ವಿಶೇಷ ಚೇತನನೊಬ್ಬತಾನು ಗೆದ್ದ ಹಣವನ್ನು ನೆರೆ ಸಂತ್ರಸ್ತರಿಗೆ ದೇಣಿಗೆ ನೀಡಿ ಕಾಲಿನಿಂದಲೇ ಸಿಎಂ ಜೊತೆ ತೆಗೆದುಕೊಂಡ ಸೆಲ್ಫಿ ವೈರಲ್.!

0
50

ಕೆಲವರು ಅಂಗವಿಕರಾಗಿದ್ದರು ಯಾರು ಮಾಡದ ಸಾಧನೆಯನ್ನು ಮಾಡಿ ರಾಷ್ಟೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಾರೆ. ಇನ್ನೂ ಕೆಲವರು ವಿಶೇಷ ಚೇತನರಾಗಿದ್ದರು ದೇಶದ ಬಗ್ಗೆ, ಜನರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುತ್ತಾರೆ. ಇಂತಹವರ ಸಾಲಿನಲ್ಲಿ ಬರುವ ವಿಶೇಷ ಚೇತನನೊಬ್ಬ ಕೇರಳ ನೆರೆ ಸಂತ್ರಸ್ತರಿಗೆ ಸಹಾಯವಾಗಲು ಕೇರಳ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡಿ ಸಿಎಂ ಪಿಣರಾಯಿ ಜೊತೆ ಕಾಲಿನಿಂದಲೇ ಕ್ಲಿಕ್ಕಿಸಿಕೊಂಡ ಸೆಲ್ಪೀ ವೈರಲ್​ ಆಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೇ ಟ್ವೀಟ್ ಮಾಡಿ ಪ್ರಣವ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೌದು ತನ್ನ ಎರಡು ಕೈಯಿಲ್ಲದೆ ಕಾಲಿನಿಂದಲೇ ಚಿತ್ರ ಬಿಡಿಸಿ ಪ್ರಸಿದ್ಧಿ ಪಡೆದಿದ್ದ ಪ್ರಣವ್ ಬಾಲಸುಬ್ರಹ್ಮಣ್ಯನ್ ವಿಶೇಷ ಚೇತನ ಚಿತ್ರ ಕಲಾವಿದರೊಬ್ಬರು ಸ್ವಯಃ ಪೇರಿತರಾಗಿ ಮುಂದೆ ಬಂದಿದ್ದು, ರಿಯಾಲಿಟಿ ಶೋ ಒಂದರಲ್ಲಿ ಗೆದ್ದ ಸಂಪೂರ್ಣ ಹಣವನ್ನು ಕೇರಳ ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ಕೊಟ್ಟಿದ್ದಾರೆ. ಅವರು ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿರುವ ಪ್ರಣವ್ ಅವರು ಕಾಲಿನಿಂದಲೇ ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡು ಸಾಕಷ್ಟು ಹೆಸರುಗಳಿಸಿದ್ದಾರೆ. ಮಂಗಳವಾರ ಕೇರಳ ಸಿಎಂ ಪಿಣರಾಯಿ ವಿಜಯ್‍ನ್ ಅವರನ್ನು ಪ್ರಣವ್ ಭೇಟಿಯಾಗಿ ಕೇರಳ ನೆರೆಸಂತ್ರಸ್ತರ ನೆರವಿಗಾಗಿ ದೇಣಿಗೆ ಚೆಕ್ ನೀಡಿದ್ದಾರೆ.
ಅಲ್ಲದೆ ಇದೇ ವೇಳೆ ಪ್ರಣವ್ ಕಾಲಿನ ಬೆರಳಿಂದಲೇ ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ವಿಶೇಷ ಚೇತನರಾಗಿದ್ದರೂ ಪ್ರಣವ್ ಬೇರೆಯವರಿಗೆ ಸಹಾಯ ಮಾಡುತ್ತಿರುವ ಗುಣ ಪಿಣರಾಯಿ ಅವರ ಮನಗೆದ್ದಿದೆ. ಹೀಗಾಗಿ ಪ್ರಣವ್ ಜೊತೆಗೆ ತಾವಿರುವ ಫೋಟೋಗಳನ್ನು ಪಿಣರಾಯಿ ಅವರು ಟ್ವೀಟ್ ಮಾಡಿ ಪ್ರಣವ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಅವರೊಂದಿಗೆ ಕಳೆದ ಕ್ಷಣದ ಬಗ್ಗೆ ಹಂಚಿಕೊಂಡಿದ್ದಾರೆ.

ಇಂದು(ಮಂಗಳವಾರ) ಬೆಳಗ್ಗೆ ನನಗೆ ಹೃದಯಸ್ಪರ್ಶಿ ಅನುಭವವಾಯಿತು. ಅಲತ್ತೂರಿನ ಚಿತ್ರ ಕಲಾವಿದ ಪ್ರಣವ್ ಕಚೇರಿಗೆ ಆಗಮಿಸಿ ಸಿಎಂ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಹಾಗೆಯೇ ವಿಶೇಷ ಚೇತನರಿಗೆ ಕೇರಳ ಸರ್ಕಾರ ನೀಡುತ್ತಿರುವ ಸಹಕಾರಕ್ಕೆ ಪ್ರಣವ್ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಬರೆದುಕೊಂಡು ಪ್ರಣವ್ ಜೊತೆಗಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಇಂದು ಬೆಳಗ್ಗೆ ನನಗೆ ಹೃದಯಸ್ಪರ್ಶಿ ಅನುಭವವಾಯಿತು. ಅಲತ್ತೂರಿನ ಚಿತ್ರ ಕಲಾವಿದ ಪ್ರಣವ್​ ಕಚೇರಿಗೆ ಆಗಮಿಸಿ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ವಿಶೇಷ ಚೇತನರಿಗೆ ಕೇರಳ ಸರ್ಕಾರ ನೀಡುತ್ತಿರುವ ಸಹಕಾರಕ್ಕೆ ಪ್ರಣವ್​​ ಸಂತೋಷ ವ್ಯಕ್ತಪಡಿಸಿದ್ದಾರೆ,” ಎಂದು ಹೇಳಿದ್ದಾರೆ ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪ್ರಣವ್ ಸಹಾಯ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲವೂ ಸರಿಯಾಗಿದ್ದರು ಜನರು ಇನ್ನೊಬ್ಬರ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಅಂತಹದರಲ್ಲಿ ವಿಶೇಷ ಚೇತನರಾಗಿದ್ದರೂ ಬೇರೊಬ್ಬರ ನೆರವಿಗೆ ಬಂದ ಪ್ರಣವ್ ಅವರ ಗುಣವನ್ನು ನಿಜಕ್ಕೂ ಮೆಚ್ಚಲೇಬೇಕು.