ಇದನ್ನು ಪಾಲಿಸಿದರೆ ನೀವು ಮಧುಮೇಹದಿಂದ ಮುಕ್ತರಾಗುವುದು ಖಚಿತ – ಭಾಗ -1

0
1004

ಸಾವಿಲ್ಲದ ಮನೆಯ ಸಾಸಿವೆಯ ಹುಡುಕುವಂತೆ ಮಧುಮೇಹಿಗಳಿಲ್ಲದ ಮನೆಯನ್ನು ಹುಡುಕುವುದು ಇಂದಿನ ದಿನಗಳಲ್ಲಿ ಕಷ್ಟವೇ ಸರಿ.ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ಇನ್ನಷ್ಟು ಕಷ್ಟ!! ವಿಶ್ವದಲ್ಲಿ ಭಾರತ ” ಡಯಾಬಿಟಿಸ್ ನ ರಾಜಧಾನಿ” ಎನಿಸಿಕೊಂಡರೆ, ಭಾರತದಲ್ಲಿ “ಬೆಂಗಳೂರುಡಯಾಬಿಟಿಸ್ ನ ರಾಜಧಾನಿ” ಎನಿಸಿಕೊಂಡಿದೆ ಅಲ್ಲವೇ?? ನಾನು ಗಮನಿಸಿದಂತೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗಲು ಕಾರಣ ಏರುತ್ತಿರುವ ಸಕ್ಕರೆಯಅಂಶವನ್ನು ಕಡಿಮೆಗೊಳಿಸಲು ಇರುವ ವಿಧಾನ/ ಸಾಧ್ಯತೆಗಳನ್ನು ಸರಿಯಾಗಿ ತಿಳಿದುಕೊಳ್ಳದಿರುವುದು. ಅಂದರೆ ಮಾಹಿತಿಯ ಕೊರತೆ!! ಮಧುಮೇಹಪತ್ತೆಯಾದ ತಕ್ಷಣವೇ ಸೂಕ್ತ ಆಹಾರ, ವ್ಯಾಯಾಮ ಕ್ರಮಗಳನ್ನು ಆರಂಭಿಸಿಕೊಂಡರೆ ಮಾತ್ರೆ, ಇನ್ಸುಲಿನ್ ಗಳ ಮೇಲೆ ಅವಲಂಬನೆಯಾಗುವುದನ್ನುಸಂಪೂರ್ಣ ಕಡಿಮೆಗೊಳಿಸಿ “ಡಯಾಬಿಟಿಸ್ ಇಲ್ಲ!!” ಎನಿಸಿಕೊಳ್ಳಲೂ ಸಾಧ್ಯವಿದೆ!! (ಹಾಗೆಂದು ಮಾತ್ರೆ, ಇನ್ಸುಲಿನ್ ಗಳ ಅವಶ್ಯಕತೆಯೇ ಬೇಡವೆಂದಲ್ಲ.ಸೂಕ್ತವಾಗಿ ಸಕ್ಕರೆಯ ಅಂಶವನ್ನು ನಿರ್ವಹಣೆ ಮಾಡದಿದ್ದಲ್ಲಿ ಕೊನೆಗೆ ಔಷಧಿ ಅನಿವಾರ್ಯ!!)

ಸಾಮಾಜಿಕ ಜಾಲತಾಣಗಳಲ್ಲಿ, ದಿನಪತ್ರಿಕೆಗಳಲ್ಲಿ ಸಕ್ಕರೆಯ ಅಂಶಗಳನ್ನು ಕಡಿಮೆಗೊಳಿಸುವ ಮಾಹಿತಿಗಳನ್ನು ಸಾಕಷ್ಟು ಓದಿರುತ್ತೀರಿ.ಹಾಗೆಂದು ಅವುಗಳು ಎಷ್ಟು ಸುರಕ್ಷಿತ?? ಎಷ್ಟು ದೀರ್ಘವಾಗಿ ಬಳಸಬೇಕು? ಜಾಸ್ತಿಯಾದರೆ ಅಡ್ಡಪರಿಣಾಮಗಳೇನು? ಯಾರೂ ಸೂಕ್ಷ್ಮವಾಗಿಗಮನಿಸುವುದಿಲ್ಲ.. ಜಾಗ್ರತೆ… ಸರಿಯಾದ ಮಾಹಿತಿಯಿಲ್ಲದೇ ಬಳಸಿದರೆ ಅವುಗಳಿಂದಲೇ ಮಧುಮೇಹ ಹೆಚ್ಚಾಗುವ ಸಾಧ್ಯತೆಗಳಿವೆ!! ಸ್ವಯಂ ವೈದ್ಯಎಂದೆಂದಿಗೂ ಅಪಾಯಕಾರಿ!! ನನ್ನ ವೈದ್ಯ ವೃತ್ತಿ ಜೀವನದ ಅನುಭವಗಳ ಜೊತೆ ಸರಿಯಾದ ಆಹಾರ ಪದ್ಧತಿ, ವ್ಯಾಯಾಮಕ್ರಮಗಳನ್ನು ತಿಳಿಸುವಮಾಹಿತಿಯೇ “ಮಧುಮೇಹ ಮರೆತುಬಿಡಿ” ಮಾಲಿಕೆ.. ವಿಷಯ ಸಾಕಷ್ಟು ದೀರ್ಘವಾಗಿರುವುದರಿಂದ ಹಲವು ಕಂತುಗಳಲ್ಲಿ ಪ್ರಕಟಗೊಳ್ಳಲಿದೆ. ಹಾಗೆಂದು ಈಮಾಹಿತಿಗಳನ್ನು ಓದಿ ನಿಮ್ಮಷ್ಟಕ್ಕೆ ನೀವೇ ವೈದ್ಯರಾಗಬೇಡಿ. ಜೊತೆ ಜೊತೆಗೆ ವೈದ್ಯರ ತಪಾಸಣೆ, ಮಾಹಿತಿಗಳನ್ನೂ ಪಾಲಿಸುತ್ತಿರಬೇಕು. ಮುಂದಿನಸಲಹೆಗಳಂತೆ ಕ್ರಮಬದ್ಧವಾಗಿ ಆಹಾರ ಕ್ರಮಗಳನ್ನು  ಪಾಲಿಸಿದಾಗ,  ಅತಿಯಾಗಿ ಮಾತ್ರೆ, ಇನ್ಸುಲಿನ್ ಬಳಸುವುದನ್ನು ಕಡಿಮೆಮಾಡಬಹುದು. ಮುಂದೆಮಾತ್ರೆ, ಇನ್ಸುಲಿನ್ ಗಳ ಅತಿ ಬಳಕೆಯಿಂದ ಆಗುವ ಅಡ್ಡಪರಿಣಾಮಗಳನ್ನೂ ನಿಯಂತ್ರಿಸಬಹುದು.

ಮುಂಜಾನೆಯ ರಸಾಹಾರ

* ಖಾಲಿ ಹೊಟ್ಟೆಯಲ್ಲಿ 1 ಲೋಟ ನವಿಲುಕೋಸಿನ ಜ್ಯೂಸ್

ಡಯಾಬಿಟಿಸ್ ಪತ್ತೆಯಾದ ತಕ್ಷಣವೇ ಅಥವಾ ಡಯಾಬಿಟಿಸ್ ಬಂದಿದ್ದು ಮಾತ್ರೆಗಳನ್ನು ಮಾತ್ರ ತೆಗೆದುಕೊಳ್ಳುತ್ತಿರುವವರಿಗೆ ಸೂಕ್ತ.

(ಮಧುಮೇಹ ಪತ್ತೆಯಾದ ತಕ್ಷಣ/ ಒಂದು ವರ್ಷದ ನಂತರವೂ ನವಿಲುಕೋಸು ಜ್ಯೂಸ್ ಆರಂಭಿಸಿ ನಂತರ ಮಾತ್ರೆಗಳನ್ನು ಸಂಪೂರ್ಣ ನಿಲ್ಲಿಸಿರುವವರನ್ನುಸಾಕಷ್ಟು ಗಮನಿಸಿದ್ದೇನೆ)

ಜ್ಯೂಸ್ ಒಳ್ಳೆಯದಾದರೂ ಸ್ವಲ್ಪ ಕಾಲದವರೆಗೆ ಪ್ರತಿನಿತ್ಯ ಸೇವಿಸಿ ನಂತರ ನಿಧಾನವಾಗಿ 3-4 ದಿನಕ್ಕೊಮ್ಮೆ ನಂತರ ವಾರಕ್ಕೊಮ್ಮೆ ಸೇವಿಸುವುದು.ಇಲ್ಲವಾದಲ್ಲಿ ಚಹಾ/ ಕಾಫಿಯಂತೆ ಚಟವಾಗುವ ಸಾಧ್ಯತೆಯಿದೆ!!

* ಹಾಗಲಕಾಯಿಯ ರಸ ಸಕ್ಕರೆಯ ಅಂಶ ತುಂಬಾ ಜಾಸ್ತಿ/ ಇನ್ಸುಲಿನ್ ತೆಗೆದುಕೊಳ್ಳುತ್ತಿರುವರಿಗಷ್ಟೇ ಒಳ್ಳೆಯದು. ಏಕೆಂದರೆ ದೀರ್ಘಕಾಲದ ಸೇವನೆಪ್ಯಾಂಕ್ರಿಯಾಸ್/ ಮೇದೋಜೀರಕಾಂಗದ ಮೂಲ ಕಾರ್ಯ ಕಡಿಮೆಗೊಳಿಸಿ, ಶರೀರದ ಇನ್ಸುಲಿನ್  ಉತ್ಪತ್ತಿಯ ಕೊರತೆಗೆ ಕಾರಣವಾಗಬಹುದು!!

*ಕಹಿಬೇವು ರಕ್ತದಂಶ ಕಡಿಮೆಗೊಳಿಸಲು ಸಹಾಯಕಾರಿಯಾದರೂ ವಯಸ್ಸು 60-70 ದಾಟುವವರೆಗೂ ಒಳ್ಳೆಯದಲ್ಲ. ಏಕೆಂದರೆ ಇದರಿಂದಲೂಮಧುಮೇಹ ನಿಯಂತ್ರಣಕ್ಕೆ ಬರದಿದ್ದರೆ ಕೊನೆಗೆ ಇನ್ಸುಲಿನ್ ಒಂದೇ ಗತಿ!! (ಏಕೆಂದರೆ ಕಹಿಬೇವು ಸ್ಟೀರಾಯಿಡಲ್ ಎಫೆಕ್ಟ್!!)

*ಮೆಂತ್ಯೆ ನೆನೆಸಿದ ನೀರು, ಮೆಂತ್ಯೆ ಹುಡಿ, ನೇರಳೆ ಬೀಜ, ಬೆಂಡೆಕಾಯಿಯ ನೀರು  ಬರಿಯ ಮಾತ್ರೆಗಳಂತೆ ಸಕ್ಕರೆಯ ಅಂಶವನ್ನು ಮಾತ್ರಕಡಿಮೆಗೊಳಿಸುವುದರಿಂದ ಖಾಲಿ ಹೊಟ್ಟೆಯಲ್ಲಿ ಸೇವನೆ ಸೂಕ್ತವಲ್ಲ. ಊಟ/ ತಿಂಡಿ ಆದ ಮೇಲೆ ಸೇವಿಸುವುದು ಉತ್ತಮ.

* ಚಕ್ಕೆ ಹುಡಿ (ದಿನಕ್ಕೆ ಸುಮಾರು 6 ಗ್ರಾಂ) “ಇನ್ಸುಲಿನ್ ಸೆನ್ಸಿಟಿವಿಟಿ” ಹೆಚ್ಚಿಸುವುದರಿಂದ ಊಟ, ತಿಂಡಿ ಆದ ನಂತರವೇ ಸೇವಿಸಿ.

ಡಾ. ಪುನೀತ್ ರಾಘವೇಂದ್ರ 

ಕುಂಟುಕಾಡು BNYS, MD Yoga Clinical