ಬೆವರಿನಿಂದಾಗಿ ಬಟ್ಟೆ ಬೇಗನೆ ಒದ್ದೆಯಾಗಿ ಮೈ ದುರ್ವಾಸನೆ ಬರುತ್ತದೆಯೇ? ಹಾಗಾದ್ರೆ ದುರ್ವಾಸನೆ ತಡೆಯಲು ಇಲ್ಲಿದೆ ನೋಡಿ ಸುಲಭ ಉಪಾಯ..

0
576

ದೇಹದ ದುರ್ವಾಸನೆ ತಡೆಯಲು ಇಲ್ಲಿದೆ ಸುಲಭ ಉಪಾಯ:

ನಿಮ್ಮ ದೇಹವು ದುರ್ವಾಸನೆ ಬೀರುತ್ತಿದ್ದರೆ. ಇದರಿಂದ ಹತ್ತಿರದಲ್ಲಿರುವ ವ್ಯಕ್ತಿಗಳಿಗೆ ಕಿರಿಕಿರಿ ಉಂಟಾಗಬಹುದು. ಇದರಿಂದ ನಿಮ್ಮ ವಯಕ್ತಿಕ ಘನತೆಗೆ ದಕ್ಕೆ ಬರುವ ಸಾದ್ಯತೆ ಇರುತ್ತೆ. ಇದರ ಪರಿಹಾರವಾಗಿ ಬಹಳಷ್ಟು ಆಸ್ಪತ್ರೆ ಔಷಧಿಯನ್ನು ತೆಗೆದುಕೊಂಡರು ಕೂಡ ಈ ವಾಸನೆಯ ಪಲ ಕಡಿಮೆಯಾಗುವ ಮಾತೆ ಇಲ್ಲ. ಇದರಿಂದ ನೀವು ಬೇರೆಯವರ ಹಾಗೆ ಎದುರು ನಿಂತು ಮಾತನಾಡಲು ಮುಜುಗರವಾಗುತ್ತೆ. ಮುಖ್ಯವಾಗಿ ಪ್ರಯಾಣ ಮಾಡುವಾಗ ಈ ತೊಂದರೆಯಿಂದ ಎಷ್ಟೊಂದು ಕಿರಿಕಿರಿ ಅನುಭವಿಸುತ್ತಿರ.
ಅದರಲ್ಲೂ ರಾಸಾಯನಿಕ ಸೌಂದರ್ಯವರ್ಧಕಗಳು, ಮದ್ಯ ಮಿಶ್ರಿತ ಸುವಾಸನಾವರ್ಧಕಗಳು ನಿಮ್ಮ ಚರ್ಮಕ್ಕೆ ಹಾನಿಯನ್ನುಂಟು ಮಾಡಿ ದುರ್ವಾಸನೆ ಉಂಟಾಗಲು ನೇರ ಕಾರಣವಾಗುತ್ತವೆ. ಈ ರಾಸಾಯನಿಕ ಉತ್ಪನ್ನಗಳಿಂದ ದೂರವಿರಲು, ಪ್ರಾಕೃತಿಕ ವಿಧಾನಗಳಿಂದ ನಿಮ್ಮ ದೇಹದ ದುರ್ವಾಸನೆಯನ್ನು ಕಡಿಮೆ ಮಾಡುಬಹುದು. ಕೆಲವರಿಗಂತೂ ಬೆವರಿನಿಂದಾಗಿ ಬಟ್ಟೆ ಬೇಗನೆ ಒದ್ದೆಯಾಗಿ ಮೈ ವಾಸನೆ ಬರಲಾರಂಭಿಸುತ್ತದೆ. ಈ ಬೆವರಿನ ವಾಸನೆ ಹೆಚ್ಚಾಗಿ ದೇಹ ದಪ್ಪವಿರುವರು ಈ ಸಮಸ್ಯೆಯಿಂದ ಬಳಲುತ್ತಾರೆ. ಅದರಲ್ಲಿ ಕೆಲವೊಬ್ಬರು ಅಂತು ಎಷ್ಟೇ ತಂಪ್ಪಿದ್ದರು ಬೆವರಿ ವಾಸನೆ ಬರುತ್ತಾರೆ. ಅಂತಹವರು ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಮೈ ದುರ್ಗಂಧವನ್ನು ತಡೆಯಬಹುದು.


Also read: ಪೂರ್ವಜರ ಕಾಲದಿಂದ ಪುಜಿಸುತ್ತ ಬಂದಿರುವ ರುದ್ರಾಕ್ಷಿಯಲ್ಲಿರುವ ಔಷಧಿಯ ಗುಣಗಳು ಗೊತ್ತಾದ್ರೆ ಇಗಲೇ ರುದ್ರಾಕ್ಷಿ ಹುಡುಕುತ್ತಿರ..

ಬ್ಯಾಕ್ಟಿರಿಯ ವಿರುದ್ಧ ಹೋರಾಡುವ ಸೋಪು ಬಳಸಿ:

ಹೆಚ್ಚು ಹೆಚ್ಚು ಬೆವರುವರು ಬ್ಯಾಕ್ಟಿರಿಯ ವಿರುದ್ಧ ಹೋರಾಡುವ ಸೋಪು ಬಳಸಿ ದಿನದಲ್ಲಿ ಎರಡು ಹೊತ್ತು ಸ್ನಾನ ಮಾಡುವುದು ಒಳ್ಳೆಯದು. ಸ್ನಾನ ಮಾಡುವಾಗ ಸುದ್ದವಾದ ನೀರನ್ನು ಸರಿಯಾಗಿ ಬಳಸಿ ಮೈತುಂಬ ಉಜ್ಜಿ.

ಶುದ್ಧವಾದ ಬಟ್ಟೆ ಧರಿಸಿ:


Also read: ಪ್ರತಿನಿತ್ಯ ಮದ್ಯಪಾನ ಮಾಡುವುದರಿಂದ ದೇಹಕ್ಕೆ ಎಂಥ ಹಾನಿ ಮಾಡುತ್ತೆ ಅಂತ ತಿಳಿದುಕೊಂಡರೆ, ಖಂಡಿತ ಕುಡಿತ ಕಡಿಮೆ ಮಾಡ್ತೀರ!

ಪ್ರತಿದಿನ ಎರಡು ಬಾರಿ ಬಟ್ಟೆಗಳನ್ನು ಬದಲಿಸಿ. ಏಕೆಂದರೆ ಬೆವರಿರುವ ಬಟ್ಟೆಯಲ್ಲಿ ಬ್ಯಾಕ್ಟೀರಿಯಾಗಳಿರುತ್ತದೆ. ಇದು ದೇಹದ ದುರ್ಗಂಧವನ್ನು ಹೆಚ್ಚಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಕಾಟನ್ ಮತ್ತು ಲೆನಿನ್ ಬಟ್ಟೆಗಳನ್ನು ಧರಿಸುವುದು ಉತ್ತಮ.

ಜೇನು ಬೆರೆಸಿದ ನೀರಿನಿಂದ ಸ್ನಾನ ಮಾಡುವುದು:

ಪ್ರತಿದಿನವೂ ಸ್ನಾನ ಮಾಡಿದ ನಂತರ ಲಾಸ್ಟ್ 2 ಮಗ್ ನಷ್ಟು ನೀರು ಇರುವಾಗ 1 ಚಮಚ ಜೇನು ಬೆರೆಸಿ ಆ ನೀರನ್ನು ಮೈಗೆ ಹಾಕಿಕೊಳ್ಳಿ. ಹೀಗೆ ಮಾಡಿದರೆ ದೇಹ ದುರ್ಗಂಧ ಬೀರುವುದನ್ನು ತಡೆಯಬಹುದು.

ಕುಡಿಯಿವ ನೀರಿಗೆ ಗೋಧಿ ಹುಲ್ಲು ಹಾಕಿ ಕುಡಿಯುವುದು:


Also read: ಎಷ್ಟೇ ಕೊರೆಯಿವ ಚಳಿ ಇದ್ದರು ಈ ಮನೆಮದ್ದು ಪಾಲಿಸಿ; ಚರ್ಮದ ಬಿರುಕು ಯಾತನೆಯಿಂದ ನಿಮ್ಮ ಚರ್ಮವನ್ನು ರಕ್ಷಿಸಿ.

ದೇಹದ ದುರ್ವಾಸನೆ ತಡೆಯಲು ಪ್ರತೀದಿನ ಬೆಳಗ್ಗೆ ಸ್ವಲ್ಪ ಗೋಧಿ ಹುಲ್ಲನ್ನು ಪೇಸ್ಟ್ ಮಾಡಿ ನೀರಿನಲ್ಲಿ ಹಾಕಿ ನೀರು ಕುಡಿಯಿರಿ. ಇದು ಉತ್ತಮವಾದ ಪರಿಹಾರವಾಗಿದೆ.

ಅಡುಗೆ ಸೋಡಾ ಗೋಧಿ ಹಿಟ್ಟು:

ಸ್ವಲ್ಪ ಗೋಧಿ ಹಿಟ್ಟನ್ನು ಅಡುಗೆ ಸೋಡಾ ಪುಡಿಯೊಂದಿಗೆ ಮಿಶ್ರಣ ಮಾಡಿ, ಸ್ನಾನದ ವೇಳೆ ಈ ಮಿಶ್ರಣದಿಂದ ಕಂಕುಳವನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ದೇಹ ದುರ್ವಾಸನೆ ಕಡಿಮೆಯಾಗುತ್ತದೆ.

ಮಸಾಲೆಯುಕ್ತ ಆಹಾರ ತಿನ್ನುವುದು ಕಡಿಮೆಮಾಡಿ:

ಹೆಚ್ಚು ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಮತ್ತು ಕೆಫಿನ್ ಹೊಂದಿರುವ ಆಹಾರ ಸೇವಿಸುವುದರಿಂದ ಬೆವರು ವಾಸನೆ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಇಂತಹ ಆಹಾರಗಳ ಸೇವೆಯನ್ನು ಕಡಿಮೆಗೊಳಿಸಿ.


Also read: ದೀರ್ಘಕಾಲದ ಯಕೃತ್ತಿನ ರೋಗ ಲಕ್ಷಣಗಳು ಮತ್ತು ಪರಿಣಾಮಗಳಿಗೆ ಸರಳವಾದ ಮನೆಮದ್ದು; ಆಹಾರ ಕ್ರಮಗಳು ಇಲ್ಲಿದೆ ನೋಡಿ..

ಹ್ಯಾಂಡ್ ಸ್ಯಾನಿಟೈಸರ್:

ಬೆವರಿನ ದುರ್ವಾಸನೆಯನ್ನು ತಡೆಯಲು ಹ್ಯಾಂಡ್​ ಸ್ಯಾನಿಟೈಸರ್​ನ್ನು ಬಳಸಬಹುದು. ಸ್ನಾನದ ಬಳಿಕ ಹ್ಯಾಂಡ್ ಸ್ಯಾನಿಟೈಸರ್​ನ್ನು ಕಂಕುಳಕ್ಕೆ ಹಚ್ಚುವುದರಿಂದ ದುರ್ವಾಸನೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ನಿಂಬೆ ರಸ:


Also read: ಹಿಮ್ಮಡಿ ಬಿರುಕಿನಿಂದ ನೋವು ಅನುಭವಿಸುತ್ತಿದ್ದಿರ..? ಹಾಗಾದ್ರೆ ನಾವು ಹೇಳುವ ರೀತಿ ನಿಂಬೆಹಣ್ಣನು ಬಳಸಿ ಕೆಲವೇ ದಿನದಲ್ಲಿ ನಿಮ್ಮ ಹಿಮ್ಮಡಿ ಕೋಮಲವಾಗುತ್ತೆ..

ಸ್ನಾನದ ನೀರಿಗೆ ಎರಡು ಹನಿಗಳಷ್ಟು ನಿಂಬೆ ರಸವನ್ನು ಮಿಶ್ರಣ ಮಾಡಿ. ಏಕೆಂದರೆ ನಿಂಬೆಯನ್ನು ನೈಸರ್ಗಿಕ ಡಿಯೊಡರೆಂಟ್ ಎಂದು ಪರಿಗಣಿಸಲಾಗುತ್ತದೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ಬೆವರಿನ ವಾಸನೆ ಕಡಿಮೆಯಾಗುತ್ತದೆ.