ಪೇಟೆ ಮಕ್ಕಳಿಗೆ ಅಗತ್ಯವಿದೆಯೇ ಕೃಷಿ ತರಬೇತಿ??

0
683

ಪೇಟೆ ಮಕ್ಕಳಿಗೆ ಶಾಲೆಗಳಲ್ಲಿ ಪಠ್ಯೇತರ ವಿಷಯಗಳ ಹೊರತಾಗಿ ಡಾನ್ಸ್. ಮ್ಯೂಸಿಕ್, ಸ್ಪೋರ್ಟ್ಸ್ ಕಲಿಸುವುದು ಸಾಮಾನ್ಯವಾಗಿ ಇಲೊಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಾವಯುವ ಕೃಷಿ ಕಲಿಸುತ್ತಿದ್ದಾರೆ ಇದರಿಂದ ನಗರಪ್ರದೇಶದ ಮಕ್ಕಳಿಗೆ ಬಹುಪಯೋಗವಿದೆ ಅಂತೆ ಆ ಉಪಯೋಗ ಏನ್ ಅಂದ್ರೆ ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Also read: ಈ ರೈತ ಅತ್ಯಂತ ಕಡಿಮೆ ವೆಚ್ಚದಲ್ಲಿ ನೈಸರ್ಗಿಕವಾಗಿ ಕೃಷಿ ಮಾಡುತ್ತಿರುವ ಸಾಧನೆ ಅನೇಕ ರೈತರಿಗೆ ಮಾದರಿಯಾಗಿದೆ!!!

ಕೃಷಿ ಎಂಬುದು ದೇಶದ ಬೆನ್ನೆಲಬು ಈ ವಾಕ್ಯ ಮಾತ್ರ ಎಲ್ಲರಿಗೂ ತಿಳಿದಿರುತ್ತೆ ಅದನ್ನು ಬಿಟ್ರೆ ಕೃಷಿಯನ್ನು ಹೇಗೆ ಮಾಡುತ್ತಾರೆ ಯಾವ ತರಕಾರಿ,ಹಣ್ಣು ಆಹಾರ ಧಾನ್ಯಗಳನ್ನು ಹೇಗೆ ಬೆಳೆಯಿತ್ತಾರೆ ಎಂಬ ಮಾಹಿತಿ ನಗರಪ್ರದೇಶದ ಎಷ್ಟೋ ಜನರಿಗೆ ಗೊತ್ತೆಇರುವುದಿಲ್ಲ ಇದರ ಬಗ್ಗೆ ಯಾವುದೇ ಶಾಲೆಯಲ್ಲಿವೂ ಒಂದು ವಿಷಯವಾಗಿ ಕಲಿಸುವದಿಲ್ಲ ಇದರಿಂದ ನಗರಪ್ರದೇಶದ ಜನರಿಗೆ ಇದು ಪ್ರಶ್ನೆಯಾಗೇ ಉಳಿದಿರುತ್ತದೆ ಇದರಿಂದ ನಗರದ ಮಕ್ಕಳಿಗೆ ಕೃಷಿ ಮತ್ತು ಸಾವಯಿವ ಕೃಷಿಯ ಬಗ್ಗೆ ತಿಳುವಳಿಕೆಯ ಅವಶ್ಯಕತ್ತೆ ತುಂಬಾನೇ ಇದೆ. ಇಂತಹ ವಿಷಯವನ್ನು ಕೂಲಂಕುಷವಾಗಿ ಪರಿಗಣಿಸಿ ಮಂಗಳೂರಿನ ಹೊರವಲಯದಲ್ಲಿರುವ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಕಡ್ಡಾಯ ವಿಷಯವಾಗಿ ಸಾವಯಿವ ಕೃಷಿ ಮತ್ತು ಪ್ರಾಯೋಗಿಕ ತರಗತಿಗಳನ್ನು ಮಾಡುತ್ತಿದೆ 5 ರಿಂದ 10 ನೇ ತರಗತಿಗೆ ಪ್ರತ್ಯೇಕ ಪಠ್ಯಕ್ರಮವನ್ನು ಸಿದ್ಧಪಡಿಸಿದೆ. ಮಕ್ಕಳಿಗೆ ಈ ವಿಷಯವಾಗಿ ಶೈಕ್ಷಣಿಕ ವರ್ಷಾಂತ್ಯದ ಕೊನೆಯಲ್ಲಿ ಒಂದು ಪರಿಕ್ಷೆಯಿರುತ್ತದೆ, ವಿದ್ಯಾರ್ಥಿಗಳು ಸ್ವತಹ ತಾವೇ ಮಾಡಿದ ಪ್ರಾಯೋಗಿಕ ಕೃಷಿಯ ಬಗ್ಗೆ ಬರೆಯಬೇಕಾಗುತ್ತೆ. ಸಿಬಿಎಸ್ಇ ಅಂಗಸಂಸ್ಥೆಯಾದ ಶಾರದಾ ವಿದ್ಯಾನಿಕೇತನ ಶಾಲೆ ಹೊಸದಾಗಿ ಪರಿಚಯಿಸಲಾದ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, THE LOGICAL INDIAN SHARADA GROUP OF INSTITUTE ಅಧ್ಯಕ್ಷರಾದ ಎಮ್.ಪಿ. ಪುರಾಣಿಕ್ ಈ ಬದಲಾವಣೆಯ ಪಠ್ಯಕ್ರಮವನ್ನು ಪರಿಚಯಿಸಿದ್ದಾರೆ. ಸುಮಾರು 2,000 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಮ್ಮ ಶಾಲೆಯಲ್ಲಿದು ಅವುಗಳಲ್ಲಿ 1,000 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಸತಿ ಶಾಲೆಯ ಕ್ಯಾಂಪಸ್ ನಲ್ಲಿ ಇದ್ದಾರೆ ಅವರು ಈ ಕೃಷಿ ಪ್ರಯೋಗಾಲಯವನ್ನು ಮಾಡುತ್ತಿದ್ದಾರೆ.

Also read: ಕೃಷಿಯಿಂದ ಸಂಪಾದನೆ ಇಲ್ಲವೆಂದು ಪಟ್ಟಣಕ್ಕೆ ಬರುತ್ತಿರುವ ಯುವಕರ ಮಧ್ಯೆ, ಈ ಇಂಜಿನಿಯರ್ ಕೃಷಿಯಿಂದ ಹೇಗೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದೆಂದು ತೋರಿಸಿದ್ದಾರೆ..!

ಮಣ್ಣಿನ ಪರೀಕ್ಷೆಯನ್ನು ಕೂಡ ಶಾಲೆಯ ಪ್ರದೇಶದಲ್ಲಿ ಮಾಡುತ್ತೇವೆ ಶಾಲೆಯಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆಸಲು ಪ್ರಾರಂಭಿಸಿದೆ. ಈ ಹೊತ್ತಿಗೆ, 3.5 ಎಕರೆ ಪ್ರದೇಶದಲ್ಲಿ ಸುಮಾರು 18 ತರಕಾರಿಗಳನ್ನು ವಿದ್ಯಾರ್ಥಿಗಳು ಬೆಳೆಸಿದ್ದಾರೆ. ಶಾಲೆಯ ಕ್ಯಾಂಪಸ್ ಸಮೀಪದಲ್ಲಿ ಬಳಕೆಯಾಗದ ಭತ್ತದ ಪ್ರದೇಶಗಳಲ್ಲಿ ಭತ್ತದ ಸಾಗುವಳಿ ಮಾಡಲು ಶಾಲೆಯು ಯೋಚಿಸುತ್ತಿದೆ ಇದೆಲ್ಲ ಮಾಡುತಿರುವುದು ಕೃಷಿ ಕ್ಷೇತ್ರದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ವಿಷಯವನ್ನು ಪರಿಚಯಿಸಲ್ಪಟ್ಟಿದೆ, ಇದರಿಂದಾಗಿ ಮುಂದೆ ವೃತ್ತಿ ಆಯ್ಕೆಯಾಗಿ ಬೆಳೆಸುವಿಕೆಯನ್ನು ಸಹ ಅವರು ಯೋಚಿಸಬಹುದು.

ಶೀಘ್ರದಲ್ಲೇ ನಾವು ದೇಶದ ಇತರೆ ಶಾಲೆಗಳಲ್ಲಿ ಕನಿಷ್ಠ ಐಚ್ಛಿಕ ವಿಷಯವನ್ನಾಗಿ ಮಾಡಲು ಕೇಂದ್ರ ಶಿಕ್ಷಣ ಮಂಡಳಿ CBSCE ಗೆ ಮನವರಿಕೆ ಮಾಡುತ್ತೇವೆ ಇದರಿಂದ ಕೃಷಿ ವಿಜ್ಞಾನವನ್ನು ಶಾಲಾ ಕಡ್ಡಾಯ ವಿಷಯವಾಗಿ ಪರಿಚಯಿಸುವ ಅಗತ್ಯತ್ತೆ ಇದೆ ನಗರ ಪ್ರದೇಶಗಳಲ್ಲಿ ಒಂದು ‘ಬೆಳೆ’ ಬೆಳೆಯುವ ಬಗ್ಗೆ ಮಕ್ಕಳಿಗೆ ಗೊತ್ತಿಲ್ಲ ಅದೇಕಾರಣಕ್ಕೆ ಕೃಷಿ ವಿಷಯವನ್ನು ಎಲ್ಲಾ ಶಾಲೆಯಲ್ಲಿ ಪ್ರಾರಂಭ ಮಾಡಿದರೆ ಮಕ್ಕಳಿಗೆ ಅನುಭವ ನೀಡಿದಂತ್ತೆ ಆಗುತ್ತದೆ.
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವುದೇ ತರಕಾರಿ ಬಗ್ಗೆ ವಿಚಾರಿಸಿದರು ಕೃಷಿ ಬಗ್ಗೆ ಆಗಲಿ ತರಕಾರಿ ಬಗ್ಗೆ ಮಾಹಿತಿ ಇರುವದಿಲ್ಲ “ಒಮ್ಮೆ ನಾನು ವಿದ್ಯಾರ್ಥಿಗಳನ್ನು ಕೇಳಿದೆ ನೀವು ಸಿಹಿ ಆಲೂಗೆಡ್ಡೆಯನ್ನು ನೋಡಿದ್ದೀರಾ? ಒಂದು ಮಗು ಹೌದು, ಕಿರಾಣಿ ಅಂಗಡಿಯಲ್ಲಿ ನೋಡಿದೆ ಎಂದು ಹೇಳಿತು ಮತ್ತೆ ನಾನು ಆ ಸಿಹಿ ಆಲೂಗಡ್ಡೆ ಎಲ್ಲಿ ಬೆಳೆಯುತ್ತಾರೆ ಎಂದು ಕೇಳಿದಾಗ ಮಗು ಮರದ ಮೇಲೆ ಎಂದು ಹೇಳಿತು ಆವಾಗೆ ನಂಗೆ ತಿಳಿಯಿತು ಈ ಕೃಷಿ ವಿಷಯವನ್ನು ಪರಿಚಯಿಸುವುದು ಬಹುಮುಖ್ಯವಾಗಿದೆ ಎಂಬುವುದು.

ಏಕೆಂದರೆ ಒಂದು ನಗರಪ್ರದೇಶದ ಮಗುವಿಗೆ ಆಲೋಗಡ್ಡೆ ಮಣ್ಣಿನ ಒಳ್ಳೆಗೆ ಬೆಳೆಯಿತ್ತೆ ಎಂಬ ಚಿಕ್ಕ ವಿಷಯದ ಬಗ್ಗೆ ಅರಿವಿಲ್ಲ ಅಂದ್ರೆ ಮುಂದೆ ಅವನ ಜೀವನಕ್ಕೆ ತೊದರೆವುಂಟು ಮಾಡುವ ಪ್ರಶ್ನೆಯಿದು ಎಂದು. ಎಮ್ ಪಿ ಪುರಾಣಿಕ್ ಹೇಳಿದ್ದಾರೆ.
ಶಾಲಾಕ್ಯಾಂಪಸ್ ನಲ್ಲಿ ಹೆಚ್ಚಾಗಿ ತೋಟಗಾರಿಕೆ ಉತ್ಪನವನ್ನು ಬೆಳೆಯಿತ್ತಾರೆ ಆ ಉತ್ಪನ್ನಗಳನ್ನು ಮಾರಾಟ ಮಾಡಲು ವಿದ್ಯಾರ್ಥಿಗಳ ತಂಡ ರಚನೆ ಮಾಡಿ ಮಾರಾಟ ಮಾಡುವ ಕಲೆಯನ್ನು ನೀಡಿದ್ದಾರೆ ಇದರಿಂದ ಮಾರುಕಟ್ಟೆಯ ಅನುಭವ ಕೂಡ ನೀಡುತ್ತಿದ್ದಾರೆ ಕೃಷಿಗೆ ಬೇಕಾಗುವ ನೀರನ್ನು ಮಳೆನೀರಿನ ಕೊಯ್ಲುನ್ನು ಮಾಡಿ ಮರುಬಳಕೆ ಮಾಡುತ್ತಿದ್ದಾರೆ ಇದರಿಂದ ಕ್ಯಾಂಪಸ್ ಅಲ್ಲಿ ಇರುವ ನಾಲ್ಕು ಬೋರ್ವೆಲ್ ಗಳ ಅಂತರ್ಜಲ ಹೆಚ್ಚಾಗಿದೆ. ನೀರನ್ನು ಮರುಬಳಕೆ ಮಾಡುವ ವಿಧಾನದಿಂದ ಒಂದು ದಿನಕ್ಕೆ ಒಂದು ಮಿಲಿಯನ್ ಲೀಟರ್ ನೀರಿನ ಸಂಸ್ಕರಣೆ ಮಾಡುತ್ತಿದ್ದಾರೆ. ಹೀಗೆ ಹನಿ ನೀರಾವರಿ, ಸಶಿಕ್ರಾಸಿಗ್, ತರಕಾರಿಯ ಗುಣಮಟ್ಟ, ಮಾರುಕಟ್ಟೆ ಅನುಭವ, ನೀರಿನ ಮಹತ್ವ ಹೀಗೆ 80% ಕೃಷಿಯ ಬಗ್ಗೆ ತಿಳಿದುಕೊಂಡಿದ್ದಾರೆ.