ಡಿಕೆಶಿ ಗೆ ತಾಕತ್ ಇದ್ದಾರೆ ನನ್ನ ವಿರುದ್ಧ ಸ್ಪರ್ದಿಸಲಿ ಎಂದು ಬಹಿರಂಗ ಸವಾಲ್ ಹಾಕಿದ ಸಿ.ಪಿ.ಯೋಗೀಶ್ವರ್…

0
565

ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ ಬಳಿಕ ಕಾಂಗ್ರೆಸ್ ಪಕ್ಷ ಶಕ್ತಿ ಪ್ರದರ್ಶನ ಮಾಡಲು ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಾಗು ಸಚಿವರಾದ ಡಿ.ಕೆ. ಶಿವಕುಮಾರ್, ಹೆಚ್.ಎಂ. ರೇವಣ್ಣ,‌ ಡಾ.ಹೆಚ್.ಸಿ. ಮಹದೇವಪ್ಪ ಸಾಧನಾ ಸಮಾವೇಶದಲ್ಲಿ ಏರ್ಪಡಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಸಚಿವರಾದ ಡಿ.ಕೆ. ಶಿವಕುಮಾರ್ ಈ ಸಮಾವೇಶದಲ್ಲಿ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು, ಈಗ ಸಿಎಂ, ಡಿ.ಕೆ. ಶಿವಕುಮಾರ್ ಮತ್ತು ಸಂಸದ ಹಾಗು ಡಿಕೆಶಿ ತಮ್ಮ ಡಿ.ಕೆ.ಸುರೇಶ ಅವರಿಗೆ ಒಟ್ಟಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ ಎಂದ ಡಿಕೆಶಿ ಗೆ ತಾಕತ್ ಇದ್ದಾರೆ ನನ್ನ ವಿರುದ್ಧ ಸ್ಪರ್ದಿಸಲಿ ಎಂದು ಬಹಿರಂಗ ಸವಾಲ್ ಹಾಕಿದರು. ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ರನ್ನು ಗೆಲ್ಲಿಸಲು ನಮ್ಮ ಬೆಂಬಲ ಪಡೆದಿದ್ದರು. ಈ ಸಾಧನಾ ಸಮಾವೇಶದ ಕಾರ್ಯಕ್ರಮಕ್ಕೆ ಹಣ ನೀಡಿ ಜನರನ್ನು ಕರೆತರಲಾಗಿದೆ. ನಾನು ಪರಿವರ್ತನಾ ಯಾತ್ರೆ ಮಾಡುತ್ತೇನೆ, ಕಾಂಗ್ರೆಸ್ ಪಕ್ಷದ ಸಮಾವೇಶ ಮಾಡಿ ತೋರಿಸಲಿ ಎಂದರು.

ಸಿಎಂ ಜನರ ತೆರಿಗೆ ಹಣದಲ್ಲಿ ಪಕ್ಷದ ಕಾರ್ಯಕ್ರಮ ಮಾಡಿ ಹಣ ಪೋಲು ಮಾಡುತ್ತಿದ್ದಾರೆ, ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಜಾಹೀರಾತುಗಳಲ್ಲಿ ಕೇವಲ ಸುಳ್ಳು ಅಂಕಿ-ಅಂಶ ತೋರಿಸಿ ಮತ ನೀಡಿದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದರು. ಡಿಕೆಶಿ ದೌರ್ಜನ್ಯ ಏನೇ ಇದ್ದರು ಅದು ಕನಕಪುರದಲ್ಲಿ ಮಾತ್ರ, ಅದನ್ನು ಬಿಟ್ಟು ನಮ್ಮ ಕ್ಷೇತ್ರಕ್ಕೆ ಬಂದು ಇಲ್ಲ ಸಲ್ಲದ ಮಾತುಗಳನ್ನು ಆಡಿದರೆ ನಮ್ಮ ಕ್ಷೇತ್ರದ ಜನ ತಕ್ಕ ಉತ್ತರ ನೀಡಲಿದ್ದಾರೆ.

ಇನ್ನು ಮುಂದೆ ಇದೇ ರೀತಿ ಹದ್ದು ಮೀರಿ ಮುಂದುವರಿದರೆ ನಮ್ಮ ಕ್ಷೇತ್ರದ ಓರ್ವ ಹೆಣ್ಣು ಮಗಳ ಕೈಯಿಂದ ಪೊರಕೆಯಲ್ಲಿ ಹೊಡೆಸಲಾಗುವುದು ಎಂದರು. ಸಂಸದ ಡಿ.ಕೆ. ಸುರೇಶ್ ಜಿಲ್ಲೆಯಲ್ಲಿ ಎರಡು ಕಲ್ಲು ಗಣಿಗಾರಿಕೆ ಹೊಂದಿದ್ದಾರೆ ತಮಗೆ ಬೇಕಾದ ಮಹಿಳಾ ಅಧಿಕಾರಿಗೆ ಬಡ್ತಿ ನೀಡಿ ಅದೇ ಜಿಲ್ಲೆಗೆ ನೇಮಕ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿಯನ್ನು ವಿಸ್ತರಿಸಲಾಗುವುದು ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಪರಿವರ್ತನಾ ಯಾತ್ರೆ ಮಾಡುತ್ತೇನೆ ಎಂದರು.