ಚತ್ತೀಸ್ಘಡದಲ್ಲಿ ಚುನಾವಣೆಗೂ ಮುಂಚೆಯೇ ಆಪರೇಷನ್ ಕಮಲ ನಡೆದು ಹೋಯಿತೇ??

0
291
ಮತ್ತೆ ಕಮಲ ಹಿಡಿದ ಉಕೆ; ‘ಕೈ’ಗೆ ‘ಶಾ’ಕ್..!

ವಿಧಾನಸಭಾ ಚುನಾವಣೆಯ ಕಾವು ಹೆಚ್ಚಿರುವ ಛತ್ತೀಸ್‌ಗಡದಲ್ಲಿ ಅಧಿಕಾರ ಉಳಿಸಿಕೊಳ್ಳಲು ಭಾರಿ ರಣ ತಂತ್ರಗಳನ್ನು ಹೂಡುತ್ತಿರುವ ಬಿಜೆಪಿ ಕಾಂಗ್ರೆಸ್‌ಗೆ ಭಾರೀ ದೊಡ್ಡ ಬಾಂಬ್ ಸಿಡಿಸುವ ಮೂಲಕ ಶಾಕ್‌ ನೀಡಿದೆ. ಛತ್ತೀಸ್‍ಗಡ ವಿಧಾನಸಭೆ ಚುನಾವಣೆಗೆ ವಾರ ಬಾಕಿ ಇರುವಾಗ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮದಯಾಳ್ ಉಕೆ ಬಿಜೆಪಿಗೆ ಸೇರಿದ್ದಾರೆ.

Also read: ರಾಹುಲ್ ಗಾಂಧಿ ಎಚ್.ಎ.ಎಲ್. ಸಂಸ್ಥೆಯ ಉಳಿವಿಗಿ ಮಾಡ್ತಿರೋ ಕೆಲಸಗಳನ್ನು ನೋಡಿದ್ರೆ ಗೊತ್ತಾಗುತ್ತೆ ಅವರಲ್ಲಿ ಎಷ್ಟು ಪ್ರಬುದ್ದತೆ ಬಂದಿದೆ ಅಂತ…

ಬಿಲಾಸ್‍ಪುರ್ ಪ್ರದೇಶದ ಬುಡಕಟ್ಟು ಸಮುದಾಯದ ನಾಯಕರಾಗಿರುವ ಉಕೆ, ಬಿಜೆಪಿ ಅಧ್ಯಕ್ಷ ಅಮಿಕ್ ಶಾ ಮತ್ತು ಮುಖ್ಯಮಂತ್ರಿ ರಮಣ್ ಸಿಂಗ್ ಅವರ ನೇತೃತ್ವದಲ್ಲಿ ಶನಿವಾರ ಬಿಜೆಪಿಗೆ ಸೇರಿದ್ದಾರೆ. ಕಾಂಗ್ರೆಸ್ ಬುಡಕಟ್ಟು ಜನರ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವುದರಿಂದ ತಾನು ಬಿಜೆಪಿಗೆ ಸೇರಿರುವುದಾಗಿ ಉಕೆ ಹೇಳಿದ್ದಾರೆ. ಬುಡಕಟ್ಟು ಜನಾಂಗದ ನೇತಾರರನ್ನು ಕಡೆಗಣಿಸಲಾಗುತ್ತಿದೆ ಮತ್ತು ಕಾಂಗ್ರೆಸ್‌ ನಮ್ಮನ್ನು ಪರಿಗಣಿಸುತ್ತಿಲ್ಲ. ಅವರು ಹೇಳುವುದು ಒಂದು ಮಾಡುವುದು ಇನ್ನೊಂದು. ಬುಡಕಟ್ಟು ಜನರ, ಹಿಂದುಳಿದ ವರ್ಗದವರ ಮತ್ತು ಬಡವರ ಹಿತಾಸಕ್ತಿಯನ್ನು ಕಾಂಗ್ರೆಸ್ ಕಡೆಗಣಿಸಿದೆ. ನಾನೊಬ್ಬ ಬುಡಕಟ್ಟು ಜನಾಂಗದ ನೇತಾರನಾಗಿ ನನಗೆ ದುಃಖವಾಗುತ್ತಿದೆ ಎಂದು ಉಕೆ ಹೇಳಿದ್ದಾರೆ.


Also read: ಸಂಸದ್ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಮೋದಿ ಸರ್ಕಾರದ ಮಂತ್ರಿಗಳ ಗ್ರಾಮಗಳ ಸ್ಥಿತಿ ಸಂಪೂರ್ಣ ಹಾಳಾಗಿವೆ..

ಆದರೆ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಬುಡಕಟ್ಟು ಮತ್ತು ಹಿಂದುಳಿದ ಜನರ ಅಭಿವೃದ್ದಿಗಾಗಿ ಉತ್ತಮ ಕೆಲಸ ಮಾಡುತ್ತಿದ್ದು ಅದರಿಂದ ಪ್ರಭಾವಿತನಾಗಿ ನಾನು ಬಿಜೆಪಿ ಸೇರಿದೆ. ಕಾಂಗ್ರೆಸ್‍ನಲ್ಲಿ ಉಸಿರುಗಟ್ಟುತ್ತಿತ್ತು. ಇದೊಂಥರಾ ಘರ್ ವಾಪಸಿ ಆದಂತೆ ಎಂದು ರಮಣ್ ಸಿಂಗ್ ಅವರನ್ನು ಉಕೆ ಶ್ಲಾಘಿಸಿದ್ದಾರೆ. ಈ ಮೂಲಕ ಅಮಿತ್ ಶಾ ಕಾಂಗ್ಕೆಸ್ ಪಕ್ಷಕ್ಕೆ ಭಾರಿ ದೊಡ್ಡ ಶಾಕ್ ನೀಡಿದ್ದಾರೆ. ಉಕೆ ಸೇರ್ಪಡೆಯಿಂದಾಗಿ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ, ಬಿಜೆಪಿ ಮಿಷನ್ 65 ಕ್ಕೆ ಇದು ಭಾರೀ ಸಹಾಯವಾಗುತ್ತದೆ ಎಂದು ಬಿಜೆಪಿ ಹೇಳಿದೆ.

Also read: ಹೆಲೋ ಫ್ರೆಂಡ್ಸ್, ವಿಶ್ವಾದ್ಯಂತ ನೆಟ್’ವರ್ಕ್ ಸ್ಲೋ ಆಗಲಿದೆ; ಎಚ್ಚರ ಎಚ್ಚರ..! ಇದು ನಿಮ್ಮ ಗ್ರಹಚಾರವಲ್ಲ..

ಆದರೆ ಈ ಬೆಳವಣಿಗೆಗೆ ಕಾಂಗ್ರೆಸ್ ಅಚ್ಚರಿ ವ್ಯಕ್ತ ಪಡಿಸಿದ್ದು, ನಮಗೆ ಪರ್ಯಾಯ ಮಾರ್ಗ ಇದೆ. ಉಕೆ ಜಾಗಕ್ಕೆ ಸಮರ್ಥ ಹಾಗೂ ಇನ್ನೂ ಪ್ರಬಲ ನಾಯಕರನ್ನು ತರುತ್ತೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಿಂಗಾದೋ ತಿಳಿಸಿದ್ದಾರೆ. 2000ನೇ ಇಸವಿಯಲ್ಲಿ ಬಿಜೆಪಿ ತೊರೆದಿದ್ದ ಉಕೆ, ಕಾಂಗ್ರೆಸ್ ಸೇರಿದ್ದರು. ಈಗ ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತು ಮತ್ತೆ ಬಿಜೆಪಿ ಸೇರಿದ್ದಾರೆ.