ಈ ಮರಗಳ ಪೂಜೆ ಮಾಡಿದ್ರೆ ಏನ್ ಏನ್ ಲಾಭ ಗೊತ್ತಾ???

0
5385

Kannada News | Karnataka Temple History

ಹಿಂದೂ ಧರ್ಮದಲ್ಲಿ ಹಲವು ಮರವನ್ನು ಪೂಜಿಸಲಾಗುತ್ತದೆ. ಅಂತಹ ಮರಗಳನ್ನು ಆಸು-ಪಾಸಿನಲ್ಲಿ ಬೆಳೆಸುವುದರಿಂದ ಸುಖ, ಶಾಂತಿ, ಸಮೃದ್ಧಿ ವೃದ್ಧಿಯಾಗುತ್ತದೆ. ಯಾವುದೇ ರೀತಿಯ ರೋಗ, ಕಷ್ಟಗಳು ಸುಳಿಯುವುದಿಲ್ಲ ಎನ್ನಲಾಗುತ್ತದೆ. ಅಂತಹ ಮರಗಳು ಯಾವುವು ಅನ್ನೋದು ನಿಮಗೆ ಗೊತ್ತಾ?

ಅಶ್ವತ ಮರ: ಇದನ್ನು ವಠ ಕೂಡಾ ಎನ್ನಲಾಗುತ್ತದೆ. ವಠ ಸಾವಿತ್ರಿ ಎನ್ನುವ ಹಬ್ಬವು ಪೂರ್ಣ ರೀತಿಯಾಗಿ ಆಲದ ಮರಕ್ಕೇ ಸೀಮಿತವಾದುದು. ಅಶ್ವತ ಮರದಲ್ಲಿ ವಿಷ್ಣು ನೆಲೆಸಿದ್ದಾನಾದರೆ ಆಲದ ಮರವನ್ನು ಶಿವ ಎನ್ನಲಾಗುತ್ತದೆ. ಅಥರ್ವವೇದದ ಉಪವೇದ ಆತುರ್ವೇದದಲ್ಲಿ ಅಶ್ವತ ಮರದ ಔಷಧಿಯ ಗುಣಗಳನ್ನು ಅನೇಕ ಅಸಾಧ್ಯ ರೋಗಗಳಿಗೆ ಉಪಯೋಗಿಸಲಾಗುತ್ತದೆ.

ಮಾವು: ಮನೆಯಲ್ಲಿ ಯಾವುದೇ ಶುಭ ಸಮಾರಂಭಗಳಿರುವಾಗ ಮನೆಗೆ ಮಾವಿನ ತಳಿರುತೋರಣವನ್ನು ಕಟ್ಟಿ ಸುತ್ತಮುತ್ತಲಿನ ವಾತಾವರಣವನ್ನು ಧಾರ್ಮಿಕವಾಗಿರಿಸುವುದು ಗೊತ್ತೇ ಇದೆ. ಮಾವಿನ ರಸದಿಂದ ಅನೇಕ ರೋಗಗಳು ದೂರವಾಗುತ್ತದೆ. ಮಾವಿನ ಎಲೆಗಳು ಋಣಾತ್ಮಕ ಶಕ್ತಿಯನ್ನು ದೂರಮಾಡುತ್ತದೆ.

ಆಲದ ಮರ: ಇದರಲ್ಲಿ ಕಾಂಡದಿಂದ ಹಿಡಿದು ಎಲೆಗಳ ವರೆಗೂ ಮೂವತ್ತ ಮೂರು ಕೋಟಿ ದೇವತೆಗಳ ವಾಸವಿದೆ ಎನ್ನಲಾಗುತ್ತದೆ. ಹಿಂದೂ ಧರ್ಮಗಳಲ್ಲಿ ಬೆಳಗ್ಗಿನ ಸಮಯವನ್ನು ಅಶ್ವತ ಮರಗಳ ಆರಾಧನೆ ಮಾಡಲು ತಿಳಿಸಲಾಗಿದೆ. ಈ ಮರಕ್ಕೆ ನೀರನ್ನು ಎರೆಯುವುದರಿಂದ ರೋಗ ಹಾಗೂ ದುಃಖ ನಿವಾರಣೆಯಾಗುತ್ತದೆ. ಪರಿಸರಕ್ಕೆ ಅತೀ ಹೆಚ್ಚು ಆಮ್ಲಜನಕವನ್ನು ಈ ಮರ ನೀಡುವುದರಿಂದ ಇದನ್ನು ಆಕ್ಸೀಜನ್‍ನ ಭಂಡಾರ ಎನ್ನಲಾಗಿದೆ.

Image result for banyan tree

ಬಾಳೆಗಿಡ: ಬಾಳೆಗಿಡವನ್ನು ಪವಿತ್ರವೆಂದು ಭಾವಿಸಲಾಗುತ್ತದೆ. ಹಾಗಾಗಿ ಧಾರ್ಮಿಕ ಕಾರ್ಯಗಳಲ್ಲಿ ಬಾಳೆಗಿಡಗಳನ್ನು ಬಳಸಲಾಗುತ್ತದೆ. ವಿಷ್ಣು ಹಾಗೂ ಲಕ್ಷ್ಮೀ ದೇವರಿಗೆ ಬಾಳೆಹಣ್ಣಿನ ಪ್ರಸಾದ ನೀಡಲಾಗುತ್ತದೆ. ಬಾಳೆ ಎಲೆಯಲ್ಲಿ ಪ್ರಸಾದ ಹಂಚಲಾಗುತ್ತದೆ. ಸಮೃದ್ಧಿಗಾಗಿ ಬಾಳೆಗಿಡದ ಪೂಜೆ ಮಾಡುತ್ತಾರೆ.

Banana comes to an end-2

ಬಿಲ್ವ ಪತ್ರೆ: ಬಿಲ್ವಪತ್ರೆಯನ್ನು ಶಿವನ ಆರಾಧನೆಯ ಪ್ರಮುಖ ಅಂಗ ಎನ್ನಲಾಗುತ್ತದೆ. ಈ ಗಿಡವನ್ನು ಮಂದಿರದಲ್ಲಿ ನೆಡಲಾಗುತ್ತದೆ. ಈ ಗಿಡದ ಹಣ್ಣು ದೇಹಕ್ಕೆ ತಂಪಾಗಿರುವುದರಿಂದ ಹೆಚ್ಚಿನವರು ಬೇಸಿಗೆಯಲ್ಲಿ ಇದರ ಹಣ್ಣಿನ ಜ್ಯೂಸ್ ಮಾಡಿ ಕುಡಿಯುತ್ತಾರೆ. ಈ ಮರದಲ್ಲಿ ಮಹಾಲಕ್ಷ್ಮೀಯ ನಿವಾಸ ಇದೆ ಎನ್ನಲಾಗುತ್ತದೆ. ಶಿವನ ಪೂಜೆಗೆ ಯಾರು ಬಿಲ್ವಪತ್ರೆಯನ್ನು ಅರ್ಪಿಸುತ್ತಾರೋ ಅವರಿಗೆ ಶಿವ-ಪಾರ್ವತಿಯರ ಆಶೀರ್ವಾದ ಸಿಗುತ್ತದೆ ಎನ್ನಲಾಗುತ್ತದೆ.

ತೆಂಗಿನಮರ: ಕಲಶದಲ್ಲಿ ನೀರು ತುಂಬಿಸಿ ಅದರ ಮೇಲೆ ತೆಂಗಿನಕಾಯಿಯನ್ನು ಇಡಲಾಗುತ್ತದೆ. ಇದನ್ನು ಶುಭ ಪ್ರತೀಕ ಎನ್ನಲಾಗುತ್ತದೆ. ತೆಂಗಿನಕಾಯಿಯ ಪ್ರಸಾದವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಎಳನೀರಿನಲ್ಲಿ ಪೊಟಾಶಿಯಂ ಪ್ರಮಾಣ ಅಧಿಕವಿರುತ್ತದೆ. ಅಸ್ತಮದಿಂದ ಬಳಲುತ್ತಿರುವ ರೋಗಿಗಳಿಗೆ ಎಳನೀರು ಬಹಳ ಉಪಕಾರಿ.

Also Read: ವಾಹನವನ್ನು ದೃಷ್ಟಿ ತಗಲುವುದರಿಂದ ಹೇಗೆ ರಕ್ಷಿಸುವುದು?