ಈ ಹಿಂದಿನ ದಿನಗಳಲ್ಲಿ ವಾಹನ ಹೇಗೊ ಖರೀದಿ ಮಾಡಬಹುದಿತ್ತು ಆದರೆ ಡ್ರೈವಿಂಗ್ ಲೈಸೆನ್ಸ್ ತೆಗೆದುಕೊಳುವುದೇ ಒಂದು ದೊಡ್ಡ ತಲೆನೋವು ಆಗಿತ್ತು ಕಾರಣ ಅಂದರೆ ಮಧ್ಯವರ್ತಿಗಳ ಹಾವಳಿಯಿಂದ ಲೆಸೆನ್ಸ್ ಗೆ ಅಂತ ಸಾವಿರಾರು ರೂಪಾಯಿ ಹಣನಿಡಿ ಅವರು ಕರೆದಾಗ ಹೋಗಿ ಲೆಸೆನ್ಸ್ ಪಡೆಯೋದು ಯಾರಿಗೂ ಬೇಡವಾಗಿತ್ತು. ಈ ಎಲ್ಲ ಸಮಸ್ಯೆಯನ್ನು ಆಲಿಸಿದ ಸರ್ಕಾರ ಇದಕ್ಕೆ ಸರಳವಾದ ಉಪಾಯ ತಂದಿದೆ ಇಂಟರ್ನೆಟ್ ಮೂಲಕ ನೀವೇ ಯಾರಿಗೂ ಹೆಚ್ಚಿನ ಹಣ ನೀಡದೆ ಕಡಿಮೆ ಖರ್ಚಿನಲ್ಲಿ ಲೈಸನ್ಸ್ ಪಡೆದು ಯಾವ ಪೊಲೀಸ್-ರಿಗೂ ಹೆದರದೆ ನಿಮ್ಮ ವಾಹನ ನಿಮ್ಮ ಹಕ್ಕು ಎಂಬ ದೈರ್ಯದಿಂದ ವಾಹನ ಸವಾರಿ ಮಾಡಬಹುದು. ಅದು ದ್ವಿಚಕ್ರ ಅಥವಾ ಕಾರ್ ಮೋಟರ್ಸ್ ಮತ್ತು ಇನ್ನೂ ಬೇರೆ ಬೇರೆ ರೀತಿಯ ವಾಹನ ಚಲಾವಣಾ ಪರವಾನಿಗೆ ಪಡೆಯಬಹುದು ಅದು ಹೇಗೆ ಅಂದ್ರೆ ಇಲ್ಲಿದೆ ನೋಡಿ ಸರಳವಾದ ವಿಧಾನ.
ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್ಲೈನ್ಲ್ಲೇ ಕೆಲಸಗಳನ್ನು ಫಟಾಫಟ್ ಅಂತ ಮುಗಿಸಿ ಬಿಡಬಹುದು. ಹಾಗೇನೆ ಡ್ರೈವಿಂಗ್ ಲೈಸನ್ಸ್ ಕೂಡ ಪಡೆಯಬಹುದು
ಹಿಂದೆ ಯಾವುದೇ ಕೆಲಸ ಕಾರ್ಯ ನಡೆಯಬೇಕು ಎಂದರೆ ನಾವು ಕಚೇರಿಗೆ ಭೇಟಿ ನಿಡಲೇ ಬೇಕಾದ ಸನ್ನಿವೇಶವಿತ್ತು. ಆದರೆ ಇತ್ತೀಚಿಗೆ ಎಷ್ಟೋ ಕೆಲಸ ಕಾರ್ಯ ಆನ್ಲೈನ್ ಮೂಲಕವೇ ನಡೆಯುತ್ತದೆ. ಹಾಗೆಯೆ ಡ್ರೈವಿಂಗ್ ಲೈಸೆನ್ಸ್ ಗಾಗಿ ನಾವು ಈ ಹಿಂದೆ ಹಲವಾರು ಭಾರಿ ಕಚೇರಿಗೆ ಹೋಗೆ ಮಾಡಿಕೊಳ್ಳಬೇಕಿತ್ತು. ಆದರೆ ಈಗ ಅಂತಹ ಪ್ರಮೇಯ ಇಲ್ಲ. ನಾವು ಇರುವ ಜಾಗದಲ್ಲಿಯೇ ಎಲ್ಲ ಕೆಲಸವು ಮುಗಿಯುತ್ತೆ. ಡ್ರೈವಿಂಗ್ ಲೈಸೆನ್ಸ್ ಅನ್ನು ನಾವು ಆನ್ಲೈನ್ಲ್ಲಿಯೇ ಅರ್ಜಿ ಸಲ್ಲಿಸಿ ಪಡೆಯಬಹುದು. ಹಾಗಾದರೆ ಹೇಗೆ ಸಲ್ಲಿಸಬೇಕು ನೋಡೋಣ ಬನ್ನಿ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಹೇಗೆ..?
ಮೊದಲು http://transport.karnataka.gov.in/index.php/ ಈ ಜಾಲತಾಣಕ್ಕೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ವಾಹನ ಚಲನ ಪರವಾನಗಿ ಪತ್ರ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ 2 ರೀತಿಯ ಆನ್ಲೈನ್ ವ್ಯವಸ್ಥೆಯ DL ಅನ್ನು ಮಾಡಲಾಗಿದೆ. ಸಾರಥಿ 3 ಹಳೆಯ ವಿಧಾನ. ಸಾರಥಿ 4 ಹೊಸ ವಿಧಾನವಾಗಿದೆ. ಸಾರಥಿ 4 ಅನ್ನು ಆಯ್ಕೆ ಮಾಡಿಕೊಳ್ಳಿ. ಸಾರಥಿ 4 ಮೂಲಕ ಕಲಿಕಾ ಚಾಲನಾ ಪತ್ರ ಹಾಗೂ ಚಾಲನಾ ಅನುಜ್ಞಾ ಪತ್ರಕ್ಕೆ ಅರ್ಜಿಸಲ್ಲಿಸಲು ನೀವು ಮುಂದಾದರೆ, ಅಲ್ಲಿ ಹೊಸ ಕಲಿಕಾ / ಚಾಲನಾ ಲೈಸೆನ್ಸ್ ಸಾರಥಿ – 4 ಎಂಬ ಆಯ್ಕೆ ಇರುತ್ತದೆ. ಅಲ್ಲಿ ನಿಮ್ಮ ಹತ್ತಿರದ ಆರ್ಟಿಒ ಕಚೇರಿಯನ್ನು ಆಯ್ದುಕೊಂಡು ನೀವು ಅರ್ಜಿ ಸಲ್ಲಿಕೆಯನ್ನು ಮುಂದುವರೆಸಿ. ಆ ಕಲಾಂ ನಲ್ಲಿ ನಿಮ್ಮ ಹತ್ತಿರದ RTO ಅನ್ನು ಆಯ್ಕೆ ಮಾಡಿಕೊಳ್ಳಿ. ಈ ಪರೀಕ್ಷೆಯು ಗಣಕ ಯಂತ್ರದ ಮೂಲಕವೇ ಇರುತ್ತದೆ. ನಿಮಗೆ 15 ಪ್ರಶ್ನೆ ಕೇಳಲಾಗಿರುತ್ತದೆ, ಕನಿಷ್ಠ 10ಕ್ಕೆ ಸರಿ ಉತ್ತರ ನೀಡಿದರೆ ನಿಮಗೆ ಪರವಾನಗಿ ದೊರೆಯುತ್ತದೆ.
Also read: ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ಬೇಕಾದ ಜಾಗ ದಿನ ವಾರಗಳ ಕಂಪ್ಲೀಟ್ ಮಾಹಿತಿ..
ಈ ಮೇಲಿನ ಮಾದರಿಯಲ್ಲಿ ನೀವು ಆನ್ ಲೈನ್ ಮೂಲಕ ವಾಹನ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬಹುದು. ಏನೇ ಅಗಲ್ಲಿ ಇಂತಹ ಮತ್ತಷ್ಟು ವ್ಯವಸ್ಥೆ ಬರಲಿ , ಮತ್ತಷ್ಟು ಡಿಜಿಟಲಿಕರಣ ಮಾಡಲಿ ಎನ್ನುವುದೇ ನಮ್ಮ ಉದ್ದೇಶ. ಇಂತಹ ವ್ಯವಸ್ಥೆಯಿಂದ ಮಧ್ಯವರ್ತಿಗಳ ಹಾವಳಿಯು ಸಹ ತಪ್ಪುತ್ತದೆ.