಕಾಣುವಂತೆ ವಿನ್ಯಾಸ ಮಾಡಲಾಗಿದೆ ಎನ್ನುವ ಡಿಸೈನ್ ಸೂರಜ್ ಪ್ರಕಾರ ಎಥ್ನಿಕ್ ಲುಕ್ ನೀಡಲು ಸಹಕಾರಿಯಾಗಿದೆ. ಸೆಮಿ ಪಟಿಯಾಲ ಧೋತಿ ಸ್ಟೈಲ್ ಉದ್ದಹಿರುವ ಹುಡುಗರಿಗೆ ಚೆನ್ನಾಗಿ ಮ್ಯಾಚ್ ಆಗುತ್ತಿದೆ ಹಾಗೂ ನೋಡಲು ಕೂಡ ಸುಂದರವಾಗಿ ಕಾಣುತ್ತದೆ. ಕೆಲವು ಹಾಫ್ ಪಟಿಯಾಲ ಧೋತಿ ಸ್ಟೈಲ್ ಉದ್ದಗಿರುವ ಹುಡುಗರಿಗೆ ಚೆನ್ನಾಗಿ ಮ್ಯಾಚ್ ಆಗುತ್ತದೆ ಹಾಗೂ ನೋಡಲು ಕೂಡ ಸುಂದರವಾಗಿ ಕಾಣುತ್ತದೆ. ಕೆಲವು ಹಾಫ್ ಪಟಿಯಾಲದ ವಿನ್ಯಾಸದಲ್ಲಿದ್ದು, ಇನ್ನುಳಿದಂತೆ ಹರೇಮ್ ಪ್ಯಾಂಟ್ ಶೈಲಿಯಲ್ಲಿರುತ್ತವೆ. ಇವು ಬಿಂದಾಸ್ ಹಾಗೂ ಡಾನ್ಸ್ ಪ್ರಿಯರಿಗೆ ಇಷ್ಟವಾಗುತ್ತವೆ.

ಮೈಕ್ರೋ, ಮೆಗಾ ಪ್ಲೀಟಾ ಧೋತಿ

ಚಿಕ್ಕ ನೆರಿಗೆಗಳನ್ನು ಹೊಂದಿರುವ ಮೈಕ್ರೋ ಪ್ಲೀಟ್ಸ್ ಧೋತಿಗಳು ಕೊಂಚ ಎತ್ತರ ಕಡಿಮೆಯಾಗಿರುವವರಿಗೆ ನೋಡಲು ಚೆನ್ನಾಗಿ ಕಾಣುತ್ತವೆ ಎನ್ನುತ್ತಾರೆ.ಡಿಸೈನರ್ ಸೂರಜ್, ಅವರ ಪ್ರಕಾರ, ಬಿಗ್ ಪ್ಲೀಟ್ಸ್ ಕುಳ್ಳಗಿರುವವರನ್ನು ಮತ್ತಷ್ಟು ಕುಳ್ಳಗಿರುವಂತೆ ಬಿಂಬಿಸುತ್ತವೆ. ಹಾಗಾಗಿ ಕೊಂಚ ಪ್ಲಂಪಿಯಾಗಿರುವವರು ಹಾಗೂ ಕುಳ್ಳಗಿರುವವರು ಇಂತಹ ಧೋತಿಗಳನ್ನು ಆವಾಯ್ಡ್ ಮಾಡಬೇಕು. ಉದ್ದಗಿರುವವರು ಬಿಗ್ ಪ್ಲೀಟ್ ಧರಿಸಬುದು. ಇದು ಮತ್ತಷ್ಟು ಹ್ಯಾಂಡ್ ಸಮ್ ಆಗಿ ಕಾಣುವಂತೆ ಬಿಂಬಿಸುತ್ತದೆ ಎನ್ನುತ್ತಾರೆ. ಪ್ಲೀಟ್ ಕೂಡ ಪರ್ಸನಾಲಿಟಿ ತಕ್ಕಂತೆ ಆಯ್ಕೆ ಮಾಡುವುದು ಉತ್ತಮ ಎಂಬುದು ಮಾಡೆಲ್ ರಾಣಾ ಅಭಿಪ್ರಾಯ.

ಟ್ರೆಂಡ್ ನಲ್ಲಿಲ್ಲ ಪ್ರಿಂಟ್ಸ್ ಧೋತಿ

ರ್ಯಾಂಪ್ ನಲ್ಲಿ ಧೋತಿ ಕಾಣಿಸಿಕೊಂಡಿದ್ದರೂ ಅವು ಚಾಲ್ತಿಗೆ ಬರಲಿಲ್ಲ ಎನ್ನುವ ಮಾಡೆಲ್ ಹರ್ಷ ಪ್ರಕಾರ, ಪ್ರಿಂಟ್ ಧೋತಿಗಳು ಎಲ್ಲರಿಗೂ ಸೂಟ್ ಆಗುವುದಿಲ್ಲ.ಸಾದಾ ಡಿಸೈನ್ ಶೈನಿಂಗ್ ಧೋತಿಗಳು ಮಾತ್ರ ಎಲ್ಲಾ ಸಿಸನ್ ನಲ್ಲೂ ಪ್ರಚಲಿತದಲ್ಲಿವೆ. ಸಾಫ್ಟ್ ಸಿಲ್ಕ್ ಫ್ಯಾಬ್ರಿಕ್ ನವು ಇಂದಿನ ಯಂಗಸ್ಟರ್ಸ್ ಫೇವರೆಟ್ ವಾರ್ಡ್ ರೋಬ್ ನಲ್ಲಿವೆ. ಫಸ್ಟಿವ್ ಸೀಸನ್ ಗೆ ಬೆಸ್ಟ್ ಔಟ್ ಫಿಟ್.

ಶೆರ್ವಾನಿ – ಬಂದ್ ಗಲಾ

ಹೆಚ್ಚಾಗಿ ಧೋತಿಯನ್ನು ಕೊಳ್ಳುವವರು ಟೋಟಲ್ ಡಿಸೈನರ್ ವೇರನ್ನೇ ಖರೀದಿಸುತ್ತಾರೆ. ಧೋತಿಯನ್ನು ಪ್ರತ್ಯೇಕವಾಗಿ ಕೋಳ್ಳುವುದಿಲ್ಲ. ಬದಲಾಗಿ ಟಾಪ್ ನಂತಹ ಶೇರ್ವಾನಿ. ಬಂದ್ ಗಲಾ ಜೊತೆ ದೊರೆತ ಧೋತಿಯನ್ನೇ ಧರಿಸುತ್ತಾರೆ. ಇವನ್ನು ನೀವು ಇಂದು ಲಭ್ಯವಿರುವ ಇನ್ ಸ್ಟಂಟ್ ಇಲಾಸ್ಟಿಕ್ ಅಥವಾ ಟೈಯಿಂಗ್ ಧೋತಿ ಕೊಂಡಲ್ಲಿ. ಇನ್ನಿತರೆ ಸಭೆ ಸಮಾರಂಭಗಳಲ್ಲಿ ಬೇರೆಯ ಶೆರ್ವಾನಿ, ಕುರ್ತಾ, ಲಾಂಗ್ ಕೋಟ್ ಜೊತೆಗೆ ಧರಿಸಿ ಹೊಸ ಲುಕ್ ನೀಡಬಹುದು. ಅಲ್ಲದೆ, ಡಿಫರೆಂಟ್ ಆಗಿ ಕಾಣಿಸಬಹುದು ಎನ್ನುತ್ತಾರೆ ಮಾಡೆಲ್ ನೀರಜ್.

ಮಿಕ್ಸ್ ಮ್ಯಾಚ್ ಮಾಡಿ

ಮಿಕ್ಸ್ ಮ್ಯಾಚ್ ಸೆನ್ಸ್ ಇದ್ದರಂತೂ ಇನ್ ಸ್ಟಂಟ್ ಧೋತಿ ಸ್ಟೈಲ್ ಹಿಟ್ ಆಗುವುದಂತೂ ಗ್ಯಾರಂಟಿ. ಇನ್ನು ಸೆಲಡಕ್ಟ್ ಮಾಡುವಾಗ ಆದಷ್ಟೂ ಗೋಲ್ಡನ್ ಶೇಡ್ ನದ್ದು ಆಯ್ಕೆ ಮಾಡಿ. ಬ್ಲೂ ರೆಡ್ ಹಾಗೂ ಗ್ರೀನ್ ವರ್ಣಗಳಾದಲ್ಲಿ ಧರಿಸುವ ಟಾಪ್ ಗಳು ಕಾಂಟ್ರಾಸ್ಟ್ ಆಗಿರುಬೇಕು. ಬಾರ್ಡರ್ ಇದ್ದಾಗ ನೋಡಿಕೊಂಡು ಮ್ಯಾಚ್ ಮಾಡಬೇಕು. ಗೋಲ್ಡನ್ ಕಲರ್ ನ ಧೋತಿಯನ್ನು ಯಾವುದೇ ಕಲರ್ ಹಾಗೂ ಡಿಸೈನ್ ಟಾಪ್ ಅಥವಾ ಕುರ್ತಾಗೂ ಧರಿಸಬಹುದು. ಶೈನಿಂಗ್ ಧೋತಿಗಳಿಗೆ ಸಾದಾ ಶೇಡ್ ನ ಟಾಪ್ ಧರಿಸಬಹುದು ಬೇಡ. ಸಿಂಪಲ್ ಚೈನ್ ಹಾಗೂ ಆಗಿದ್ದರೆ ಉತ್ತಮ. ಆಫ್ ಶೂ ನೋಡಲು ಎಥ್ನಿಕ್ ಲುಕ್ ನೀಡುವಂತಿರಬೇಕು.

ಪ್ಯಾಂಟ್  ನಂತೆ ಧರಿಸಿ

ಕಟ್ಟಿಕೊಳ್ಳುವ ಗೋಜಿಲ್ಲ, ಪ್ಯಾಂಟ್ ನಂತೆ ಸುಲಭವಾಗಿ ಧರಿಸಬಹುದು, ಇದು ಇನ್ ಸ್ಟಂಟ್ ಧೋತಿಯ ಸ್ಪೆಷಾಲಿಟಿ. ಬಾರ್ಡರ್ ಇರುವ ಇನ್ ಸ್ಟಂಟ್ ಧೋತಿ ಎಥ್ನಿಕ್ ಲುಕ್ ನೊಂದಿಗೆ ನೋಡಲು ಆಕರ್ಷಕವಾಗಿ ಕಾಣುತ್ತದೆ. ಸೆಂಟರ್ ಬಾರ್ಡರ್ ಇರುವ ಧೋತಿಗಳೊಂದಿಗೆ ಶಾರ್ಟ್ ಕುರ್ತಾ ಕೂಡ ಧರಿಸಬಹುದು ಎನ್ನುತ್ತಾರೆ. ಡಿಸೈನ್ ಸೂರಜ್.ಟೈಯಿಂಗ್ ಥ್ರೆಡ್ ಕೂಡ ಹಾಕಿಸಬಹುದು. ಆದರೆ, ಇದನ್ನು ನಿರ್ವಹಣೆ ಮಾಡುವುದು ತುಸು ಕಷ್ಟವೇ ಸರಿ ಎನ್ನುತ್ತಾರೆ.

ಮೂಲ:ಶಿಲ್ಪ.ಪಿ ಶೆಟ್ಟಿ