ನಮಾಜ್‌ ಮಾಡಲು ಮಸೀದಿ ಬೇಕಾಗಿಲ್ಲ; ತೀರ್ಪಿನ ಮರು ಪರಿಶೀಲನೆಯ ಪ್ರಶ್ನೆಯೇ ಇಲ್ಲ -ಸುಪ್ರೀಂ…

0
395

ಮಸೀದಿ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ. ನಮಾಜ್‌ಗೆ ಮಸೀದಿಯೇ ಬೇಕಾಗಿಲ್ಲ’ ಎಂದು 1994ರಲ್ಲಿ ನೀಡಿದ ತೀರ್ಪನ್ನು ಪುನರ್‌ ವಿಮರ್ಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಪ್ರಕರಣವನ್ನು ಐವರು ಸದಸ್ಯರ ನ್ಯಾಯಪೀಠಕ್ಕೆ ವರ್ಗಾಯಿಸಲೂ ಮುಖ್ಯ ನ್ಯಾ| ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಒಪ್ಪಿಲ್ಲ.

Also read: 800 ವರ್ಷಗಳ ಪದ್ಧತಿಗೆ ತೆರೆ; ಶಬರಿಮಲೆ ದೇಗುಲಕ್ಕೆ ಮಹಿಳೆಯರೂ ಪ್ರವೇಶಿಸಬಹುದು..!!

ಸರ್ವೋಚ್ಚ ನ್ಯಾಯಾಲಯ ನೀಡಿದ ಈ ಮಹತ್ವದ ತೀರ್ಪನ್ನು ಆರ್‌ಎಸ್‌ಎಸ್‌, ಬಿಜೆಪಿ ಹಾಗೂ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ ಸ್ವಾಗತಿಸಿದ್ದು, ಆದಷ್ಟು ಬೇಗ ಭೂ ವಿವಾದ ಸಂಬಂಧವೂ ನ್ಯಾಯಯುತ ತೀರ್ಪು ಹೊರಬೀಳಲಿ ಎಂದಿವೆ. ಈ ವೇಳೆ, ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣ ಕುರಿತು ಪ್ರಸ್ತಾವಿಸಿದ ದೀಪಕ್‌ ಮಿಶ್ರಾ, ಸಿವಿಲ್‌ ವಿವಾದಗಳನ್ನು ಸಾಕ್ಷ್ಯಗಳ ಆಧಾರದ ಮೇಲೆ ನಿರ್ಧಾರ ಮಾಡಬೇಕು. ಈ ವಿವಾದದ ಮೇಲೆ ಹಿಂದಿನ ತೀರ್ಪು ಪರಿಣಾಮ ಬೀರುವುದಿಲ್ಲ. ಕೇವಲ ನಿಗದಿತ ಸ್ಥಳವನ್ನು ವಶಪಡಿಸಿಕೊಳ್ಳುವುದರ ಮೇಲೆ ಮಾತ್ರ ಆದೇಶ ಅನ್ವಯ ಎಂದಿದ್ದಾರೆ.

Also read: ಹೊಸ ರೇಷನ್ ಕಾರ್ಡ್ ಅರ್ಜಿದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ: ನೀವೂ ಬಿ.ಪಿ.ಲ್ ಕಾರ್ಡ್ ಪಡೆಯಬೇಕೆ..? ಹಾಗಾದ್ರೆ ಈ ಮಾಹಿತಿ ನೋಡಿ..!

ಎಲ್ಲಾ ಧರ್ಮಗಳ ಚರ್ಚ್’ಗಳು, ಮಸೀದಿಗಳು ಮತ್ತು ದೇವಾಲಯಗಳನ್ನು ಸಮಾನವಾಗಿ ಕಾಣಬೇಕು. 1994ರ ತೀರ್ಪಿನಂತೆ ಎಲ್ಲಾ ಧಾರ್ಮಿಕ ಸ್ಥಳಗಳನ್ನೂ ವಶಪಡಿಸಿಕೊಳ್ಳಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇ ಎಂಬ ಕುರಿತು ವಿಚಾರಣೆಗೆ ವಿಸ್ತೃತ ಪೀಠದ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. 2:1 ಅಂತರದಲ್ಲಿ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ಆದರೆ ಪೀಠದ ಮತ್ತೂಬ್ಬ ಸದಸ್ಯರಾದ ನ್ಯಾ| ಅಬ್ದುಲ್‌ ನಜೀರ್‌ ಅವರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂದಿದ್ದಾರೆ. ಇದರ ಜತೆಗೆ ನೂತನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಅ.29ರಿಂದ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಭೂ ವಿವಾದದ ವಿಚಾರಣೆಯನ್ನು ಆರಂಭಿಸುವುದಾಗಿಯೂ ಸುಪ್ರೀಂಕೋರ್ಟ್‌ ಹೇಳಿದೆ.

Also read: ಪಿ.ಯು.ಸಿ ಮುಗಿಸಿದ ಅಭ್ಯರ್ಥಿಗಳಿಗೆ ದಕ್ಷಿಣ ಕನ್ನಡ ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕಾತಿ ಪ್ರಕಟಣೆ..!!

ನ್ಯಾ| ಅಶೋಕ್‌ ಭೂಷಣ್‌ ತಮ್ಮ ತೀರ್ಪಿನಲ್ಲಿ, ಎಲ್ಲ ಧರ್ಮಗಳನ್ನು ಸರಕಾರ ಸಮಾನವಾಗಿ ಕಾಣಬೇಕು ಮತ್ತು ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎನ್ನುವ ವಿಚಾರದಲ್ಲಿ ಸಾಂವಿಧಾನಿಕ ಪೀಠದ ತೀರ್ಪು ಜಮೀನು ವಶಪಡಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತ ಎಂದು ಹೇಳಿದ್ದಾರೆ. ಜತೆಗೆ 1994ರಲ್ಲಿ ಐವರು ಸದಸ್ಯರ ನ್ಯಾಯಪೀಠ ಯಾವ ಸಂದರ್ಭದಲ್ಲಿ ತೀರ್ಪು ನೀಡಿತ್ತು ಎಂಬುದನ್ನು ಪರಿಗಣಿಸಬೇಕಾಗಿದೆ ಎಂದು ಹೇಳಿದ್ದಾರೆ. ನಮಾಜ್‌ ಅನ್ನು ಎಲ್ಲಿ ಬೇಕಾದರೂ ಸಲ್ಲಿಸಬಹುದು. ಅದಕ್ಕೆ ಮಸೀದಿ ಅಗತ್ಯವಿಲ್ಲ ಎಂದು ಹಿಂದಿನ ತೀರ್ಪಿನಲ್ಲಿ ಹೇಳಿದ್ದನ್ನು ಒಪ್ಪಿಕೊಂಡ ನ್ಯಾ| ಭೂಷಣ್‌, ಈ ಪ್ರಕರಣ ಅಯೋಧ್ಯೆಯ ಮುಖ್ಯ ವಿಚಾರಕ್ಕೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.