ದೊಡ್ಡಪತ್ರೆ ಎಲೆಗಳಿಂದ ತಯಾರಿಸಲಾದ ರುಚಿಕರ ಮತ್ತು ಆರೋಗ್ಯಕರ ತಂಬುಳಿ ಮಾಡುವ ವಿಧಾನ

0
2293

ಕನ್ನಡದಲ್ಲಿ ದೊಡ್ಡಪತ್ರೆ, ದೊಡ್ಡಿಪತ್ರೆ, ಕರ್ಪೂರಬಳ್ಳಿ, ಸಾಂಬಾರ ಎಲೆ ಎಂದು ಕರೆಯಲ್ಪಡುತ್ತದೆ. ಪರಿಮಳಭರಿತ, ದುಂಡನೆಯ ದಪ್ಪ ಎಲಗಳಿದ್ದು, ಪೊದೆಯಂತೆ ಬೆಳೆಯುವ ಈ ಗಿಡಬನ್ನು ಸಾಮಾನ್ಯವಾಗಿ ಹಿತ್ತಲು, ಅಂಗಳದಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಮುಖ್ಯವಾಗಿ ದಕ್ಷಿಣಭಾರತದಲ್ಲಿ ಇದರ ಬಳಕೆ ಹೆಚ್ವು. ಅಲಂಕಾರಕ್ಕಾಗೂ, ಮನೆಮದ್ದಿಗೂ, ಅಹಾರದಲ್ಲೂ ಇದನ್ನು ಬಳಸಲಾಗುತ್ತದೆ. ದೊಡ್ಡಪತ್ರೆ ಎಲೆಗಳಿಂದ ತಯಾರಿಸಲಾದ ರುಚಿಕರ ಮತ್ತು ಆರೋಗ್ಯಕರ ತಂಬುಳಿ ನೈಸರ್ಗಿಕವಾಗಿದ್ದು ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ.

ಬೇಕಾಗುವ ಪದಾರ್ಥಗಳು

 • 15-20 ದೊಡ್ಡಪತ್ರೆ ಎಲೆಗಳು
 • 1/2 ಟೀಸ್ಪೂನ್ ಜೀರಿಗೆ
 • 1/2 ಟೀಸ್ಪೂನ್ ಕಾಳು ಮೆಣಸು
 • 1/2 ಕಪ್ ತೆಂಗಿನತುರಿ
 • 1 ಕಪ್ ಮೊಸರು
 • 1/2 ಒಣ ಮೆಣಸಿನಕಾಯಿ
 • 2 ಟೀಸ್ಪೂನ್ ಅಡುಗೆ ಎಣ್ಣೆ
 • 1/4 ಟೀಸ್ಪೂನ್ ಸಾಸಿವೆ
 • ಉಪ್ಪು ರುಚಿಗೆ ತಕ್ಕಷ್ಟು.

ದೊಡ್ಡಪತ್ರೆ ತಂಬುಳಿ ಪಾಕವಿಧಾನ:

 • ದೊಡ್ಡಪತ್ರೆ ಎಲೆಗಳನ್ನು ತೊಳೆದು, ನೀರಾರಸಿ, ಕತ್ತರಿಸಿ. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿಯಿರಿ. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಸೊಪ್ಪು ಹಾಕಿ.
 • ಸೊಪ್ಪು ಬಾಡಿದ ಕೂಡಲೇ ತೆಂಗಿನತುರಿ ಹಾಕಿ ಸ್ಟೋವ್ ಆಫ್ ಮಾಡಿ.
 • ಹುರಿದ ಎಲೆ, ಜೀರಿಗೆ ಮತ್ತು ಕಾಳುಮೆಣಸನ್ನು ಮಿಕ್ಸಿ ಜಾರಿಗೆ ಹಾಕಿ ತೆಂಗಿನ ತುರಿಯೊಂದಿಗೆ ಅರೆಯಿರಿ. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ.
 • ಉಪಯೋಗ – ಆಯುರ್ವೇದದ ಪ್ರಕಾರ ಇದು ತಂಪಿನ ಗುಣವುಳ್ಳದ್ದು, ಜ್ವರ ಹಾಗೂ ವಾತರೋಗಗಳನ್ನು ಕಡಿಮೆ ಮಾಡುವುದರಲ್ಲಿ ಎತ್ತಿದ ಕೈ ಮತ್ತು ಪೌಷ್ಠಿಕ ಗುಣಗಳನ್ನು ಹೊಂದಿದೆ. ಹೊಟ್ಟೆ ಉಬ್ಬರ, ಹೊಟ್ಟೆಮುರಿತ ನಿವಾರಣೆಯಾಗುವುದು ಮತ್ತು ಜೀರ್ಣಶಕ್ತಿ ಅಧಿಕವಾಗುತ್ತದೆ.