ಇನ್ಮೇಲೆ ಮೆಟ್ರೋ ರೈಲಿನ ಟಿಕೆಟ್-ಗೆ ಕ್ಯೂ ನಿಲ್ಲ ಬೇಕಿಲ್ಲ, ನಿಮ್ಮ ಸ್ಮಾರ್ಟ್-ಫೋನ್ ಇಂದಾನೆ ಬುಕ್ ಮಾಡಬಹುದು…

0
433

ಮೆಟ್ರೋ ಟೋಕೆಟ್’ಗಾಗಿ ಕ್ಯೂ ನಿಲ್ಲಬೇಕಿಲ್ಲ; ಕ್ಯೂಆರ್ ಕೋಡ್ ಇದ್ರೆ ಸಾಕು..!

ದೊಡ್ಡ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿಸಿ ಮತ್ತು ಪ್ಲಾಸ್ಟಿಕ್ ಟಿಕೆಟ್ ಕಾರ್ಡ್ ಗಳನ್ನು ಹಿಡಿದುಕೊಂಡು ಹೋಗುವ ಅಗತ್ಯ ಇನ್ನು ಮುಂದೆ ಇರುವುದಿಲ್ಲ. ಟಿಕೆಟ್ಸ್, ಟೋಕನ್ಸ್, ಮರುಟಿಕೆಟ್, ಟಾಪ್ ಅಪ್ ಇತ್ಯಾದಿಗಳಿಗಾಗಿ ಪರದಾಡುವ ಅಗತ್ಯವಿರುವುದಿಲ್ಲ.
ಹೌದು.. ಬಿಎಂಆರ್ ಸಿಎಲ್ ಕ್ಯೂಆರ್ ಬೇಸ್ಡ್ ಆಧಾರಿತ ಟಿಕೆಟ್ ನ್ನು ಪರಿಚಯಿಸಲು ಯೋಜನೆ ರೂಪಿಸುತ್ತಿದ್ದು ಇನ್ನು ಮುಂದೆ ನಮ್ಮ ಮೆಟ್ರೋ ಪ್ರಯಾಣಿಕರು ತಮ್ಮ ಮೊಬೈಲ್ ಆಪ್ ಮೂಲಕ ತಾವು ಹತ್ತಲಿರುವ ಸ್ಥಳ, ಇಳಿಯಬೇಕಾಗಿರುವ ಸ್ಥಳ ಮತ್ತು ಎಷ್ಟು ಮಂದಿಗೆ ಟಿಕೆಟ್ ಬೇಕಾಗಿದೆ ಎಂಬುದನ್ನು ಆಯ್ಕೆ ಮಾಡಿ ಟಿಕೆಟ್ ಪಡೆಯಲು ಅವಕಾಶ ನೀಡಲಿದೆ. ನಂತರ ಅಪ್ಲಿಕೇಷನ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಕೂಡಲೇ ಪ್ರಯಾಣದ ಮೊತ್ತವು ಆನ್‌ಲೈನ್ ಮೂಲಕ ಬಿಎಂಆರ್‌ಸಿಎಲ್ ಗೆ ಜಮಾ ಆಗಲಿದೆ. ಆಪ್’ನಲ್ಲಿ ಕ್ಯೂಆರ್ ಕೋಡ್ ಡಿಸ್ಪ್ಲೇ ಆಗುತ್ತದೆ. ಅದನ್ನು ಪ್ರಯಾಣಿಕರು ಸ್ಟೇಷನ್’ನಲ್ಲಿ ತೋರಿಸಬೇಕು.

Also read: ನೀವು ಕಳೆದುಕೊಂಡ ಪರ್ಸ್’ ಗಳು Post Box’ ಗಳಲ್ಲಿ ಪತ್ತೆಯಾಗುತ್ತಿವೆ! ಪರ್ಸ್ ಕಳೆದುಕೊಂಡವರು Post office-ಅಲ್ಲಿ ವಿಚಾರಿಸಿ ನೋಡಿ..

ಈ ಹೊಸ ಸಿಸ್ಟಮ್ ಇನ್ನು ಒಂದು ವರ್ಷದಲ್ಲಿ ಅಪ್ ಗ್ರೇಡ್ ಆಗಲಿದೆ. ಆ ಮೂಲಕ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ ಮೂಲಕವೇ ಟಿಕೆಟ್ ಖರೀದಿ ಮಾಡಬಹುದು ಎಂದು ಬಿಎಂಆರ್ ಸಿಎಲ್ ನ ಎಂಡಿ ಅಜಯ್ ಸೇತ್ ತಿಳಿಸಿದ್ದಾರೆ. ಸ್ಟೇಷನ್ ನ ಎಎಫ್ ಸಿ ಗೇಟ್ ಗಳಲ್ಲೇ ಟಿಕೆಟ್ ವ್ಯವಸ್ಥೆ ಮಾಡುವ ಬಗ್ಗೆ 2015 ರಲ್ಲೇ ಮೆಟ್ರೋ ಪ್ರೊಜೆಕ್ಟ್ ನಲ್ಲಿ ಸೇರಿಸಲಾಗಿತ್ತು. ಆದರೆ ಕ್ಯೂಆರ್ ಟಿಕೆಟ್ಸ್ ನ ವಿಚಾರದಲ್ಲಿ ಕೆಲವು ಹಣಕಾಸಿನ ಅವ್ಯವಸ್ಥೆಯನ್ನು ಸಾಫ್ಟ್ ವೇರ್ ಗಳು ಎದುರಿಸುತ್ತಿದ್ದವು. ಅದನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇದನ್ನು ಬಳಕೆಗೆ ಬರುವಂತೆ ಮಾಡಲಾಗುತ್ತದೆ.

ಹೇಗೆ ಬಳಸುವುದು..?

Also read: ಸಾವಿರಾರು ಕೋಟಿ ಒಡತಿಯಾಗಿದ್ದರೂ ಸಾಮಾನ್ಯರಂತೆ ಮೈಸೂರು ಮಾರುಕಟ್ಟೆಗೆ ಭೇಟಿ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದ ಸುಧಾ ಮೂರ್ತಿ!!

  • ಡಿಜಿಟಲ್ ವ್ಯಾಲೆಟ್/ ಮೊಬೈಲ್ ಟಿಕೆಟಿಂಗ್ / ಕ್ಯೂಆರ್ ಕೋಡ್ ಬಳಸಿ ಪಾವತಿ ಆಯ್ಕೆಗೆ ಲಾಗಿನ್ ಆಗಿ.
  • ಆರಂಭಿಕ ಸ್ಥಳ ಮತ್ತು ತಲುಪಬೇಕಾಗಿರುವ ಸ್ಥಳ ಮತ್ತು ಎಷ್ಟು ಜನ ಪ್ರಯಾಣಿಕರು ಎಂಬುದನ್ನು ಆಯ್ಕೆ ಮಾಡಿ.
  • ಮೊತ್ತವನ್ನು ಎಂಟರ್ ಮಾಡಿ, ಕನ್ಫರ್ಮ್ ಮಾಡಿ.ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡಿ.
  • ಆಪ್ ನಿಮ್ಮ ಪ್ರಯಾಣಕ್ಕಾಗಿ ಕ್ಯೂಆರ್ ಕೋಡ್ ಅನ್ನು ಜನರೇಟ್ ಮಾಡುತ್ತದೆ. ಕ್ಯೂಆರ್ ಅನೇಬಲ್ ಆಗಿರುವ ಸ್ಟೇಷನ್ನಿನ ಎಎಫ್ ಸಿ ಗೇಟ್ ಗಳಲ್ಲಿ ಟ್ಯಾಪ್ ಮಾಡಿ. ನಂತರ ಕ್ಯೂಆರ್ ಕೋಡ್ ಅನ್ನು ಹೊರಗಡೆ ಹೋಗುವ ಸ್ಟೇಷನ್’ಗಳಲ್ಲಿ ಮತ್ತೆ ಟ್ಯಾಪ್ ಮಾಡಿ.
  • ಮೆಟ್ರೋ ಆಪರೇಷನಲ್ ಟೈಮ್‘ನಲ್ಲಿ ಈ ಫೆಸಿಲಿಟಿ ಲಭ್ಯವಾಗಲಿದೆ.

Also read: ದೀರ್ಘಕಾಲದ ಯಕೃತ್ತಿನ ರೋಗ ಲಕ್ಷಣಗಳು ಮತ್ತು ಪರಿಣಾಮಗಳಿಗೆ ಸರಳವಾದ ಮನೆಮದ್ದು; ಆಹಾರ ಕ್ರಮಗಳು ಇಲ್ಲಿದೆ ನೋಡಿ..

2015ರ ಪೂರ್ವದಲ್ಲಿ ಅಳವಡಿಸಿದ ಎಎಫ್‌ಸಿ ಗೇಟ್‌ಗಳು ಕ್ಯೂಆರ್ ಟಿಕೆಟ್ ವ್ಯವಸ್ಥೆಗೆ ಸ್ಪಂದಿಸುವುದಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚಲಾಗಿದೆ. ಹಳೆಯ ದ್ವಾರಗಳನ್ನು ಕ್ಯೂಆರ್ ವ್ಯವಸ್ಥೆಗೆ ಸ್ಪಂದಿಸುವಂತೆ ಸಾಫ್ಟ್’ವೇರ್ ಬದಲಿಸಲಾಗುವುದು, ದೆಹಲಿ ಮೆಟ್ರೋದಲ್ಲಿ ಈಗಾಗಲೇ ಈ ವ್ಯವಸ್ಥೆ ಅಳವಡಿಸಲಾಗಿದೆ. ಫೇಸ್ 2 ಪ್ರೊಜೆಕ್ಟ್ ನಲ್ಲಿರುವ ಸ್ಟೇಷನ್ ಗಳಲ್ಲಿ ಅಡ್ವಾನ್ಸ್ಡ್ ಎಎಫ್ ಸಿ ಗೇಟ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಗಳನ್ನು ಪಡೆಯುವ ಜೊತೆಗೆ ಓಪನ್ ಲೂಪ್ ಕಾರ್ಡ್ ಗಳನ್ನು ಪಡೆಯುವ ಫೆಸಿಲಿಟಿ ಇರಲಿದೆ.ಈಗಾಗಲೇ ಇರುವ ಎಎಫ್ ಸಿ ಗೇಟ್ ಗಳಲ್ಲಿ ಇದನ್ನು ಅಪ್ ಗ್ರೇಡ್ ಮಾಡಲು ಟೆಂಡರ್ ನೀಡಲಾಗುತ್ತದೆ.ಈಗಾಗಲೇ ಕೊಚ್ಚಿ, ದೆಹಲಿ, ಮುಂಬೈ ಗಳಲ್ಲಿ ಡಿಜಿಟಲ್ ವ್ಯಾಲೆಟ್ ಜೊತೆಗೆ ಮೆಟ್ರೋ ಕೈಜೋಡಿಸಿದೆ. ಅಂದರೆ ಪೇಟಿಎಂ, Ridlr ಗಳು ಮೊಬೈಲ್ ಫೋನ್ ಬಳಸಿ ಟಿಕೆಟ್ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.