ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಅಧ್ಯಯನ ಕೇಂದ್ರ ಸ್ಥಾಪನೆಯನ್ನು ಸ್ಥಗಿತಗೊಳಿಸಿದ ಬಿಎಸ್‍ವೈ ವಿರುದ್ಧ ಹೋರಾಟದ ಸೂಚನೆ ನೀಡಿದ ಡಿ.ಕೆ. ಶಿವಕುಮಾರ್.!

0
163

ವಿಶ್ವದ ಕಣ್ಣು ಬೆಂಗಳೂರಿನ ಮೇಲಿದೆ ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರಿನ ಅಭಿವೃದ್ದಿಯನ್ನು ಸಹಿಸುತ್ತಿಲ್ಲ. ಕೆಂಪೇಗೌಡರ ಅಧ್ಯಯನ ಕೇಂದ್ರದ ಸ್ಥಾಪನೆಯನ್ನು ನಿಲ್ಲಿಸಿದ್ದಾರೆ, ಇದು ಎಲ್ಲರಿಗೂ ತಿಳಿಯಬೇಕು ಇವರು ಮಾಡುತ್ತಿರುವ ಜಾತಿರಾಜಕಾರಣದಿಂದ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಅಧ್ಯಯನ ಕೇಂದ್ರದ ಸ್ಥಾಪನೆಗೆ ತಡೆ ನೀಡಿದ್ದಾರೆ. ಇದೇ ಯಡಿಯೂರಪ್ಪ ಸರ್ಕಾರದ ಸಾಧನೆ. ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸಿಎಂ ಯಡಿಯೂರಪ್ಪನವರ ವಿರುದ್ಧ ಆರೋಪ ಮಾಡಿದ್ದಾರೆ.

Also read: ಭವಿಷ್ಯ ನುಡಿದ ಡಿ.ಕೆ.ಶಿ; ಎಂಟಿಬಿ ನಾಗರಾಜ್ ಬಿಜೆಪಿಗೆ ಅಸ್ತಿ ಬರೆದುಕೊಟ್ಟರೂ ಸೋಲು ಖಚಿತ, ಮರುಮೈತ್ರಿ ಆದರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರಾ??

ಹೌದು ‘ವಿಶ್ವಮಾನ್ಯ ಬೆಂಗಳೂರು ನಗರವನ್ನು ಕಟ್ಟಿ ಜಾಗತಿಕ ಭೂಪಟದಲ್ಲಿ ಗುರುತಿಸುವಂತಹ ಕೆಲಸ ಮಾಡಿದ ನಾಡಪ್ರಭು ಕೆಂಪೇಗೌಡರ ಹೆಸರಲ್ಲಿ ನಮ್ಮ ಸರ್ಕಾರ, ನಾನು ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಅಧ್ಯಯನ ಕೇಂದ್ರ ರಚನೆ ಮಾಡಿ ಆದೇಶ ಹೊರಡಿಸಿತ್ತು. ಅಲ್ಲದೆ ಅದಕ್ಕೆ ಅಗತ್ಯ ಹಣಕಾಸನ್ನು ಕೂಡ ಬಿಡುಗಡೆ ಮಾಡಿತ್ತು. ಆದರೆ ದ್ವೇಷದ ರಾಜಕಾರಣ ಮುಂದುವರಿಸಿರುವ ಯಡಿಯೂರಪ್ಪನವರ ಸರ್ಕಾರ ಈಗ ಈ ಆದೇಶವನ್ನೂ ರದ್ದು ಮಾಡಿದೆ. ಎಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಸರ್ಕಾರದ ಬಳುವಳಿ ಗೊತ್ತಾಗಿದೆ. ಬೆಂಗಳೂರು ವಿವಿಯಲ್ಲಿ ಕೆಂಪೇಗೌಡ ಅಧ್ಯಯನ ಪೀಠ ಕಾಮಗಾರಿಗೆ ಶ್ರೀ ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಎಲ್ಲರೂ ಸೇರಿ ಅಡಿಗಲ್ಲು ಹಾಕಿದ್ದೆವು. ಆದರೆ ಯಡಿಯೂರಪ್ಪ ಸರ್ಕಾರ ಈಗ ಆ ಕಾಮಗಾರಿಯನ್ನು ಕೈ ಬಿಟ್ಟಿದೆ. 50 ಕೋಟಿ ರೂ. ಕೊಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಬಿಬಿಎಂಪಿ ಆಯುಕ್ತರ ಶಿಫಾರಸನ್ನೇ ನೆಪ ಮಾಡಿಕೊಂಡು ರದ್ದುಗೊಳಿಸಿದ್ದಾರೆ. ಇದಕ್ಕೆ ಯಡಿಯೂರಪ್ಪನವರು ನೇರ ಕಾರಣ ಕಾಮಗಾರಿಗೆ ತಡೆ ನೀಡಿರುವ ಕುರಿತು ನನಗೆ ಮೆಸೇಜ್ ಬಂತು. ಈ ಕುರಿತು ಮುಂದೆ ದೊಡ್ಡ ಹೋರಾಟ ಮಾಡುತ್ತೇವೆ. ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಈಗ ಅದನ್ನೇ ಮಾಡುತ್ತಿದ್ದಾರೆ.

ಈ ಕುರಿತು ಎಲ್ಲ ಶಾಸಕರಿಗೂ ಪತ್ರ ಬರೆದಿದ್ದೇನೆ. ಹಿಂದಿನ ಸರ್ಕಾರದ ಮಂಜೂರಾತಿಯನ್ನು ಕೈಬಿಟ್ಟಿರುವ ಮಾಹಿತಿ ಕೇಳಿದ್ದೇನೆ. ಇದರ ಬಗ್ಗೆ ಹೋರಾಟ ಮಾಡಲೇಬೇಕು. ಈ ಕಾಮಗಾರಿ ನಿಲ್ಲಿಸುವ ಮೂಲಕ ಕೆಂಪೇಗೌಡರ ಹೆಸರಿಗೆ ಕಳಂಕ ತರಲು ಹೊರಟಿದ್ದಾರೆ. ಕೆಂಪೇಗೌಡರು ಒಂದು ಜಾತಿಗೆ ಸೇರಿದವರಲ್ಲ, ಇದು ಬೆಂಗಳೂರಿನ ನಾಗರಿಕರಿಗೆ ಮಾಡಿದ ಅವಮಾನ. ಒಕ್ಕಲಿಗರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದನ್ನು ಮಾಧ್ಯಮದವರೇ ನಿರ್ಧರಿಸಬೇಕು ಎಂದರು. ಅಂಬೇಡ್ಕರ್, ಬಸವಣ್ಣ ಅಧ್ಯಯನ ಪೀಠದಂತೆ ಕೆಂಪೇಗೌಡ ಅಧ್ಯಯನ ಪೀಠ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು.

Also read: ಶ್ರಮಪಟ್ಟು ನನ್ನನು ಜೈಲಿಗೆ ಕಳುಹಿಸಿದವರ ನೆನಪಿಗಾಗಿ ಈ ಗಡ್ಡ ಬಿಟ್ಟೆ; ತಮ್ಮ ಗಡ್ಡದ ಸಿಕ್ರೆಟ್ ಬಿಚ್ಚಿಟ್ಟ ಡಿ.ಕೆ ಶಿವಕುಮಾರ್

ಇದಕ್ಕಾಗಿ 50 ಕೋಟಿ ರೂ. ಬಜೆಟ್ ಕೂಡ ನೀಡಲಾಗಿತ್ತು. ಆದರೆ ಈ ಸರ್ಕಾರ ತಡೆ ಹಿಡಿದಿದೆ. ಈ ಕಾಮಗಾರಿ ಸ್ಥಗಿತಗೊಳಿಸಿದಂತೆ ಬಿಜೆಪಿ ಶಾಸಕರ ಕ್ಷೇತ್ರಗಳ ಯಾವುದಾದರೂ ಕೆಲಸಕ್ಕೆ ತಡೆಯೊಡ್ಡಿದರಾ? ಈ ಕುರಿತು ಚರ್ಚಿಸಿ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು. ಆದರೆ ಬಿಜೆಪಿ ಸರ್ಕಾರ ಅದನ್ನು ಹಿಂಪಡೆದಿರುವುದು ಖಂಡನೀಯ ಹಾಗೂ ಕೆಂಪೇಗೌಡರಿಗೆ ಮಾಡಿದ ಅಪಮಾನ. ಸರ್ಕಾರದ ಈ ನಿರ್ಧಾರ ಕೇವಲ ಒಂದು ಸಮುದಾಯದ ವಿರುದ್ಧ ಮಾಡಿರುವ ಪ್ರಹಾರ ಮಾತ್ರವಲ್ಲ. ಇಡೀ ನಾಡಿಗೇ ಮಾಡಿರುವ ಅವಮರ್ಯಾದೆ ಎಂದು ಹೇಳಿದ್ದಾರೆ. ಸರ್ಕಾರ ಈ ಕೂಡಲೇ ದ್ವೇಷದ ರಾಜಕಾರಣವನ್ನು ನಿಲ್ಲಿಸಬೇಕು. ತಮ್ಮ ಈ ನಿರ್ಧಾರವನ್ನು ಹಿಂಪಡೆದು, ಕೆಂಪೇಗೌಡರ ಹೆಸರಲ್ಲಿ ಅಧ್ಯಯನ ಕೇಂದ್ರ ರಚನೆಯ ಮರು ಆದೇಶವನ್ನು ಹೊರಡಿಸಬೇಕು. ಇಲ್ಲವಾದರೆ ನಾವು ಈ ವಿಚಾರವಾಗಿ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ ಎಚ್ಚರಿಸಿದ್ದಾರೆ.