ದಿವಾಕರ್ ಬಿಗ್ಗ್ ಬಾಸ್ ವಿನ್ನರ್ ಆಗ್ತಾರಾ?? ಚಂದನ್ ಶೆಟ್ಟಿ ದಿವಾಕರ್ ನನ್ನು ಬಿಗ್ಗ್ಬಾಸ್ ವಿನ್ನರ್ ಅಂದಿದ್ದೇಕೆ??

0
654

ಕಿರುತೆರೆಯಲ್ಲಿ ಪ್ರತಿದಿನ ಮನರಂಜನೆಗಾಗಿ ಬಹುಪಾಲು ಮಂದಿ ನೋಡುವ ಬಿಗ್ಗ್ ಬಾಸ್ ಈ ಸೀಸನ್ ನಲ್ಲೂ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ..

ಈ ಭಾರಿ ಸೆಲೆಬ್ರಿಟಿ ಗಳೊಂದಿಗೆ ಮನೆಯೊಳಗೆ ಕಾಮನ್ ಮ್ಯಾನ್ ಗಳು ಕೂಡ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.. ಅದರಲ್ಲೊಬ್ಬ ಸ್ಪರ್ಧಿ ಎಂದರೆ ಅದು ದಿವಾಕರ್.. ಆದರೆ ಸೀಸನ್ ಶುರುವಾದ ತಿಂಗಳಲ್ಲೆ ಮನೆಯ ಇನ್ನೊಬ್ಬ ಸದಸ್ಯರಾದ ಚಂದನ್ ಶೆಟ್ಟಿ ತಾನೊಬ್ಬ ಸೆಲೆಬ್ರಿಟಿಯಾದರೂ ಒಂದು ಸ್ವಲ್ಪವೂ ಅಹಂಕಾರ ತೋರಿಸದೇ ಜನರ ಮನಗೆಲ್ಲುತ್ತಿದ್ದಾರೆ..  ಅಂತಹ ಚಂದನ್ ಶೆಟ್ಟಿ ಸ್ವಲ್ಪವೂ ಸ್ವಾರ್ಥವಿಲ್ಲದೇ ದಿವಾಕರ್ ಈ ಸೀಸನ್ ಗೆಲ್ಲಬೇಕೆಂದು ಹೇಳಿದ್ದಾರೆ..

ನೆನ್ನೆ ನಡೆದ ಟಾಸ್ಕ್ ನಲ್ಲಿ ಪ್ರತಿಯೊಬ್ಬ ಸದಸ್ಯರು ಇನ್ನೊಬ್ಬರಿಗಾಗಿ ಗ್ರೀಟಿಂಗ್ ಮಾಡಬೇಕಾಗಿತ್ತು..  ಅದೇ ಸಂಧರ್ಭದಲ್ಲಿ ಸಕಲ ಕಲಾವಲ್ಲಭ ಚಂದನ್ ಶೆಟ್ಟಿ ಅಧ್ಬುತವಾಗಿ ಕಿಚ್ಚ ಸುದೀಪ್ ದಿವಾಕರ್ ರವರಿಗೆ ಸೀಸನ್ 5 ನ ಟ್ರೋಫಿ ಕೊಡುತ್ತಿರುವ ಹಾಗೆ ಗ್ರೀಟಿಂಗ್ ಒಂದನ್ನು ತಯಾರು ಮಾಡಿದ್ದರು..
ಆಗ ಮಾತನಾಡಿದ ಚಂದನ್ ಶೆಟ್ಟಿ ಈ ಬಿಗ್ಗ್ ಬಾಸ್ ಸೀಸನ್ ೫ ನ್ನು ದಿವಾಕರ್ ಗೆಲ್ಲಬೇಕೆಂದು ಹೇಳಿ ತಮ್ಮ ದೊಡ್ಡತನಕ್ಕೆ ಸಾಕ್ಷಿ ಯಾದರು..

ಈ ಶೋ ಗಳೆ ಇಷ್ಟು ಯಾರು ಗೆಲ್ಲುತ್ತಾರೊ ತಿಳಿಯುವುದಿಲ್ಲ.. ದಿವಾಕರ್ ಗೆದ್ದರೂ ಆಶ್ಚರ್ಯವಿಲ್ಲ.. ಈಗಾಗಲೇ ಕಳೆದ ಸೀಸನ್ ನಲ್ಲಿ ದೊಡ್ಡ ದೊಡ್ಡ ಸೆಲಿಬ್ರೆಟಿ ಗಳನ್ನು ಹಿಂದಿಕ್ಕಿ ಪ್ರಥಮ್ ಟ್ರೋಫಿ ಗೆದ್ದದ್ದು ಎಲ್ಲರಿಗೂ ತಿಳಿದೇ ಇದೆ.. ಅರ್ಹ ಸದಸ್ಯನಿಗೆ ವಿನ್ನರ್ ಪಟ್ಟ ಸಿಕ್ಕರೆ ಅಷ್ಟೇ ಸಾಕು..