ಡಿಕೆ ಶಿವಕುಮಾರ್​​ ಮುಖ್ಯಮಂತ್ರಿ ಅಭ್ಯರ್ಥಿ ಆಗೋದನ್ನ ಸಿದ್ದರಾಮಯ್ಯ ತಪ್ಪಿಸಿದ್ರಾ, ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿಗೆ ಸಿದ್ದರಾಮಯ್ಯ ಕಾರಣ ಅಂತೇ..!

0
1095

ಇದಕ್ಕೆ ಉದಾಹರಣೆ ನಮ್ಮ ಮುಂದೆ ಇದೆ ಈ ಹಿಂದೆ ಪರಮೇಶ್ವರ್ ಮುಖ್ಯಮಂತ್ರಿ ಆಗಬಾರದು ಅಂತ ಚುನಾವಣೆಯಲ್ಲಿ ಪರಮೇಶ್ವರ ಅವರನ್ನು ಸೋಲಿಸಿ ಮುಖ್ಯಮಂತ್ರಿ ಆಗೋದನ್ನ ತಪ್ಪಿಸಿದ್ದು ಸಿದ್ದರಾಮಯ್ಯ ಅನ್ನೋದು ಎಲ್ಲರಿಗು ಗೊತ್ತಿರುವ ವಿಚಾರ ಹೀಗಿರುವ ಎಲ್ಲೋ ಒಂದು ಕಡೆ ಡಿಕೆ ಶಿವಕುಮಾರ್ ತಾಯಿ ಹೇಳಿದ್ದು ನಿಜ ಅನ್ಸುತ್ತೆ.

source:Article Window

ಇಂಧನ ಸಚಿವ ಡಿಕೆ ಶಿವಕುಮಾರ್​​ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ ಮಾಡಲು ಸಿಎಂ ಸಿದ್ದರಾಮಯ್ಯ ಕಾರಣ ಅಂತ ಡಿಕೆಶಿ ತಾಯಿ ಗೌರಮ್ಮ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ನನ್ನ ಮಗನಿಂದ ಮುಂದೆ ಬಂದಿದ್ದಾರೆ. ಸಿದ್ದರಾಮಯ್ಯ ನಂಬಿಸಿ ಕತ್ತು ಕುಯ್ಯುತ್ತಿದ್ದಾರೆ. ನನ್ನ ಮಕ್ಕಳನ್ನು ಕಂಡ್ರೆ ಅವರಿಗೆ ಆಗಿ ಬರೋದಿಲ್ಲ. ಅಕ್ಕಿ ಕೊಟ್ಟೆ, ಅದು ಕೊಟ್ಟೆ ಎಲ್ಲಾ ಕೊಟ್ರೂ ಅದೇನು ಅವರ ಮನೆಯಿಂದ ಕೊಟ್ಟಿಲ್ಲ. ರೈತರು ಬೆಳೆದಿದ್ದ ಅಕ್ಕಿಯನ್ನು ಕೊಟ್ಟಿದ್ದಾರೆ. ನನ್ನ ಮಕ್ಕಳ ಮನೆ ಮೇಲೆ ದಾಳಿ ನಡೆದರೂ ಸಿದ್ದರಾಮಯ್ಯ ಯಾಕೆ ಸುಮ್ಮನಿದ್ದಾರೆ? ಸಿದ್ದರಾಮಯ್ಯ ನನ್ನ ಮಕ್ಕಳ ಮೇಲೆ ಕತ್ತಿ ಮಸಿಯುತ್ತಿದ್ದಾರೆ. ಅವರಿಗೆ ಅಧಿಕಾರಿಗಳನ್ನು ಪ್ರಶ್ನಿಸುವ ಹಕ್ಕಿದ್ದರೂ ಸುಮ್ಮನಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

source:Hindustan Times

ತಮ್ಮ ಇಬ್ಬರು ಮಕ್ಕಳ ಬೆಂಬಲಕ್ಕೆ ಸಿಎಂ ಸಿದ್ದರಾಮಯ್ಯ ಎಂದು ನಿಂತಿಲ್ಲ. ನನ್ನ ಮಗನ ಮನೆ ಮೇಲೆ ದಾಳಿಯಾದಾಗ ಸಿದ್ದರಾಮಯ್ಯ ಯಾಕೆ ಪ್ರಶ್ನೆ ಮಾಡಲಿಲ್ಲ. ನನ್ನ ಮಕ್ಕಳ ಇಂದಿನ ಸ್ಥಿತಿಗೆ ಸಿದ್ದರಾಮಯ್ಯ ಅವರೇ ಕಾರಣ ನನ್ನ ಮಕ್ಕಳು ತಪ್ಪು ಮಾಡಿಲ್ಲ, ಜನರಿಗಾಗಿ ಮನೆಯವರನ್ನೆಲ್ಲ ಬಿಟ್ಟು ದುಡಿಯುತ್ತಿದ್ದಾರೆ. ನನ್ನ ಮಗ ಮುಖ್ಯಮಂತ್ರಿಯಾಗ್ತಾನೆ ಅಂತ ಹೀಗೆಲ್ಲಾ ಮಾಡಲಾಗುತ್ತಿದೆ. ಈ ದಾಳಿ ಹಿಂದೆ ಸಿದ್ದರಾಮಯ್ಯ ಕಾರಣ ಅಂತ ಡಿಕೆ ಶಿವಕುಮಾರ ತಾಯಿ ಗೌರಮ್ಮ ಗಂಭೀರ ಆರೋಪ ಮಾಡಿದ್ರು.

ಐಟಿ ಅಧಿಕಾರಿಗಳು ಮನೆಗ ಬಂದರು, ಮನೆಯ ಗೇಟ್‍ನ ಬೀಗ ಹಾಕಿದರು. ಇದ್ಯಾವುದಕ್ಕೂ ನನಗೆ ಬೇಸರವಿಲ್ಲ. ಅವರ ಮನೆಯ ಒಳಗಡೆ ಬಂದು ತಮ್ಮ ಕೆಲಸವನ್ನು ಮಾಡುತ್ತಿದ್ದರು. ನನ್ನಿಂದ ಅವರ ಕೆಲಸಕ್ಕೆ ಯಾವುದೇ ತೊಂದರೆಯಾಗಿಲ್ಲ. ನನ್ನ ಮಕ್ಕಳೂ ಎಂದೂ ತಪ್ಪು ಮಾಡಲ್ಲ, ಹಾಗಾಗಿ ನಾನು ಭಯಗೊಂಡಿಲ್ಲ ಎಂದು ಗೌರಮ್ಮ ಹೇಳಿದರು.