ಬಿಜೆಪಿ ಎನೇ ತಂತ್ರ-ಪದ್ಮವ್ಯೂಹ ಮಾಡಿದರೂ ಪಕ್ಷಕ್ಕೆ ಮತ್ತು ಜನರಿಗೆ ಮೋಸ ಮಾಡಿದ ಅನರ್ಹರಿಗೆ ಸೋಲು ಖಚಿತ: ಡಿ.ಕೆ.ಶಿವಕುಮಾರ್!!

0
183

ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸಲು ಡಿ.ಕೆ. ಶಿವಕುಮಾರ್ ಅವರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ಇಂದು ಕೂಡ ಪ್ರಚಾರ ನಡೆಸಿದ್ದು ಡಿಕೆಶಿ ಅಲೆ ಜೋರಾಗಿದೆ. ಹೊಸಕೋಟೆ ಮತ್ತು ಯಶವಂತಪುರ ಕ್ಷೇತ್ರಗಳಲ್ಲಿ ಡಿ.ಕೆ. ಶಿವಕುಮಾರ್ ಅಬ್ಬರದ ಪ್ರಚಾರ ನಡೆಸಿ ಉಪಚುನಾವಣೆಯಲ್ಲಿ 15 ಕ್ಷೇತ್ರದಲ್ಲಿಯೂ ಅನರ್ಹರ ಸೋಲು ಖಚಿತ. ಕಾಂಗ್ರೆಸ್​ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಭವಿಷ್ಯ ನುಡಿದಿದ್ದಾರೆ.

Also read: ಉಪಚುನಾವಣೆಯಲ್ಲಿ ಜೋರಾಗಿದೆ ಹಣ, ಚಿಕನ್ ಪಾಲಿಟಿಕ್ಸ್; ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲು.!

15 ಕ್ಷೇತ್ರಗಳಲ್ಲಿ ಅನರ್ಹರ ಸೋಲು ಖಚಿತ?

ಹೌದು ಬಂಧನ ನಂತರ ಡಿ.ಶಿ ಶಿವಕುಮಾರ್ ಅವರಿಗೆ ಅಭಿಮಾನಿಗಳು ಹೆಚ್ಚಾಗಿದ್ದು, ಉಪಚುನಾವಣೆಯ ಪ್ರಚಾರದಲ್ಲಿ ಭಾರಿ ಬೆಂಬಲ ಸಿಗುತ್ತಿದೆ. ಅದರಂತೆ ಪ್ರಚಾರಕ್ಕೆ ಬೇಟಿ ನೀಡಿದ ಪ್ರತಿಯೊಂದು ಕ್ಷೇತ್ರದಲ್ಲಿವೂ ಡಿಕೆಶಿ ಪ್ರಚಾರ ಪ್ರಭಾವ ಬೀರಿದೆ. ಇಂದು ಕೂಡ ಹೊಸಕೋಟೆ ಮತ್ತು ಯಶವಂತಪುರ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ. ಬಿಜೆಪಿಯವರು ಯಾವುದ್ಯಾವುದೋ ವ್ಯೂಹ ರಚನೆ ಮಾಡುತ್ತಾರೆ. ನಮ್ಮ ತಂತ್ರಗಾರಿಕೆ ನಾವು ಮಾಡುತ್ತಿದ್ದೇವೆ. 15 ಕ್ಷೇತ್ರಗಳಲ್ಲಿ ಅನರ್ಹರ ಸೋಲು ಖಚಿತ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಹೇಳಿದ್ದು. ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿ. ಪಕ್ಷ ಮತ್ತು ಜನರಿಗೆ ಮೋಸ ಮಾಡಿದವರು ಗೆಲ್ಲಬಾರದು. ಇವರನ್ನು ಸೋಲಿಸಿ ಜನರೇ ಬುದ್ಧಿ ಕಲಿಸುತ್ತಾರೆ. ಇನ್ನು ಬೇರೆ ಯಾವ ರಾಜ್ಯದಲ್ಲೂ ಆಪರೇಷನ್ ಕಮಲ ನಡೆಯಲ್ಲ, ಮಹಾರಷ್ಟ್ರದಲ್ಲಿ ಬಿಜೆಪಿಗೆ ಭಾರಿ ಅವಮಾನವಾಗಿದೆ, ಯಡಿಯೂರಪ್ಪ ಸಿಎಂ ಆದಾಗ ಆಪರೇಷನ್ ಕಮಲ ನಡೆಯುವುದು ಸಾಮಾನ್ಯ ಎಂದು ಟೀಕೆ ಮಾಡಿದರು.

Also read: ಉಪಚುನಾವಣೆಯಲ್ಲಿ ಡಿಕೆಶಿ ಹೋದ ಕಡೆಯಲೆಲ್ಲಾ ಜನರ ಜಾತ್ರೆ ಕಂಡು ಹೆದರಿ ಮತ್ತೆ ಐಟಿ ನೋಟಿಸ್ ನೀಡಿತಾ ಮೋದಿ ಸರ್ಕಾರ??

ಯಡಿಯೂರಪ್ಪ ಸಿಎಂ ಆದಾಗ ಆಪರೇಷನ್ ಕಮಲ ನಡೆಯುವುದು ಸಾಮಾನ್ಯ ಎಂದು ಟೀಕೆ ಮಾಡಿದರು. ಅಧಿಕಾರ ಮಾಡಲು ಬಿಡಲ್ಲವೆಂಬ ಸಿಎಂ ಬಿಎಸ್​​ವೈ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. ಸಂದಿಗ್ಧ ಪರಿಸ್ಥಿತಿಯಲ್ಲಿ ಯಾಕೆ ಅಧಿಕಾರ ನಡೆಸಬೇಕು. ಆ ಪರಿಸ್ಥಿತಿ ನಿರ್ಮಾಣಕ್ಕೆ ಯಡಿಯೂರಪ್ಪನೇ ಕಾರಣ ಎಂದು ಹೇಳಿದರು. ಸಮಾಜದಲ್ಲಿ ಒಳ್ಳೆಯ ಗೌರವವಿರುವ ದೊರೆಸ್ವಾಮಿ, ಸಂತೋಷ ಹೆಗಡೆ, ಗೋಪಾಲಗೌಡರು ಹೇಳಿರುವುದನ್ನು ನಾನು ನೋಡಿದ್ದೇನೆ. ಜನ ಅನರ್ಹರ ವಿರುದ್ಧ ನಿಂತು ಪ್ರಜಾಪ್ರಭುತ್ವ ಉಳಿಸಲಿ. ವೇಣುಗೋಪಾಲ್ ಹಿರಿಯ ನಾಯಕರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ ಅದನ್ನು ನಿಭಾಯಿಸುತ್ತಿದ್ದೇವೆ. ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿ ಹಾಕದ ವಿಚಾರವಾಗಿ, ಪಕ್ಷದ ನಿರ್ಧಾರದ ಬಗ್ಗೆ ನನಗೇನು ಗೊತ್ತಿಲ್ಲ. ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ನಾನು ಬದ್ಧ ಎಂದು ಡಿಕೆಶಿ ಹೇಳಿದರು.

ಅನರ್ಹರನ್ನು ಸೋಲಿಸಲು 2 “ಮಾಸ್ಟರ್‌ ಪ್ಲ್ರಾನ್‌’;

Also read: ಆತ್ಮ ರಕ್ಷಣೆಗಾಗಿ ಇನ್ಮುಂದೆ ಮಹಿಳೆಯರು ಬೆಂಗಳೂರಿನ ಮೆಟ್ರೋ ನಿಲ್ದಾಣದೊಳಗೆ ಪೆಪ್ಪರ್​ ಸ್ಪ್ರೇ; ಕೊಂಡೊಯ್ಯಬಹುದು.!

ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ವಿಚಾರದಲ್ಲಿ “ಮಾಸ್ಟರ್‌ ಪ್ಲ್ರಾನ್‌’ ರೂಪಿಸಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು, ಒಕ್ಕಲಿಗ ಸಮುದಾಯದ ಮತಗಳು ನಿರ್ಣಾಯಕವಾಗುವ ಕ್ಷೇತ್ರಗಳಲ್ಲಿ ಸಂದೇಶ ರವಾನೆಗೆ ಮುಂದಾಗಿದ್ದಾರೆ. ಮತದಾನಕ್ಕೆ 3 ದಿನ ಬಾಕಿ ಇರುವಂತೆ ಹದಿನೈದು ಕ್ಷೇತ್ರಗಳಲ್ಲಿನ ಸ್ಥಿತಿಗತಿ ಬಗ್ಗೆ ಚರ್ಚಿಸಿರುವ ಇಬ್ಬರೂ ನಾಯಕರು, ಅಂತಿಮ ಕಾರ್ಯತಂತ್ರದ ಭಾಗವಾಗಿ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು -ಮುಖಂಡರು ಕೆಲಸ ಮಾಡುವಂತೆ ಪ್ರಮುಖರಿಗೆ ನಿರ್ದೇಶನ ನೀಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ. ಅದೇ ರೀತಿ, ಕೆ.ಆರ್‌.ಪೇಟೆ, ಹುಣಸೂರು, ಚಿಕ್ಕಬಳ್ಳಾಪುರ, ಕೆ.ಆರ್‌.ಪುರ, ಮಹಾಲಕ್ಷ್ಮಿಲೇ ಔಟ್‌, ಯಶವಂತಪುರ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಗುಪ್ತ ಸಂದೇಶ ರವಾನೆಗೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ