ಮೂರು ಚಕ್ರದ ಸೈಕಲ್ ನಲ್ಲಿ ಕುಳಿತು ಮನೆ ಮನೆಗೂ ಝೊಮಾಟೊ ಫುಡ್ ಡೆಲಿವರಿ ಮಾಡುವ ಅಂಗವಿಕಲನಿಗೆ ಕಂಪನಿಯಿಂದ ವಿಶೇಷ ಗಿಫ್ಟ್..

0
288

ಸಾಧನೆ ಮಾಡುವವರಿಗೆ ಬೆಂಬಲ, ಸಹಕಾರ ನೀಡುವುದು ಒಂದು ಸಾಧನೆಯೇ ಎಂದರೆ ತಪ್ಪಾಗಲಾರದು ಇದಕ್ಕೆ ಸಾಕ್ಷಿಯಾಗಿದ್ದು Zomato ಕಂಪೆನಿ ತೋರುತ್ತಿರುವ ಮಾನವಿತೆಯೇ ಮೆಚ್ಚುವಂತಹದು. ಏಕೆಂದರೆ ಈ ಕಂಪನಿ ಫುಡ್ ಡೆಲಿವರಿ ಮಾಡಲು ದೈಹಿಕವಾಗಿ ಸದೃಡರಿಗೆ ಮಾತ್ರ ಕೆಲಸವನ್ನು ನೀಡದೆ ಅಂಗವಿಕಲರಿಗೂ ಕೆಲಸ ನೀಡಿ ಸುದ್ದಿಯಾಗಿತ್ತು. ಅದರಂತೆ ಮೂರು ಚಕ್ರದ ಸೈಕಲ್‍ನಲ್ಲಿ ಕುಳಿತು ಮನೆ ಮನೆಗೂ ಫುಡ್ ಡೆಲಿವರಿ ಮಾಡುವ ಈತನ ವಿಡಿಯೋ ಬಾರಿ ವೈರಲ್ ಆಗಿತ್ತು, ಇದನ್ನು ನೋಡಿದ zomato ಕಂಪನಿ ಅಂಗವಿಕಲನಿಗೆ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ನೀಡಿ ಪುರಸ್ಕರಿಸಿದೆ.

ಹೌದು ಏಕೆಂದರೆ ನಮ್ಮ ಸಮಾಜದಲ್ಲಿ ಏನನ್ನಾದರೂ ಸಾಧಿಸಬೇಕೆಂದು ತುಡಿತ ಹೊಂದಿರುವ ಅದೆಷ್ಟೊ ಯುವಕರು ಕಾಣ ಸಿಗುತ್ತಾರೆ. ಆದರೆ ಅವರಿಗೊಂದು ವೇದಿಕೆ ಮಾತ್ರ ಒದಗಿ ಬಂದಿರುವುದಿಲ್ಲ. ಆದರೆ ರಾಜಸ್ಥಾನದ ಝೊಮಾಟೊ ಫುಡ್​ ಡೆಲಿವರಿ ಸಂಸ್ಥೆ ಅಂತಹದೊಂದು ಅವಕಾಶ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದ ವಿಕಲಚೇತನರೊಬ್ಬರಿಗೆ ಕೆಲಸ ನೀಡಿದ ಝೊಮಾಟೊ ಸಂಸ್ಥೆ ಈಗ ಇತರೆ ಕಂಪೆನಿಗಳಿಗೆ ಮಾದರಿಯಾಗಿ ನಿಂತಿದ್ದು ವಿಶೇಷ ಚೇತನನಿಗೆ ಮತ್ತಷ್ಟು ಅವಕಾಶವನ್ನು ಒದಗಿಸಲು ಸಜ್ಜಾಗಿದೆ.

ಎಲೆಕ್ಟ್ರಿಕ್ ವಾಹನ ನೀಡಿದ ಝೊಮಾಟೊ;

ಈ ಹಿಂದೆ ಝೊಮಾಟೊ ಡೆಲಿವರಿ ಬಾಯ್ ರಾಮು ಎಲ್ಲೆಡೆ ಫೇಮಸ್ ಆಗಿದ್ದ. ಮೂರು ಚಕ್ರದ ಸೈಕಲಿನಲ್ಲಿ ಕುಳಿತು ಮನೆ ಮನೆಗೂ ಫುಡ್ ಡೆಲಿವರಿ ಮಾಡುವ ಈತನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಾಯಕವೇ ಕೈಲಾಸ ಅಂದುಕೊಂಡು ದುಡಿಯುತ್ತಿದ್ದ ರಾಮು ಸ್ವಾಭಿಮಾನಕ್ಕೆ ಮೆಚ್ಚಿದ ಝೊಮಾಟೊ ಕಂಪನಿ ಈತನಿಗೆ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ನೀಡಿ ಪುರಸ್ಕರಿಸಿದೆ.

ಈ ಬಗ್ಗೆ ಝೊಮಾಟೊ ಫುಡ್ ಡೆಲಿವರಿ ಕಂಪೆನಿಯ ಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯೆಲ್ ತಮ್ಮ ಟ್ವಿಟ್ಟರ್ ರಾಮುವಿನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ರಾಮು ಎಲೆಕ್ಟ್ರಿಕ್ ವಾಹನವನ್ನು ಚಲಾಯಿಸುವ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. `ನಮ್ಮ ಫುಡ್ ಡೆಲಿವರಿ ಪಾಟ್ರ್ನರ್ ರಾಮು ಸಾಹು ನಾವು ಕೊಟ್ಟ ಎಲೆಕ್ಟ್ರಿಕ್ ವಾಹನವನ್ನು ಸಹೃದಯದಿಂದ ಸ್ವೀಕರಿಸಿದ್ದಾರೆ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದರಿಂದ ಕಂಪನಿ ಹೆಸರು ಎತ್ತರಕ್ಕೆ ಬೆಳೆದಿದ್ದು ಒಂದು ಕಡೆಯಾದರೆ ಒಬ್ಬ ವಿಕಲಚೇತನನಿಗೆ ದುಡಿಯಲು ಅವಕಾಶ ನೀಡಿ ಪ್ರೋತ್ಸಾಹಿಸಿದ್ದು ಒಂದು ಅನುಕಂಪದ ಕೆಲಸವೆಂದು ಹೊಗಳಿಕೆಗೆ ಪಾತ್ರವಾಗಿದೆ.

Also read: ವಿಶೇಷ ಚೇತನನೊಬ್ಬ ಯಾರ ಮುಂದೆಯೂ ಕೈ ಚಾಚದೆ ಮೂರು ಚಕ್ರಗಳ ಸೈಕಲಲ್ಲಿ ಕುಳಿತು Zomato ಫುಡ್ ಡೆಲಿವರಿ ಮಾಡುತ್ತಿರುವ ವಿಡಿಯೋ ಬಾರಿ ವೈರಲ್..

ಫುಡ್ ಡೆಲಿವರಿ ಎಂದರೆ ಸಾಮಾನ್ಯವಾಗಿ ಡೆಲಿವರಿ ಬಾಯ್​ ಆಗಿ ಕೆಲಸ ಮಾಡಲು ಕಂಪೆನಿಯು ದ್ವಿಚಕ್ರ ವಾಹನಗಳಿರಬೇಕೆಂದು ಕಂಡೀಷನ್ ಹಾಕುತ್ತವೆ. ಆದರೆ ಇಲ್ಲಿ ವಿಕಲಚೇತನ ಉದ್ಯೋಗಿಗೆ ತನ್ನ ಕೈಯಿಂದಲೇ ತಳ್ಳುವ ವಾಹನದಲ್ಲಿ ಡೆಲಿವರಿ ಮಾಡಲು ಅವಕಾಶ ಮಾಡಿಕೊಡಲಾಗಿ. ಈಗ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ನೀಡಿದೆ ಹಾಗೆಯೇ ಈ ಮೂಲಕ ಇತರರಂತೆ ವಿಕಲಚೇತನನಿಗೂ ಉದ್ಯೋಗವಕಾಶ ನೀಡಲಾಗಿದೆ. ಇದೆ ಮನೋಭಾವನೆಯನ್ನು ಎಲ್ಲ ಕಂಪನಿಗಳು ಮುಂದುವರಿಸಿದರೆ ದೇಶದಲ್ಲಿ ಕಷ್ಟದಿಂದ ಜೀವನ ಸಾಗಿಸುತ್ತಿರುವ ಅಂಗವಿಕಲರಿಗೆ ಶಕ್ತಿ ತುಂಬಿದಂತೆ ಆಗುತ್ತೆ.