ವ್ಯೆದ್ಯಕೀಯ ಲೋಕದಲ್ಲಿ ಮತ್ತೊಂದು ಸಾಧನೆ; 6 ತಿಂಗಳ ಮಗುವನ್ನು ಗರ್ಭದಿಂದ ಹೊರತೆಗೆದು ಶಸ್ತ್ರಚಿಕಿತ್ಸೆ ಮಾಡಿ ಮತ್ತೆ ಗರ್ಭದೊಳಗೆ ಸೇರಿಸಿದರು..

0
549

ಈಗಿನ ಕಾಲದಲ್ಲಿ ಮನುಷ್ಯನ ದೇಹದ ಯಾವ ಅಂಗಾಂಗಗಳನ್ನು ಬೇಕಾದರು ಜೋಡಣೆ ಮಾಡುವ ಸಾಹಸದ ಶಸ್ತ್ರಚಿಕಿತ್ಸೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಅದರಂತೆ ಇಲ್ಲಿಯ ವರೆಗೆ ಹಲವು ಹೃದಯಗಳ ಜೋಡಣೆ, ಕಿಡ್ನಿ ಜೋಡಣೆ, ಕರಳು, ಲಿವರ್ ಹೀಗೆ ಎಲ್ಲ ತರಹದ ಶಸ್ತ್ರಚಿಕಿತ್ಸೆ ಮಾಡಿ ಬದಲಿ ವ್ಯಕ್ತಿಗಳ ಅಂಗಾಂಗಗಳನ್ನು ಜೋಡಣೆ ಮಾಡಿದ್ದಾರೆ. ಇದರಿಂದ ಅಸಂಖ್ಯಾತ ಜನರು ಜೀವಂತವಾಗಿ ಬದುಕುತ್ತಿದ್ದಾರೆ. ಇದೆಲ್ಲವನ್ನು ಮಿರಿ ಈಗ ವೈದ್ಯರು ಮತ್ತೊಂದು ಸಾಧನೆ ಮಾಡಿದ್ದಾರೆ.

Also read: ಸತ್ತ ಮೇಲೂ ಗರ್ಭಕೋಶ ಕಸಿಯಿಂದ ತಾಯಿಯಾದ ಈ ಮಹಿಳೆಯ ಸ್ಟೋರಿ ಓದಿ, ನಿಮ ಕಣ್ಣಲ್ಲಿ ನೀರು ಬರುತ್ತೆ…

ಹೌದು ಮುಂದುವರಿದ ವೈದ್ಯಕೀಯ ಲೋಕದಂತೆ ಹೊಸ ಸಾಹಸಕ್ಕೆ ಕೈ ಹಾಕಿದ ವೈದ್ಯರು ಗೆಲವು ಕಂಡಿದ್ದಾರೆ. ಗರ್ಭದಲ್ಲಿರುವ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಯಶಸ್ವಿಯಾಗಿದ್ದಾರೆ. ಇದನ್ನು ಕೇಳಿದರೆ ವೈದ್ಯಕೀಯ ವಿಜ್ಞಾನವು ಇಷ್ಟು ಮುಂದುವರಿದೆಯಾ ಎಂದು ಆಶ್ಚರ್ಯವಾಗುವುದರಲ್ಲಿ ಸಂಶಯವಿಲ್ಲ. ಗರ್ಭಿಣಿಯಾದ 26 ವರ್ಷದ ಮಹಿಳೆಗೆ ಮತ್ತು ಆಕೆಯ ಕುಟುಂಬಕ್ಕೆ ವೈದ್ಯರು ಗರ್ಭಪಾತ ಮಾಡಿಸಿಕೊಳ್ಳಲು ಸಲಹೆ ನೀಡಿದರು. ಯಾಕೆ ಅಂತ ಪ್ರಶ್ನಿಸಿದ್ದಾಗ ಗರ್ಭದಲ್ಲಿ ಇರುವಂತಹ ಮಗುವಿಗೆ ಸ್ಪಿನಾ ಬೈಫಿಡಾ ಎನ್ನುವ ಸಮಸ್ಯೆ ಇತ್ತು. ಇದು ಸಾಮಾನ್ಯವಾಗಿ ತಿಳಿಯುವುದು 6 ತಿಂಗಳ ನಂತರ ಅದರಂತೆಯೇ ಗರ್ಭಧಾರಣೆಯ 20ನೇ ವಾರದ ನಿಯಮಿತ ಸ್ಕ್ಯಾನಿಂಗ್ ವೇಳೆ ವೈದ್ಯರಿಗೆ ಈ ಸಮಸ್ಯೆ ಬಗ್ಗೆ ತಿಳಿದುಬಂತು. ಗರ್ಭದಲ್ಲಿರುವಂತಹ ಮಗುವಿನ ತಲೆಯು ಸರಿಯಾದ ಗಾತ್ರದಲ್ಲಿ ಇಲ್ಲವೆಂದು ವೈದ್ಯರಿಗೆ ಈ ವೇಳೆ ತಿಳಿಸಿದರು ಇದಕ್ಕೆ ಚಿಕಿತ್ಸೆ ಇಲ್ಲವೆಂದು ಪ್ರಶ್ನಿಸಿದ್ದಾಗ ಇಗಲೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾಗ ಮಹಿಳೆಯ ಕುಟುಂಬದವರು ವಿಚಾರಕ್ಕೆ ಒಳಗಾದರು. ಅದಕ್ಕೆ ವೈದ್ಯರು ಗರ್ಭದಲ್ಲಿಯೇ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸುವ ಆಯ್ಕೆ ನೀಡಿದರು.

ಸ್ಪಿನಾ ಬೈಫಿಡಾ ಎಂದರೇನು?

Also read: ವೈದ್ಯಲೋಕದಲ್ಲಿ ಮತ್ತೊಂದು ಇತಿಹಾಸ; ಏಡ್ಸ್​ ರೋಗಕ್ಕೆ ಯಶಸ್ವಿ ಚಿಕಿತ್ಸೆ ಏಡ್ಸ್ ವೈರಸ್‍ನಿಂದ ಮುಕ್ತನಾದ ವಿಶ್ವದ ಎರಡನೇ ವ್ಯಕ್ತಿ..!

ಗರ್ಭದಲ್ಲಿರುವಂತಹ ಮಗುವಿನ ಬೆನ್ನುಮೂಳೆಯು ಸರಿಯಾಗಿ ಬೆಳವಣಿಗೆ ಆಗದೆ ಇರುವಂತಹ ಪರಿಸ್ಥಿತಿಯನ್ನು ಸ್ಪಿನಾ ಬೈಫಿಡಾ ಎಂದು ಹೇಳುವರು. ಇದರ ಪರಿಣಾಮವಾಗಿ ಮುಂದೆ ಮಗು ಜನಿಸಿದ ಬಳಿಕ ಅದಕ್ಕೆ ಸರಿಯಾಗಿ ನಡೆದಾಡಲು ಆಗದು. ಅದಕ್ಕೆ ವೈದ್ಯರು ಆ ದಂಪತಿಗೆ ಹೊಸ ಆಯ್ಕೆ ನೀಡಿದರು. ಇದರಲ್ಲಿ ಗರ್ಭದಲ್ಲಿಯೇ ಮಗುವಿನ ಪರಿಸ್ಥಿತಿಯನ್ನು ಜನಿಸುವ ಮೊದಲೇ ಶಸ್ತ್ರಚಿಕಿತ್ಸೆ ಮೂಲಕವಾಗಿ ಸರಿ ಮಾಡುವುದು. ಈ ಶಸ್ತ್ರಚಿಕಿತ್ಸೆಯಲ್ಲಿ ತಾಯಿ ಗರ್ಭದಿಂದ ಮಗುವನ್ನು ಹೊರಗೆ ತೆಗೆದು, ಬಳಿಕ ಮಗುವಿನ ಬೆನ್ನುಮೂಳೆಯನ್ನು ಸರಿಪಡಿಸುವುದು. ಇದರಿಂದ ಮುಂದೆ ಮಗು ಜನಿಸಿದ ಬಳಿಕ ಅದಕ್ಕೆ ಸಾಮಾನ್ಯ ಜೀವನ ಸಾಗಿಸಲು ಸಾಧ್ಯವಾಗುವುದು.ಆದರಿಂದ ಎನ್ನುವ ವಿಚಾರವನ್ನು ವೈದ್ಯರು ತಿಳಿಸಿದರು. ಇದಕ್ಕೆ ಒಪ್ಪಿಗೆ ನೀಡಿದಾಗ

ಗರ್ಭದಲ್ಲಿರುವ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ?

Also read: ತಲೆಯಲ್ಲಿ ಕೂದಲಿಲ್ಲವೆಂದು ಕೂದಲು ಕಸಿ ಮಾಡಿಸಿಕೊಳ್ಳುವ ಯೋಚನೆ ಇದ್ರೆ ಈ ಸ್ಟೋರಿ ಓದಿ..

ವೈದ್ಯರು ಮಗುವನ್ನು ಹೊರತೆಗೆದು ಶಸ್ತ್ರಚಿಕಿತ್ಸೆ ಮಾಡಿದರು ಬಳಿಕ ಮಗುವನ್ನು ಮತ್ತೆ ಅದೇ ಸ್ಥಿತಿಯಲ್ಲಿ ಗರ್ಭದಲ್ಲಿ ಇಡಲಾಯಿತು. ಇದರಿಂದ ಮಹಿಳೆಯು ಸಂಪೂರ್ಣ ಗರ್ಭಧಾರಣೆ ಸಮಯವನ್ನು ಪೂರೈಸಿ, ಮಗುವಿಗೆ ಜನ್ಮ ನೀಡಬೇಕು. ಈ ಶಸ್ತ್ರಚಿಕಿತ್ಸೆಯು ತುಂಬಾ ಯಶಸ್ವಿಯಾಗಿದೆ. ಶೇ. 80ರಷ್ಟು ದಂಪತಿಯು ಇಂತಹ ಸಮಸ್ಯೆಯಿಂದ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಎಂದು ಶಸ್ತ್ರಚಿಕಿತ್ಸೆ ವೈದ್ಯರು ತಿಳಿಸಿದ್ದಾರೆ. ಒಟ್ಟಾರೆಯಾಗಿ ಇದೊಂದು ವೈದ್ಯಕೀಯ ಲೋಕದ ಅದ್ಭುತವಾದ ಶಸ್ತ್ರಚಿಕಿತ್ಸೆ ಎಂದರೆ ತಪ್ಪಾಗದು. ಇಂತಹ ವೈದ್ಯಕೀಯ ವಿಜ್ಞಾನದಿಂದಾಗಿ ಮಕ್ಕಳು ವಿಕಲಾಂಗರಾಗಿ ಹುಟ್ಟುವಂತಹ ಸಮಸ್ಯೆ ಮುಂದೊಂದು ದಿನ ಇಲ್ಲದಂಗೆ ಆಗುವುದರಲ್ಲಿ ಅನುಮಾನವೇ ಇಲ್ಲ ಅನಿಸುತ್ತೆ.