Kannada News | Health tips in kannada
ಔಷಧಿಯುಕ್ತ ದೊಡ್ಡಪತ್ರೆ ಎಲೆ (ಅಜವಾನೆಲೆ)ಪ್ರತಿಯೊಬ್ಬರ ಮನೆಯ ಹೂವಿನ ಕುಂಡದಲ್ಲಿ ಕಂಡುಬರುವ ದೊಡ್ಡ ಪತ್ರೆ ಎಲೆ ಔಷಧಿ ಗುಣವನ್ನು ಹೊಂದಿದೆ. ಇದನ್ನು ಅಜವಾನದೆಲೆ, ಕರ್ಪೂರವಲ್ಲಿ ಎಂದು ಕರೆಯುತ್ತಾರೆ. ದಪ್ಪ ಎಲೆ ಹೊಂದಿರುವ ಇದು ಹಸಿರು ಬಣ್ಣವನ್ನು ಹೊಂದಿದ್ದು ಅಜವಾನದ ಕಾಳಿನ ವಾಸನೆಯನ್ನು ಹೊಂದಿರುತ್ತದೆ. ಸವಿಯುವುದಕ್ಕೆ ತುಂಬಾ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೆ ದೊಡ್ಡಪತ್ರೆ ಎಲೆಯಿಂದ ಮಾಡುವ ಖಾದ್ಯಗಳನ್ನು ಸೇವಿಸುವುದರಿಂದ ಕೆಮ್ಮು, ಗಂಟಲು ನೋವು, ಕಟ್ಟಿಕೊಂಡ ಮೂಗು, ಸೋಂಕುಗಳು, ಸಂಧಿವಾತ, ತೀವ್ರ ಜ್ವರ, ಉಬ್ಬಸ, ಚರ್ಮದ ಹುಣ್ಣುಗಳು, ಚರ್ಮದ ಅಲರ್ಜಿ ಹೀಗೆ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು. ಹಾಗೆ ಮಾಡುವ ಖಾದ್ಯಗಳಲ್ಲಿ ದೊಡ್ಡಪತ್ರೆ ತೊಗರಿಬೇಳೆ ಸಾಂಬರ್ ಮಾಡುವ ವಿಧಾನವನ್ನು ಇಲ್ಲಿ ಹೇಳಲಾಗಿದೆ.
ಬೇಕಾಗುವ ಸಾಮಗ್ರಿಗಳು:
- ತೊಗರಿಬೇಳೆ ಒಂದು ಬಟ್ಟಲು,
- ದೊಡ್ಡಪತ್ರೆ ಎಲೆ 10 ರಿಂದ 15,
- ಹುಣಸೇಹಣ್ಣು 4 ರಿಂದ 6 ಎಲೆ,
- ಸಾಂಬಾರು ಪುಡಿ 3 ಚಮಚ,
- ಚಿಕ್ಕ ಗಾತ್ರ ಬೆಲ್ಲ.
- ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
- ತೊಗರಿಬೇಳೆಯ ಜೊತೆಗೆ ದೊಡ್ಡಪತ್ರೆ ಎಲೆಗಳನ್ನು ಹಾಕಿ ಬೇಯಿಸಿಕೊಳ್ಳಿ,
- ಸೌಟಿನಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಒಣಮೆಣಸು, ಸಾಸಿವೆ, ಕೊತ್ತಂಬರಿ, ಅರಿಶಿನ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
- ಒಗ್ಗರಣೆಯಲ್ಲಿ ಬೇಯಿಸಿಕೊಂಡ ತೊಗರಿಬೇಳೆಯ ಮತ್ತು ದೊಡ್ಡಪತ್ರೆ ಯನ್ನು ಹಾಕಿ ಅದಕ್ಕೆ ಹುಣಸೇಹಣ್ಣಿನ ಹುಳಿ, ಸಾಂಬಾರು ಪುಡಿ ರುಚಿಗೆ ತಕ್ಕಷ್ಟು ಉಪ್ಪು, ತುಂಡು ಬೆಲ್ಲವನ್ನುಸ ಬೆರೆಸಿ.
- 2 ನಿಮಿಷ ಬೇಯಿಸಿ ಅನ್ನದ ಜೊತೆ ಸವಿಯಲು ದೊಡ್ಡಪತ್ರೆ ಸಾಂಬಾರು ಸಿದ್ದ.
Also Read: ಶಾಹಿ ಬಿಂಡಿ ಮಸಾಲಾ ಗ್ರೇವಿ ಮಾಡುವ ಸಿಂಪಲ್ ವಿಧಾನ ..!! ಮನೆಯಲ್ಲಿ ನೀವು ಮಾಡಿ ನೋಡಿ…