ಕರ್ನಾಟಕದಲ್ಲಿ ಕಿಂಗ್ ಆದರೆ ಮುಂಬೈಗೂ ಕಿಂಗ್? ಹೋಟೆಲ್ ಒಳಗೆ ಬಿಡದಂತೆ ಡಿಕೆ ಶಿವಕುಮಾರ್ ತಡೆದ ಮುಂಬೈ ಪೊಲೀಸ್, ಹೋಟೆಲ್ ಮುಂದೆ ಡಿಕೆಸಿ ಹೈಡ್ರಾಮಾ!!

0
255

ಮೈತ್ರಿ ಸರ್ಕಾರಕ್ಕೆ ಚಮಕ್ ನೀಡಲು ಮುಂಬೈಗೆ ತೆರಳಿದ 13 ಶಾಸಕರನ್ನು ಮನವಲಿಸಲು ತೆರಳಿದ ಟ್ರಬಲ್ ಶೂಟರ್ ಡಿ. ಕೆ ಶಿವಕುಮಾರ್ ಅವರನ್ನು ಹೋಟೆಲ್ ಒಳಗಡೆ ಬಿಡಲು ಮುಂಬೈ ಪೊಲೀಸರು ತಡೆದಿದ್ದಾರೆ. ಇದರಿಂದ ಕೊಪಿತಗೊಂಡ ಸಚಿವ ಡಿ.ಕೆ ಶಿವಕುಮಾರ್ ಒಳಗಡೆ ಬಿಡುವರೆಗೆ ಇಲ್ಲೇ ಕೂರುತ್ತೇನೆ, ಒಬ್ಬನೇ ಬಂದಿದ್ದೇನೆ ಒಬ್ಬನೇ ಸಾಯುತ್ತೇನೆ ಬಿಜೆಪಿ ಅವರು ಲಕ್ಷ ಲಕ್ಷ ಘೋಷಣೆ ಕೂಗಿದರೂ ನಾನು ಹೆದರಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ಪಟ್ಟು ಹಿಡಿದು ಹೋಟೆಲ್ ಮುಂದೆ ಕುಳಿತ್ತಿದ್ದು ರಾಜ್ಯ ರಾಜಕೀಯಕ್ಕೆ ಎಂತಹ ಪರಿಸ್ಥಿತಿ ಎದುರಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Also read: ಸ್ಲಂನಲ್ಲಿ, ಸುಗಂಧದ ಪರಿಮಳ ಬರಬೇಕು, ದುರ್ವಾಸನೆ ಆಗೊಲ್ಲ ಎಂದರೆ ಹೇಗೆ? ಮೈತ್ರಿ ಸರ್ಕಾರದ ನಡೆಗೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ..

“ನೀನು ಕರ್ನಾಟಕದಲ್ಲಿ ಕಿಂಗ್ ಆದರೆ ಮುಂಬೈ ಗೆ ಏನು?” ಎನ್ನುವಂತಹ ಪರಿಸ್ಥಿತಿ ಡಿಕೆಸಿ ಗೆ ಬಂದಿದೆ. ಹೌದು ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಮನವೊಲಿಸಲು ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ, ಹೀಗಾಗಿ ಅತೃಪ್ತ ಶಾಸಕರು ಇರುವ ಮುಂಬಯಿಯ ರಿನೈಸೆನ್ಸ್ ಹೋಟೆಲ್ ಗೆ ಆಗಮಿಸಿದ್ದಾರೆ. ಆದರೆ ಅತೃಪ್ತ ಶಾಸಕರು ತಂಗಿರುವ ಹೋಟೆಲ್ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಿದ್ದು, ಶಿವಕುಮಾರ್ ಅವರನ್ನು ಹೋಟೆಲ್ ಒಳಗೆ ಬಿಡಲು ಪೊಲೀಸರು ನಿರಾಕರಿಸಿದ್ದಾರೆ. ಇದು ಒಂದು ಅವಮಾನದ ಸಂಗತಿಯಾಗಿದೆ.

ಹೋಟೆಲ್ ಒಳಗೆ ಬಿಡದಿದ್ದರೆ ಇಡೀ ದಿನ ಇಲ್ಲೇ ಕಾಯ್ತೀನಿ

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನನ್ನ ಸ್ನೇಹಿತರು ಈ ಹೋಟೆಲ್‍ನಲ್ಲಿದ್ದಾರೆ. ಅವರನ್ನು ಭೇಟಿ ಮಾಡಲು ಬಂದಿದ್ದೇನೆ ಹೊರತು ಯಾರಿಗೂ ನಾನು ಬೆದರಿಕೆ ಹಾಕಲು ಬಂದಿಲ್ಲ. ಹೋಟೆಲ್ ಒಳಗೆ ಬಿಡದಿದ್ದರೆ ಇಡೀ ದಿನ ಇಲ್ಲೇ ಕಾಯ್ತೀನಿ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಸಿಎಂ ಫೆರ್ನಾಂಡಿಸ್ ನನ್ನ ಸ್ನೇಹಿತ, ನಾನು ಇಲ್ಲಿ ರೂಮ್‍ ಬುಕ್ ಮಾಡಿದ್ದೇನೆ. ನನ್ನ ಕುಟುಂಬದ ಸಹೋದರರು ಇಲ್ಲಿನ ಹೋಟೆಲ್ ರೂಮ್‍ನಲ್ಲಿ ಇದ್ದಾರೆ. ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಯಾರಿಗೂ ನಾನು ಬೆದರಿಕೆ ಹಾಕಲು ಬಂದಿಲ್ಲ. ನನ್ನ ಕುಟುಂಬದಲ್ಲಿ ಸ್ವಲ್ಪ ಬಿರುಕು ಉಂಟಾಗಿದೆ. ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ.

Also read: ವಿಭಿನ್ನ ರೀತಿಯಲ್ಲಿ ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆಗೆ ಮೋದಿ ತಯಾರಿ; ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಮಾಡುವಂತೆ ಸಂಸದರಿಗೆ ಮೋದಿ ಸೂಚನೆ..

ಅಷ್ಟೇ ಅಲ್ಲದೆ ನನ್ನ ರೂಮ್ ಕೂಡ ಇದೇ ಹೋಟೆಲ್‍ನಲ್ಲಿದೆ, ಹೀಗಾಗಿ ನಾನು ಬಂದಿದ್ದೇನೆ. ಈ ಹೋಟೆಲ್‍ನಲ್ಲಿರುವ ನಾಯಕರು ಹಾಗೂ ನಾವೆಲ್ಲರೂ ಒಟ್ಟಿಗೆ ರಾಜಕೀಯ ಮಾಡಿದ್ದೇವೆ. ಮಂಗಳವಾರ ಬಿಜೆಪಿ ಅವರು ನಮ್ಮವರನ್ನು ಭೇಟಿಯಾಗಲು ಹೋಟೆಲ್‍ಗೆ ಬಂದಿದ್ದರು ಅವರನ್ನು ಹೇಗೆ ಒಳಗೆ ಬಿಟ್ರಿ ಎಂದು ಪ್ರಶ್ನಿಸಿ, ಆದರೆ ನಾವು ನಮ್ಮ ಪಕ್ಷದವರನ್ನ ಭೇಟಿಯಾಗೋದು ತಪ್ಪಾ? ಹೋಟೆಲ್ ಒಳಗೆ ಬಿಡಲ್ಲ ಅಂದರೆ ಹೇಗೆ? ಇದು ಭಾರತ. ಪೊಲೀಸರ ಜೊತೆಗೇನೆ ಹೋಟೆಲ್ ಒಳಗೆ ಕಳುಹಿಸಿ. ಪೊಲೀಸರು ಸರ್ಕಾರದ ಆದೇಶದಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ನನಗೆ ಒಳಗೆ ಬಿಡದಿದ್ದರೆ ಏನು, ಒಳಗಿರುವ ಶಾಸಕರೇ 5 ನಿಮಿಷದಲ್ಲಿ ನನಗೆ ಫೋನ್ ಮಾಡುತ್ತಾರೆ. ನಮ್ಮ ಶಾಸಕರನ್ನು ಭೇಟಿ ಮಾಡದೇ ನಾನು ಹೋಗಲ್ಲ ಎಂದು ದೃಢ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಗೋಬ್ಯಾಕ್ ಡಿಕೆಸಿ?

Also read: ಮಸೀದಿಯಲ್ಲಿ ಮುಸ್ಲಿಂ ಮಹಿಳೆಯರ ಪ್ರವೇಶ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್; ಅರ್ಜಿದಾರನಿಗೆ ನೀನು ಯಾರು? ಎಂದು ಪ್ರಶ್ನಿಸಿದ ನ್ಯಾಯಪೀಠ..

ಹೀಗಾಗಿ ಪೊಲೀಸರ ಜೊತೆ ಸಚಿವರು ವಾಗ್ವಾದಕ್ಕೆ ಇಳಿದಿದ್ದರು. ಇದೇ ವೇಳೆ ಗೋಬ್ಯಾಕ್ ಡಿಕೆ ಶಿವಕುಮಾರ್ ಎಂದು ಅತೃಪ್ತ ನಾಯಕರ ಬೆಂಬಲಿಗರು ಘೋಷಣೆ ಕೂಗುತ್ತಿದ್ದಾರೆ. ಆದರೆ ಯಾರು ಏನು ಬೇಕಾದರೂ ಮಾಡಲಿ, ಗೋ ಬ್ಯಾಕ್ ಎಂದಾದರೂ ಹೇಳಲಿ, ಗೋ ಎಸ್ ಎಂದಾದರೂ ಹೇಳಲಿ. ನಾನೂ ಈ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದೇನೆ. ಇಡೀ ದಿನಾ ಇಲ್ಲೆ ಇರುತ್ತೇನೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.