100 ವರ್ಷ ಬದುಕುವ ಜನರು 50 ವರ್ಷ ಬದುಕುವುದು ಕಷ್ಟವಾಗಿದೆ; ವಿಜ್ಞಾನ ನಮ್ಮನ್ನು ಎಲ್ಲಿಂದ ಎಲ್ಲಿಗೆ ತಂದಿದೆ ನೋಡಿ..

0
1240

ಕಾಲಮಾನಕ್ಕೆ ತಕ್ಕಂತೆ ವಿಜ್ಞಾನ ಬೆಳೆದಿದೆ ವಿಜ್ಞಾನಕ್ಕೆ ತಕ್ಕಂತೆ ಜನರು ಬೆಳೆದಿದ್ದಾರೆ. ಇವೆಲ್ಲವನ್ನು ತಿಳಿದ ಜನರು ಒಂದು ಬಾರಿ ತಾವು ಯಾವ ರೀತಿಯ ಜೀವನ ನಡೆಸುತ್ತಿದೇವೆ ಎನ್ನುವುದನ್ನು ಲೆಕ್ಕಿಸಿದರೆ ತಿಳಿಯುತ್ತೆ. ಏಕೆಂದರೆ ಹಿಂದಿನ ಕಾಲದ ಜೀವನ ಕ್ರಮಗಳನ್ನು ನೋಡಿದರೆ ಎಷ್ಟೊಂದು ಸೊಗಸು ಅನಿಸುತ್ತೆ. ಈಗಿನ ಜೀವನ ಅದಕ್ಕೆ ವಿರುದ್ದವಾಗಿದೇ, ಇದೆಲ್ಲವೂ ಜನರು ಮಾಡಿಕೊಂಡ ಐಷಾರಾಮಿ ಜೀವನವೇ? ಇಲ್ಲ ವಿಜ್ಞಾನ, ತಂತ್ರಜ್ಞಾನ ಮಾಡಿದ ಬದಲಾವಣೆಯೇ ತಿಳಿಯಲಾರದು.

Also read: ಸತ್ತ ಮೇಲೂ ಗರ್ಭಕೋಶ ಕಸಿಯಿಂದ ತಾಯಿಯಾದ ಈ ಮಹಿಳೆಯ ಸ್ಟೋರಿ ಓದಿ, ನಿಮ ಕಣ್ಣಲ್ಲಿ ನೀರು ಬರುತ್ತೆ…

ಸದ್ಯದ ಸ್ಥಿತಿ ನೋಡಿದರೆ 100 ರಲ್ಲಿ 80 ರಷ್ಟು ಜನರಿಗೆ ಯಾವುದೋ ಒಂದೇ ಖಾಯಿಲೆಗಳು ಬಂದಿರುತ್ತೆ, ಇದು ಸ್ವಲ್ಪದಿನಗಳಲ್ಲಿ 100 ರಷ್ಟು ಆಗುತ್ತೆ. ಇದರ ಪರಿಣಾಮವಾಗಿ ಸಾವಿನ ದಿನ 100 ವರ್ಷ ಇರುವುದು 60ಕ್ಕೆ ಬಂದಿದೆ ಮುಂದೆ 40 ಕ್ಕೆ ಬರುವುದರಲ್ಲಿ ಅನುಮಾನವೇ ಇಲ್ಲ. ಈ ಸಾವು ಬದುಕಿನ ಲೆಕ್ಕದಲ್ಲಿ ನಮ್ಮ ಅಜ್ಜ ಮುತ್ತಜ್ಜರ ಕಾಲದಲ್ಲಿ ಕಡಿಮೆ ಅಂದರು 80 ವರ್ಷದ ವರೆಗೆ ಬದುಕುತ್ತಿದರು ಕೆಲವೊಬ್ಬರು 125 ವರ್ಷಗಳು ಬದುಕಿದ ನಿದರ್ಶನಗಳಿವೆ. ಇವೆಲ್ಲ ವಿಚಾರವು ಯಾವುದಕ್ಕೆ ಹೇಳುತ್ತಿರುವುದು ಅಂದರೆ. ವಿಜ್ಞಾನ ನಮ್ಮನ್ನು ಎಲ್ಲಿಂದ ಎಲ್ಲಿಗೆ ತಂದಿದೆ ನೋಡಿ.

1. ಮೊದಲು:- ಬಾವಿಗಳಲ್ಲಿನ ನೀರು ಕುಡಿದು ನೂರು ವರ್ಷ ಬದುಕ್ತಾ ಇದ್ರು,
ಇವಾಗ:- RO ಫಿಲ್ಟರ್ ನೀರು ಕುಡಿದೂ ಸಹ 40 ವರ್ಷದಲ್ಲೇ ಮುದುಕರಾಗ್ತಿದಾರೆ.

Also read: ಪ್ರತಿ ದಿನ ಸಿಹಿ ತಿನ್ನೋದು, ಸಿಗರೇಟ್ ಸೇದೋದು ಮತ್ತು ಧೂಮಪಾನ ಮಾಡೋದಕ್ಕಿಂತ ಅಪಾಯ!!

2. ಮೊದಲು:- ಗಾಣದ ಎಣ್ಣೆ ತಿಂದು ವೃದ್ದಾಪ್ಯದಲ್ಲಿಯೂ ಗಟ್ಟಿಮುಟ್ಟಾಗಿರ್ತಿದ್ರು,
ಇವಾಗ:- ಡಬಲ್ ಫಿಲ್ಟರ್ ಎಣ್ಣೆ ತಿಂದೂ ಕೂಡ ಯೌವ್ವನದಲೇ ಏದುಸಿರು ಬಿಡ್ತಾರೆ.

3. ಮೊದಲು:- ಹರಳುಪ್ಪು ಸೇವಿಸಿಯೂ ಆರೋಗ್ಯವಂತರಾಗಿರ್ತಿದ್ರು,
ಇವಾಗ:- ಅಯೋಡಿನ್ ಉಪ್ಪು ಸೇವಿಸಿಯು ಹೈ- ಲೋ ಬಿಪಿ ಇಂದ ಬಳಲ್ತಾರೆ.

4. ಮೊದಲು:- ಬೇವು, ಇದ್ದಿಲು, ಉಪ್ಪಿನಿಂದ ಹಲ್ಲುಜ್ಜಿ 80 ವರ್ಷದವರೆಗೆ ಕಬ್ಬು ಜಗೀತಿದ್ರು,
ಇವಾಗ:- ಕೋಲ್ಗೆಟ್ ನಿಂದ ಹಲ್ಲುಜ್ಜಿಯೂ ದಂತ ವೈದ್ಯರ ಹತ್ತಿರ ಹೋಗ್ತಾರೆ.

5. ಮೊದಲು:- ನಾಡಿ ನೋಡಿ ರೋಗ ಯಾವುದೆಂದು ಹೇಳ್ತಾ ಇದ್ರು,
ಇವಾಗ:- ತಪಾಸಣೆ ಮಾಡಿಯೂ ರೋಗ ಯಾವುದೆಂದು ಹೇಳೋಕಾಗ್ತಿಲ್ಲ.

Also read: ಶಾಸ್ತ್ರದ ಪ್ರಕಾರ ಮಂಗಳಮುಖಿಯರಿಂದ ಮಂಗಳವಾರ ಈ ವಸ್ತುಗಳನ್ನು ಪಡೆದರೆ ಊಹಿಸಲು ಸಾಧ್ಯವಾಗದಷ್ಟು ಹಣ ಸಿಗುತ್ತೆ..?

6. ಮೊದಲು:- 7-8 ಮಕ್ಕಳಿಗೆ ಜನ್ಮ ನೀಡಿದ ತಾಯಿ 80 ವರ್ಷಲ್ಲಿಯೂ ಹೊಲದಲ್ಲಿ ದುಡಿಯುತ್ತಿದ್ದಳು,
ಇವಾಗ:- ಮೊದಲ ತಿಂಗಳೇ ವೈದ್ಯರ ಸಲಹೆಯಲ್ಲಿ, ಆದರೂ ಕೂಡ ಮಕ್ಕಳು ಹೊಟ್ಟೆ ಹರಿದು ಹುಟ್ಟ್ತಿದ್ದಾರೆ.

7. ಮೊದಲು:- ಬೆಲ್ಲದ ಸಿಹಿ ತಿಂಡಿಗಳನ್ನು ಹೊಟ್ಟೆ ತುಂಬಾ ತಿಂತಾ ಇದ್ರು,
ಇವಾಗ:- ತಿನ್ನೋಕ್ ಮೊದ್ಲೇ ಶುಗರ್ ಬಂದ್ಬಿಟ್ಟಿರುತ್ತೆ.

8. ಮೊದಲು:- ವೃದ್ಧರ ಮಂಡಿ ಕೂಡ ನೋಯ್ತಿರಲಿಲ್ಲ,
ಇವಾಗ:- ಯೌವ್ವನಾವಸ್ಥೆಯಲ್ಲೇ ಮಂಡಿ, ಸೊಂಟ ನೋವಿನಿಂದ ಬಳಲ್ತಿದ್ದಾರೆ.

ಕೊನೆಗೆ ಇದು ವಿಜ್ಞಾನದ ಯುಗವೋ, ಅಜ್ಞಾನದ ಯುಗವೋ ಒಂದೂ ತಿಳಿತಿಲ್ಲ. ಇದು ವಿಪರ್ಯಾಸವೆ ಅನಿಸಿದರು ಕಟ್ಟು ಸತ್ಯವಾಗಿದೆ.