ವಿಜ್ಞಾನಕ್ಕೆ ಸವಾಲಾಗಿ ನಿಂತಿರುವ ಕೃಷ್ಣನ ಬೆಣ್ಣೆ ಉಂಡೆ

0
5269

ಬೆಣ್ಣೆ ಅಂದ್ರೆ ಕೃಷ್ಣನಿಗೆ ತುಂಬಾ ಇಷ್ಟ ಅನ್ನೋದು ಎಲ್ಲರಿಗೂ ಗೊತ್ತು. 250 ಟನ್ ತೂಕ, 5 ಮೀಟರ್ ಚದರಡಿ ಹಾಘೂ 20 ಅಡಿ ಎತ್ತರದ ಕಲ್ಲಿನ ರೂಪದ ಬೃಹತ್ ಬೆಣ್ಣೆ ಉಂಡೆಯೊಂದು ತಮಿಳುನಾಡು ರಾಜ್ಯದ ಕಾಂಚಿಪುರಂ ಜಿಲ್ಲೆಗೆ ಸೇರಿದ ಪ್ರಸಿದ್ಧ ಯಾತ್ರಾಸ್ಥಳ ಮಹಾಬಲಿಪುರಂನಲ್ಲಿ ಕಂಡುಬರುತ್ತದೆ. ಆಂಗ್ಲದಲ್ಲಿ ಇದನ್ನು ಕೃಷ್ಣಾಸ್ ಬಟರ್ ಬಾಲ್ ಎಂದು ಕರೆಯುತ್ತಾರೆ. ಸುಮಾರು ಹದಿನೈದು ಅಡಿಗಳಷ್ಟು ವ್ಯಾಸದ ಹೆಚ್ಚು ಕಮ್ಮಿ ಗೋಲಾಕಾರದ ಬಂಡೆಯೊಂದು 45 ಡಿಗ್ರಿಗಳಷ್ಟು ಕೋನದ ಕಲ್ಲುಹಾಸಿನ ಮೇಲೆ ಗುರುತ್ವಾಕರ್ಷಣೆಗೆ ಸವಾಲೆಸೆದು ನಿಂತಿರುವದನ್ನು ಕಂಡಾಗ ಯಾರಿಗಾದರೂ ಸರಿ ಅಚ್ಚರಿಯಾಗದೆ ಇರಲಾರದು.

ಕೃಷ್ಣನ ಬೆಣ್ಣೆ ಉಂಡೆ ಅಥವಾ ಆಕಾಶದೇವರ ಶಿಲೆ ಎಂದು ಪ್ರಸಿದ್ದವಾಗಿರುವ ಈ ಬಂಡೆ ಆಶ್ಚರ್ಯಕರ ರೀತಿಯಲ್ಲಿ ನಿಂತಿದೆ. ಕಡಿದಾದ ಕಲ್ಲಿನ ಬೆಟ್ಟದ ತುದಿಯಲ್ಲಿ ಯಾವಾಗ ಬೇಕಾದರೂ ಜಾರಿ ಬೀಳಬಹುದಾದಂತಹ ಸ್ಥಳದಲ್ಲಿ ನಿಂತಿದೆ.

ಮಳೆ, ಬಿರುಗಾಳಿ ಬರಲಿ, ಅಥವಾ ಭೂಕಂಪವೇ ಯಾಗಲಿ ಈ ಶಿಲೆ ಈ ಜಾಗದಿಂದ ಒಂದು ಚೂರು ಸರಿದಿಲ್ಲವಂತೆ ಸಾವಿರ ವರ್ಷಗಳು ಕಳೆದರು ಈ ಶಿಲೆ ತನ್ನ ಇದ್ದ ಜಾಗದಿಂದ ಸರಿದಿಲ್ಲವೆಂದು ಆ ಸ್ಥಳದ ಗೈಡ್ ಆಗಿರುವ ಕಣಿಯಪ್ಪ ರವರು ವಿವರಿಸುತ್ತಾರೆ. ಈ ಕೃಷ್ಣನ ಬೆಣ್ಣೆ ಉಂಡೆ 20 ft ಎತ್ತರ ಮತ್ತು 16 ft ವ್ಯಾಸದಲ್ಲಿ 1200 ವರ್ಷಗಳಿಂದ ಗುರುತ್ವಾಕರ್ಷಣೆಗೆ ಸವಾಲಾಗಿ ನಿಂತಿದೆ.

ಪಲ್ಲವರ ರಾಜನಾಗಿದ್ದ ನರಸಿಂಹ ವರ್ಮಾ ಈ ಬಂಡೆಯನ್ನು ಸರಿಸಲು ಪ್ರಯತ್ನಿಸಿದ್ದನಂತೆ.1908ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯದ ಗೌರ್ನರ್ ಅರ್ಥರ್ ಲವ್ಲಿ ಎಂಬಾತ ಈ ಬಂಡೆಯಿಂದ ಅಪಾಯ ಸಂಭವಿಸಬಹುದು ಎಂಬ ಕಾರಣಕ್ಕಾಗಿ ಬಂಡೆಯನ್ನು ಸರಿಸಲು ಆದೇಶ ನೀಡಿದ್ದನಂತೆ. ಏಳು ಆನೆಗಳಿಂದ ಬಂಡೆಯನ್ನು ತಳ್ಳುವ ಪ್ರಯತ್ನ ಮಾಡಲಾಯಿತು. ಆದರೆ ಬಂಡೆ ಮಾತ್ರ ತನ್ನ ಇದ್ದ ಜಾಗದಿಂದ ಒಂದುಚೂರು ಸರಿದಿಲ್ಲ. ಹಾಗಾಗಿ ಈ ಬಂಡೆಗೆ ದೈವಿಸ್ವರೂಪ ಎಂಬ ನಂಬಿಕೆ ಇದೆ. ತಮಿಳಿನಲ್ಲಿ ಇದನ್ನು” Vaan irai kal ” ಎಂದು ಕರೆಯಲಾಗುತ್ತಾರೆ ಇದರ ಅರ್ಥ ವಿಶ್ವರೂಪಿ ಕೃಷ್ಣನ ಕೈಯಲ್ಲಿ ಬೆಣ್ಣೆಯ ಮುದ್ದೆ ಎಂದು.

ಇಂತಹ ಸ್ಥಳ ತಮ್ಮಲ್ಲಿರುವ ವಿಶೇಷತೆಗಳಿಂದಾಗಿಯೆ ಹೆಚ್ಚು ಜಗತ್ ಪ್ರಸಿದ್ಧವಾಗಿರುತ್ತದೆ. ಬಹುತೇಕ ಜನರಲ್ಲಿ ಈ ಸ್ಥಳಗಳು ತಮ್ಮ ವಿಶೇಷತೆಗಳಿಂದ ಕುತೂಹಲ ಕೆರಳಿಸುತ್ತ ಭೇಟಿ ನೀಡಲು ಪ್ರೇರೇಪಿಸುತ್ತವೆ. ಸಮಯ ಸಿಕ್ಕರೆ ನೀವು ತೆರಳಿ ಒಮ್ಮೆ ಭೇಟಿ ಕೊಡಿ..!