ಗ್ರಾಮಿಣ ಪ್ರದೇಶದ ಆರು ಕೋಟಿ ಜನರಿಗೆ ಡಿಜಿಟಲ್ ಶಿಕ್ಷಣ

0
571

 

ಕೇಂದ್ರ ಸರ್ಕಾರ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪ್ರೊತ್ಸಾಹ ನೀಡಲು ಗ್ರಾಮೀಣ ಪ್ರದೇಶದ ಆರು ಕೋಟಿ ಜನರಿಗೆ ಡಿಜಿಟಲ್ ಶಿಕ್ಷಣ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಪ್ರಧಾನಮಂತ್ರಿ ಗ್ರಾಮೀಣ ಪ್ರದೇಶದ 65 ಸಾವಿರ ಸಹಕಾರ ಬ್ಯಾಂಕುಗಳನ್ನು ಕಂಪ್ಯೂಟರೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ. ‘ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ’ ಯೋಜನೆ ಅಡಿಯಲ್ಲಿ ಸರ್ಕಾರ ಡಿಜಿಟಲ್ ಶಿಕ್ಷಣ ನೀಡಲಿದ್ದು, 14 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೂ ಇದೇ ಸಂದರ್ಭದಲ್ಲಿ ತರಬೇತಿ ನೀಡಲಾಗುತ್ತದೆ.

ಡಿಜಿಟಲ್ ಪಾವತಿ ವ್ಯವಸ್ಥೆ ಪೋತ್ಸಾಹಿಸಲು ಮತ್ತು ಇಂಟರ್ನೆಟ್ ಮೂಲಕ ದೋರೆಯುವ ಸೇವೆಗಳ ಲಾಭ ಪಡೆಯುವುದಕ್ಕೆ ಅನುಕೂಲವಾಗಲು ಕೇಂದ್ರ ಸರ್ಕಾರ, ಮುಂದಿನ ಮೂರು ವರ್ಷಗಳಲ್ಲಿ ಗ್ರಾಮೀಣ ನೀಡುವ ಯೋಜನೆ ಹಾಕಿಕೊಂಡಿದೆ. ಡಿಜಿಟಲ್ ಶಿಕ್ಷಣ ಕಾರ್ಯಕ್ರಮದಲ್ಲಿ ಈಗಿರುವ 2.05 ಲಕ್ಷ ಸಾಮಾನ್ಯ ಸೇವಾ ಕೇಂದ್ರವನ್ನು (ಸಿಎಸ್ಸಿ) ಬಳಸಿಕೊಳ್ಳಲು ಉದ್ದೇಶಿಸಲಾಗಿದೆ, 50 ಸಾವಿರ ಸಿಎಸ್ಸಿಯನ್ನು ಶೀಘ್ರದಲ್ಲಿ ಆರಂಭಿಸಲಾಗುತ್ತದೆ.

ಡಿಜಿಟಲ್ ಸಾಧನೆಗಳಾದ ಟ್ಯಾಬ್ಲೆಟ್, ಸ್ಮಾಟ್ ಫೋನ್ ಗಳ ಬಳಕೆ, ಮತ್ತು ಇ- ಮೇಲ್ ಕಳುಹಿಸುವ ಮತ್ತು ಪಡೆಯುವ ವಿಧಾನ, ಸರ್ಕಾರದ ಸೌಲತ್ತುಗಳ ಬಗ್ಗೆ ವೆಬ್ಸೈಟ್ ನಲ್ಲಿ ಮಾಹಿತಿ ಪಡೆಯಲು ನಗದು ರಹಿತಿ ವಹಿವಾಟು ಮಾಡುವುದು ಹೇಗೆ ಎಂಬುದನ್ನು “ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ”ದ ಅಡಿಯಲ್ಲಿ ಶಿಕ್ಷಣ ಕೊಡಲಾಗುತ್ತಿದೆ.

ನಗದುರಹಿತ ವ್ಯವಹಾರವನ್ನು ಜನಪ್ರಿಯಗೊಳಿಸುವು ಸರ್ಕಾರ ಉದ್ದೇಶವಾಗಿದೆ. 2.351 ಕೋಟಿ ಡಿಜಿಟಲ್ ಸಾಕ್ಷರತಾ ಅಭಿಯಾನಕ್ಕೆ ಆಗುವ ವೆಚ್ಚ 65.000 ಸಂಪೂರ್ಣ ಕಂಪ್ಯೂಟರೀಕರಣಹೊಳ್ಳಲಿರುವ ಸಹಕಾರಿ ಬ್ಯಾಂಕ್ಗಳು 15ಸಾವಿರ ಜನರಬಳಿ ಕಂಪ್ಯೂಟರ್ ಇಲ್ಲ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ 2014 ರಲ್ಲಿ ನಡೆಸಿದ 71ನೇ ಶೈಕ್ಷಣಿಕ ಸಮೀಕ್ಷೆಯ ಪ್ರಕಾರ ತಿಳಿಸಿದೆ.