ಡಿಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ “ಐಟಿ ರೇಡ್ ಅಯ್ತು ಈಗ ಇಡಿ ರೇಡ್-ನ ಸರದಿ”..!

0
826

ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್​ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಐಟಿ ದಾಳಿಯ ನಂತ್ರ ತಣ್ಣಗಾಗಿದ್ದ ಡಿಕೆಶಿ ಐಟಿ ದಾಳಿ ಪ್ರಕರಣ ಮತ್ತೆ ಸುದ್ದಿಯಾಗಿದ್ದು, ಇ ಡಿ ಬಲೆಗೆ ಬಿದ್ರಾ ಇಂಧನ ಸಚಿವ ಡಿ.ಕೆ.ಶಿ ಅನ್ನೋ ಪ್ರಶ್ನೆ ಎದುರಾಗಿದೆ.

ಇವತ್ತು ಇಡಿ ಕರೆ ಬಂದಿರೋದನ್ನ ಒಪ್ಪಿಕೊಂಡ ಡಿಕೆಶಿ ​ ‘ನಿನ್ನೆ ನನಗೆ ಇಡಿ ಅಧಿಕಾರಿಗಳು ಕರೆ ಮಾಡಿದ್ದು ನಿಜ’ ಅಂತ ಸ್ಪಷ್ಟಪಡಿಸಿದ್ರು. ಅಲ್ದೆ, ಕ್ರಾಸ್ ಚೆಕ್ ಮಾಡಿದಾಗ ಇಡಿ ಫೋನ್ ಅನ್ನೋದು ಗೊತ್ತಾಗಿದೆ, ಇಡಿಯವರು ನೋಟಿಸ್ ಕಳಿಸಲು ಅಡ್ರೆಸ್ ಕೇಳಿದ್ದರು ಅಂತ ಹೇಳಿದ್ದಾರೆ.

ಈ ವಿಚಾರವಾಗಿ ನೋಡಿದ್ರೆ ಈ ಹಿಂದೆ ಜನಾರ್ದನ್ ರೆಡ್ಡಿಯ ವಿಚಾರದಲ್ಲಿ ಸಹ ಇಡಿ ತುಂಬ ಕಟ್ಟು ನಿಟ್ಟಾಗಿ ತನಿಖೆ ನಡೆಸಿ ರೆಡ್ಡಿ ಜೈಲು ಸೇರಿದ್ದು ಗೊತ್ತಿರುವ ವಿಚಾರ. ಈಗ ಸಚಿವ ಡಿಕೆ ಶಿವಕುಮಾರ್ ಮೇಲೆ ಕಣ್ಣಿಟ್ಟಿರುವ ಇಡಿ ಅಧಿಕಾರಿಗಳು ಡಿಕೆಯವರ ಅಪಾರ ಸಂಪತ್ತು ಮತ್ತು ಅವರ ವಹಿವಾಟಿನ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದು ಎಲ್ಲರ ಮುಂದಿರುವ ವಿಚಾರ.

ಒಂದು ವೇಳೆ ತನಿಖೆಯಲ್ಲಿ ಅಕ್ರಮ ಆಸ್ತಿ ಮತ್ತು ಅಕ್ರಮ ಸಂಪತ್ತು ಕಂಡುಬಂದ್ರೆ ಜೈಲು ಸೇರುವ ಎಲ್ಲ ಅವಕಾಶಗಳು ಡಿಕೆ ಅವರಿಗೆ ಕಾದಿವೆ ಆದ್ರೆ ಡಿಕೆ ಶಿವಕುಮಾರ್ ಪ್ರಕಾರ ನಾನು ಯಾವುದೇ ಅಕ್ರಮ ಆಸ್ತಿ ಪಾಸ್ತಿ ಗಳಿಸಿಲ್ಲ ನಾನು ಯಾವ ತನಿಖೆಯಾದರು ಸಿದ್ದ ಎಂದು ಹೇಳುತ್ತಿದ್ದಾರೆ.