ದೀಪಾವಳಿ ಹಬ್ಬದ ವಿಶೇಷ ಸಿಹಿ ತಿಂಡಿ ಶಂಕರ ಪೋಳಿ ಮಾಡೋದು ಹೇಗೆ ಅಂತ ತಿಳಿದುಕೊಳ್ಳಿ..

0
1134

ದೀಪಾವಳಿ ಬಂದ್ರೆ ಸಾಕು, ಮನೆಯಲ್ಲಿ ಹಬ್ಬದ ವಾತಾವರಣ. ತಳಿರು, ತೋರಣ, ಸಡಗರ ಸಂಭ್ರಮಕ್ಕೆ ಪಾರವೆ ಇರುವುದಿಲ್ಲ. ಮನೆಗೆ ಸಂಬಂಧಿಕರು ಬರುತ್ತಾರೆ. ಸಂಬಂದಿಗಳು ಬಂದಾಗ ಅವರಿಗಾಗಿ ಸಿಹಿ ಖಾಧ್ಯ ಏನು ಮಾಡಬೇಕು ಎಂದು ತಲೆಕೆಡಿಸಿ ಕೊಂಡಿರುತ್ತಿರಾ. ಅದಕ್ಕೆ ಇಲ್ಲೊಂದು ಸುಲಭ ಉಪಯವಿದೆ.

ಒಂದು ಗಂಟೆಯಲ್ಲಿ ಶಂಕರ ಪೊಳೆ ಮಾಡುವ ವಿಧಾನವನ್ನು ತಿಳಿಸುತ್ತೆವೆ.
ಮಾಡಲು ಬೇಕಾಗುವ ವಸ್ತುಗಳು
– 1/4 ಸಕ್ಕರೆ
– 1/4 ನೀರು
– 1 ಕಪ್ ಮೈದಾ
– ಒಂದು ಕಪ್ ಟಿ ಸ್ಪೂನ್ ರವೆ
– 1/4 ಎಲಕ್ಕಿ
– ಎರಡು ಟೀ ಸ್ಪೂನ್ ತುಪ್ಪಾ
– ಅರ್ಧ ಟಿ ಸ್ಪೂನ್ ಉಪ್ಪು
– ಇದನ್ನು ಕರೆಯಲು ಬೆಕಾದಷ್ಟು ಎಣ್ಣೆ

ಮೊದಲು ಒಂದು ಪಾತ್ರೆಯಲ್ಲಿ ಸಕ್ಕರೆ ಹಾಗೂ ನೀರನ್ನು ಹಾಕಿಕೊಂಡು ಚೆನ್ನಾಗಿ ಕಲಿಸಿ ಕೊಳ್ಳ ಬೇಕು. ಸಕ್ಕರೆ ಹಾಗೂ ನೀರು ಮಿಶ್ರಣವಾದ ಬಳಿಕ ಮೈದಾವನ್ನು ಹಾಕಿ ನಂತರ ತುಪ್ಪ, ಎಲಕ್ಕಿ, ಉಪ್ಪು ಹಾಕಿ ಕೊಂಡು ಚೆನ್ನಾಗಿ ಕಲಿಸಬೇಕು.

ನಂತರ ಇದು ಹದವಾದ ಬಳಿಕ ಕೊಂಚ ಹೊತ್ತು ಬಿಡಬೇಕು. ಆದ್ರೆ ಅದಾದ ಬಳಿಕ ನಂತರ, ಚಪಾತಿನಂತೆ ಲಟ್ಟಿಸ ಬೇಕು. ನಂತರ ಚಾಕುವಿನ ಸಹಾಯದಿಂದ ಅಡ್ಡ ಗೆರೆಗಳನ್ನು ಹಾಕಬೇಕು. ಅಲ್ಲದೆ ಅದಕ್ಕೆ ವಿರುದ್ಧ ವಾಗಿ ಮತ್ತೆ ಗೆರೆಗಳನ್ನು ಹಾಕಬೇಕು.

ನಂತರ ಅವುಗಳನ್ನು ಬಿಡಿಸಿಕೊಂಡು ಎಣ್ಣೆಯಲ್ಲಿ ಬಿಡಿ. ನಂತರ ಇವುಗಳು ಕೆಂಪು ಬಣ್ಣಕ್ಕೆ ತಿರುಗಿದ ಬಳಿಕ ಎಣ್ಣೆಯಿಂದ ಹೊರ ತೆಗೆಯಬೇಕು. ಸ್ವಾದಿಷ್ಟ ಶಂಕರ ಪೊಳೆ ಸವಿಯಲು ಸಿದ್ಧ.