ಬಿಜೆಪಿಯ ದ್ವೇಷ ರಾಜಕರಣದಿಂದ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಬಿಟ್ಟು ಕೊಡುವುದಿಲ್ಲ : ಸಿ.ಎಂ.ಗೆ ಡಿ.ಕೆ.ಶಿವಕುಮಾರ್ ಪತ್ರ!!

0
237

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಚಾಲೆಂಜ್ ಮಾಡಿ. ನನ್ನ ಪ್ರಾಣ ಹೋದರು ರಾಮನಗರ ಜಿಲ್ಲೆಯ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಬಿಟ್ಟು ಕೊಡುವುದಿಲ್ಲ, ಈಗ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದೇನೆ, ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದುಪಡಿಸಿರುವ ಅದೇಶವನ್ನು ಹಿಂತೆಗೆದುಕೊಂಡು ಕನಕಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆ ಮರು ಆದೇಶ ಹೊರಡಿಸಬೇಕು, ಇದಕ್ಕೇನಾದರೂ ಬಿಜೆಪಿ ಸರ್ಕಾರ ರಾಜಕೀಯ ಬುದ್ದಿ ತೋರಿಸಿದರೆ ವಿಧಾನ ಸಭೆಯಲ್ಲೇ ನನ್ನ ಪ್ರಾಣಹೋದರು ಮೆಡಿಕಲ್ ಕಾಲೇಜ್ ಬಿಡುವುದಿಲ್ಲವೆಂದು ಹೇಳಿದ್ದಾರೆ.

ಪ್ರಾಣ ಹೋದರು ಮೆಡಿಕಲ್ ಕಾಲೇಜ್ ಬಿಡುವುದಿಲ್ಲ:

ಹೌದು ಮೈತ್ರಿ ಸರ್ಕಾರದ ವೇಳೆ ರಾಮನಗರ ಜಿಲ್ಲೆಯ ಕನಕಪುರಕ್ಕೆ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಲಾಗಿತ್ತು, ಅದರಂತೆ ಸ್ಥಳವು ಕೂಡ ಗುರುತಿಸಿ, ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಕಾಪಿ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿ ಶಂಕುಸ್ಥಾಪನೆ ಮಾಡಲಾಗಿದೆ. ಇದನ್ನು ನಾವು ಸಹಿಸುವುದಿಲ್ಲ, ನಮ್ಮ ಕ್ಷೇತ್ರಕ್ಕೆ ಅನ್ಯಾಯವಾದರೆ ಸುಮ್ಮನೆ ಇರುವುದು ಸಾಧ್ಯವಿಲ್ಲ, ಬೆಂಗಳೂರಿನ ವರೆಗೆ ನಮ್ಮ ಮಕ್ಕಳು ವೈದ್ಯಕೀಯ ಶಿಕ್ಷಣ ಕಲಿಯಲು ಹೋಗಿ ಹಣ ಕಟ್ಟಿ ಸಾಯುತ್ತಿದ್ದಾರೆ. ಅದಕ್ಕಾಗಿ ಕನಕಪುರಕ್ಕೆ ಮಂಜೂರು ಮಾಡಲಾದ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮರು ಆದೇಶ ಹೊರಡಿಸಬೇಕೆಂದು ಡಿ.ಕೆ ಶಿವಕುಮಾರ್ ಆಗ್ರಹಿಸಿ ಮುಖ್ಯಮಂತ್ರಿ ವಿರುದ್ಧ ಗುಡುಗಿದ್ದಾರೆ.

ಇದೇ ವೇಳೆ ಮಾತು ಮುಂದುವರೆಸಿದ ಅವರು ನಾನೇ ಸ್ವಂತ ಮೆಡಿಕಲ್ ಕಾಲೇಜ್ ಮಾಡಬಹುದಿತ್ತು, ಆದರೆ ಸರ್ಕಾರಿ ಕಾಲೇಜ್ ಮಾಡಬೇಕೆಂದು ನನ್ನ ಬಹುದಿನದ ಸ್ವಾರ್ಥವಿತ್ತು, ಅದಕ್ಕಾಗಿ ಅರೋಗ್ಯ ಸಚಿವ ಸ್ಥಾನದ ಬಗ್ಗೆ ರಾಹುಲ್ ಗಾಂಧಿಯವರಿಗೆ ಮನವಿ ಮಾಡಿಕೊಂಡಿದೆ, ಅದಕ್ಕಾಗಿ ನನ್ನ ಸ್ವಾರ್ಥ ಕೂಡ ಇತ್ತು, ಆದರೆ ಬಿಜೆಪಿ ಸರ್ಕಾರದಲ್ಲಿ ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಮಂಜೂರಾಗಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಯಾವುದೇ ಕ್ಯಾಬಿನೆಟ್​ ಇಲ್ಲದೇ ಏಕವ್ಯಕ್ತಿಯಾದ ಸರ್ಕಾರ ನಡೆಸುತ್ತಿದ್ದ ನೀವು ಮಂಜೂರಾಗಿದ್ದ ಆದೇಶವನ್ನು ರಾತ್ರೋರಾತ್ರಿ ರದ್ದುಗೊಳಿಸಿದಿರಿ. ಹಾಗೇ ಇದನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿದ್ದೀರಿ.

ನಾನು ಚಿಕ್ಕಬಳ್ಳಾಪುರಕ್ಕೆ ಕಾಲೇಜು ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ರಾಜ್ಯಕ್ಕೆ ಎಷ್ಟು ಬೇಕಾದರೂ ಮೆಡಿಕಲ್​ ಕಾಲೇಜು ನೀಡುವ ಅಧಿಕಾರ ನಿಮಗೆ ಇದೆ. ಆದರೆ, ಇನ್ನೇನು ಕಾಲೇಜು ಪ್ರಾರಂಭವಾಗುವ ಸಮಯದಲ್ಲಿ ರದ್ದು ಮಾಡಿದ ಆದೇಶಕ್ಕೆ ನನಗೆ ಆಕ್ಷೇಪವಿದೆ. ಇತ್ತೀಚೆಗೆ ಮಾಗಡಿಯಲ್ಲಿ ಕನಕಪುರಕ್ಕೆ ಮೆಡಿಕಲ್​ ಕಾಲೇಜು ನೀಡುವುದಾಗಿ ನೀವು ಹೇಳಿದ್ದೀರಾ. ಇದನ್ನು ಪತ್ರಿಕೆಯಲ್ಲಿ ಗಮನಿಸಿದ್ದೇನೆ. ಅದರಂತೆ ನಾನು ನಿಮಗೆ ಕಾಲೇಜ್ ವಾಪಸ್​ ಮಾಡಿ ಜೊತೆಗೆ ಭೂಮಿ ಪೂಜೆಗೆ ದಿನಾಂಕ ನಿಗದಿ ಮಾಡಿ ಎಂದಿದ್ದಾರೆ. ಒಂದು ವೇಳೆ ನಿಮ್ಮ ಸರ್ಕಾರ ದ್ವೇಷ ರಾಜಕೀಯ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದರೆ, ಈ ಬಗ್ಗೆ ನನ್ನ ಹಾದಿಯಲ್ಲಿ ಹೋರಾಟ ಮಾಡುತ್ತೇನೆ. ಕನಕಪುರದ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದಿದ್ದಾರೆ.