ದೊಡ್ಡ ತಗಚೆ ಗಿಡದ ಆರೋಗ್ಯಕಾರಿ ಗುಣಗಳ ಪಟ್ಟಿಯು ಸಹ ದೊಡ್ಡದಾಗಿಯೇ ಇದೆ ಕಣ್ರೀ…ನಿಮಗೂ ಗೊತ್ತಾದ್ರೆ ನೀವು ಉಪಯೋಗಿಸಲು ಶುರು ಮಾಡ್ತೀರಾ..

0
1011

ಎಲ್ಲ ಪ್ರದೇಶಗಳಲ್ಲೂ ಬೆಳೆಯುವ ದೊಡ್ಡ ತಗಚಿ ಒಂದು ಪೊದರುಗಿಡ. ಹುಳು ಕಡ್ಡಿ ಗಿಡ ಎಂದೇ ಪ್ರಸಿದ್ದವಾಗಿರುವ ಈ ಸಸ್ಯವನ್ನು ಬೀಜಗಳಿಂದ ಪಡೆಯಬಹುದು. ಆಯುರ್ವೇದ ವೈದ್ಯರಿಗೆ ದದೃಘ್ನ ಎಂದು ಪರಿಚಯವಿರುವ ದೊಡ್ಡ ತಗಚಿ ಸುಂದರವಾದ ಹಳದಿ ಹೂವುಗಳನ್ನು ಬಿಡುತ್ತವೆ. ಹೀಗಾಗಿ ಕೇವಲ ಔಷಧವೇ ಅಲ್ಲದೆ ಮನೆಯ ಅಂಗಳಕ್ಕಿದು ಅಲಂಕಾರವು ಹೌದು.

೧) ಹುಳುಕಡ್ಡಿಗೆ:
ದೊಡ್ಡ ತಗಚಿ ಎಲೆಗಳನ್ನು ಮೊಸರಿನಲ್ಲಿ ಚೆನ್ನಾಗಿ ಅರೆದು ಚರ್ಮಕ್ಕೆ ಹಚ್ಚುವುದರಿಂದ ಹುಳುಕಡ್ಡಿ ಕಡಿಮೆಯಾಗುತ್ತದೆ.

೨) ಚರ್ಮದ ಕಾಂತಿಗೆ:
ಅರಿಶಿನ ಮತ್ತು ದೊಡ್ಡ ತಗಚಿ ಎಲೆಗಳನ್ನು ಚೆನ್ನಾಗಿ ಅರೆದು ಚರ್ಮಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದುಕೊಳ್ಳುವುದರಿಂದ ಚರ್ಮದ ಸಹಜ ಹೊಳಪು ಹೆಚ್ಚುತ್ತದೆ.

೩) ಚರ್ಮ ರೋಗಕ್ಕೆ:
ದೊಡ್ಡ ತಗಚಿ ಎಲೆಗಳನ್ನು ಚೆನ್ನಾಗಿ ಅರೆದು ಒಂದೆರಡು ಹನಿ ನಿಂಬೆರಸ ಮತ್ತು ಕರ್ಪೂರದ ಪುಡಿಯಲ್ಲಿ ಸೇರಿಸಿ ಚರ್ಮಕ್ಕೆ ಹಚ್ಚುವುದರಿಂದ ಅನೇಕ ಸಣ್ಣ ಪುಟ್ಟ ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ.

೪) ಬಾಯಿ ಹುಣ್ಣಿಗೆ:
ದೊಡ್ಡ ತಗಚಿ ಎಲೆಗಳನ್ನು ಜಜ್ಜಿ ಎರಡು ಲೋಟ ನೀರು ಹಾಕಿ ಕುಡಿಸಿ ಒಂದು ಲೋಟಕ್ಕಿಳಿಸಬೇಕು. ಇದನ್ನು ಶೋಧಿಸಿ ಬಂಡ ಕಷಾಯದಿಂದ ಆಗಾಗ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

೫) ಹುಳ ಹುಪ್ಪಟೆ ಕಚ್ಚಿದಾಗ:
ಹುಳುಹುಪ್ಪಟೆ ಕೀಟಗಳು ಕಚ್ಚಿದಾಗ ಉಂಟಾಗುವ ನಾವೇ ಮತ್ತು ಗಂಧೆಗಳು ಈ ಸೊಪ್ಪಿನ ರಸದ ಲೇಪನದಿಂದ ಕೂಡಲೇ ಶಮನವಾಗುತ್ತದೆ.

೬) ಮಲಬದ್ಧತೆಗೆ:
ಆರೆಂಟು ಎಲೆಗಳನ್ನು ಜಜ್ಜಿ ಎರಡು ಲೋಟ ನೀರಿಗೆ ಸೇರಿಸಿ ಕುಡಿಸಿ ಅರ್ಧ ಲೋಟಕ್ಕಿಳಿಸಿ ಶೋಧಿಸಿ ಬಂಡ ಕಷಾಯವನ್ನು ಆಗಾಗ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.