ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಎಚ್ ಡಿಕೆ, ಡಿಕೆಶಿ ಭೇಟಿ!! ಉಪಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತ??

0
125

ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ವಾತಾವರಣ ಸಧ್ಯ ಭಾರಿ ಗೊಂದಲದಲ್ಲಿದೆ ಏಕೆಂದರೆ ಅನರ್ಹ ಶಾಸಕರಿಗೆ ಜನ ಹೇಗೆ ಮತ ನೀಡುತ್ತಾರೆ ಎನ್ನುವುದು ಒಂದು ರೀತಿಯ ಚರ್ಚೆಯಾದರೆ. ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಏನು ಮಾಡಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ ಕೇಂದ್ರದಲ್ಲಿ ಮೋದಿಯವರನ್ನು ನೋಡಿ ರಾಜ್ಯದಲ್ಲಿ ಬಿಜೆಪಿಗೆ ಮತ ನೀಡುತ್ತಾರೆ ಎನ್ನುವ ಭರವಸೆ ಒಂದು ಕಡೆ ಇದೆ. ಈ ಎಲ್ಲದರ ನಡುವೇ ಪರಿಷತ್ ವಿಪಕ್ಷನಾಯಕ ಎಸ್.ಆರ್ ಪಾಟಿಲ್ ಅನರ್ಹ ಶಾಸಕರನ್ನು ಮಂಗಗಳಿಗೆ ಹೋಲಿಕೆ ಮಾಡಿದ್ದರೆ, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಎಚ್ ಡಿಕೆ, ಡಿಕೆಶಿ ಭೇಟಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಹೌದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಸೋಮವಾರ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಭೇಟಿ ಮಾಡಿದ್ದು, ಕಾಂಗ್ರೆಸ್ – ಜೆಡಿಎಸ್ ಮರು ಮೈತ್ರಿಯ ವದಂತಿಗೆ ಮತ್ತಷ್ಟು ಸಾಕ್ಷಿ ನೀಡಿದೆ. ಇಂದು ಬೆಳಗಾವಿಯಿಂದ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದ್ದ ಕುಮಾರಸ್ವಾಮಿ ಅವರಿದ್ದ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ಹುಬ್ಬಳ್ಳಿಯಲ್ಲಿ ತುರ್ತು ಭೂಸ್ಪರ್ಶವಾಗಿದೆ. ಇದೇ ವೇಳೆ ಬೆಂಗಳೂರಿಗೆ ತೆರಳುತ್ತಿದ್ದ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಇಬ್ಬರೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದರು.

ಈ ವೇಳೆ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಜೊತೆಗೆ ವಿಮಾನ ನಿಲ್ದಾಣದ ವಿಐಪಿ ಲಾಂಜ್ ನಲ್ಲಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಆದರೆ ಮಾತುಕತೆಯ ವಿವರ ಮಾತ್ರ ಬಹಿರಂಗಪಡಿಸಿಲ್ಲ. ಡಿಸೆಂಬರ್ 9ರಂದು ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶದ ಬಳಿಕ ಒಂದು ವೇಳೆ ಬಿಜೆಪಿ ಸ್ಪಷ್ಟ ಬಹುಮತಕ್ಕೆ ಬೇಕಾದ ಸ್ಥಾನಗಳನ್ನು ಗೆಲ್ಲದಿದ್ದರೆ ಮತ್ತೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿಮಾಡಿಕೊಳ್ಳುವ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಮಂಗಗಳು ಮರದಿಂದ ಮರಕ್ಕೆ ಹಾರುತ್ತವೆ. ಅದೇ ರೀತಿ ಪಕ್ಷಾಂತರ ಮಾಡಿದ ಅನರ್ಹರು ಮಂಗನಂತೆ ಆಡಿದ್ದಾರೆ. ಇವರನ್ನು ಮತದಾರರು ಧೂಳಿಪಟ ಮಾಡಿ ಮನೆಗೆ ಕಳಿಸುತ್ತಾರೆ ಎಂದು ಪರಿಷತ್ ವಿಪಕ್ಷನಾಯಕ ಎಸ್.ಆರ್ ಪಾಟಿಲ್ ಅನರ್ಹ ಶಾಸಕರನ್ನು ಮಂಗಗಳಿಗೆ ಹೋಲಿಕೆ ಮಾಡಿದ್ದಾರೆ.

ಮಹಾರಾಷ್ಟ್ರ ಮಾದರಿ ಸರ್ಕಾರ ಬರೋದು ಖಚಿತ;

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರೋದು ಖಚಿತ. ಮಹಾರಾಷ್ಟ್ರ ಮಾದರಿ ನಮ್ಮ ಕಣ್ಣೆದುರಿಗಿದೆ. ಅದೇ ಮಾದರಿಯಲ್ಲಿ ಸಮ್ಮಿಶ್ರ ಸರ್ಕಾರ ಬರಲಿದೆ. ಯಾರು ನಾಯಕ, ಯಾರು ಸಿಎಂ ಎಂಬ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಇದೇ ವೇಳೆ ಉಪಚುನಾವಣೆ ಬಳಿಕ ಯಡಿಯೂರಪ್ಪ ಖುರ್ಚಿಗೆ ಕಂಟಕವಿದೆ ಅಂತ ಭವಿಷ್ಯ ನುಡಿದರು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ 11 ರಿಂದ 12 ಸ್ಥಾನ ಗೆಲ್ಲಲಿದೆ. ರಾಜಕಾರಣದಲ್ಲಿ ಏನಾಗುತ್ತೆ, ಹೆಂಗಾಗುತ್ತೆ ಹೇಳೋಕ್ಕಾಗಲ್ಲ. ಡಿಸೆಂಬರ್ 9ರ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನ ಆಗೋದು ಪಕ್ಕಾ ಎಂದು ಹೇಳಿದ್ದಾರೆ.

ಯಾವುದೇ ಪಕ್ಷದ ಜತೆಗೂ ಮೈತ್ರಿ ಇಲ್ಲ;

ಡಿ. 9ರ ನಂತರ ಯಾವುದೇ ಪಕ್ಷದ ಜತೆಗೆ ಮೈತ್ರಿ‌ ಇಲ್ಲ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡು ಸಂಕಷ್ಟ ಅನುಭವಿಸಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಹೇಗೆ ಬಿತ್ತು ಎಂಬುದು ನನಗೆ ಗೊತ್ತು. ನಾವು ಯಾರ ಜತೆಗೆ ಸೇರುವುದಿಲ್ಲ, ಪಕ್ಷ ಕಟ್ಟಿಕೊಳ್ಳುತ್ತೇವೆ ಅಂದರೆ ಸರ್ಕಾರ ಹೋಗುತ್ತಾ. ಸಿದ್ದರಾಮಯ್ಯ, ಕಾಂಗ್ರೆಸ್ ನಾವು ಒಟ್ಟಾಗದಿದ್ದರೆ ಸರ್ಕಾರ ಹೇಗೆ ಬೀಳುತ್ತೆ. ಬಿಜೆಪಿಯವರ ಬಳಿ 105 ಸೀಟ್ ಇವೆ. ನಾವು ಯಾರ ಜತೆಗೂ ಸೇರಲ್ಲ ಅಂದ್ರೆ ಸರ್ಕಾರ ಹೋಗುತ್ತಾ ಎಂದರು.

Also read: ಉಪಚುನಾವಣೆಯಲ್ಲಿ ಡಿಕೆಶಿ ಹೋದ ಕಡೆಯಲೆಲ್ಲಾ ಜನರ ಜಾತ್ರೆ ಕಂಡು ಹೆದರಿ ಮತ್ತೆ ಐಟಿ ನೋಟಿಸ್ ನೀಡಿತಾ ಮೋದಿ ಸರ್ಕಾರ??