ಚಳಿಗಾಲದಲ್ಲಿ ಕೂದಲು ಒರಟು, ಜಿಡ್ಡು ಎಣ್ಣೆಯಂಶದಿಂದ ಕೂಡಿ ಕಿರಿಕಿರಿ ವುಂಟಾಗುತ್ತದೆಯೇ? ಹಾಗಾದ್ರೆ ಈ ಹೇರ್ ಮಾಸ್ಕ್ ಉಪಯೋಗಿಸಿ ನೋಡಿ..

0
534

ಕೂದಲು ಆರೈಕೆಗೆ ಈ ಹೇರ್ ಮಾಸ್ಕ್ ಉಪಯೋಗಿಸಿ ರೇಷ್ಮೆಯಂತ ಕೂದಲು ಪಡೆಯರಿ:

ಚಳಿಗಾಲ ಬಂತು ಎಂದರೆ ಚರ್ಮವು ಒಡೆದು ಯಾತನೆಯನ್ನು ಅನುಭವಿಸಬೇಕಾಗುತ್ತೆ. ಆದರಿಂದ ಈ ಚಳಿಯನ್ನು ಎಲ್ಲರೂ ಇಷ್ಟ ಪಡುವುದಿಲ್ಲ. ರಾತ್ರಿಯಂತೂ ಕೊರೆಯುವ ಚಳಿ. ಹಗಲು ಒಣಗಾಳಿ ಇರುವುದರಿಂದ ಮೈಕೈಯಲ್ಲಾ ಬೇರೆಯದೇ ಕಲರ್ ಹೊಂದಿರುತ್ತೆ. ಇದು ಬರಿ ಚರ್ಮಕ್ಕೆ ಮಾರಕವಾಗಿರದೆ ಕೂದಲುಗಳಿಗೂ ಮಾರಕವಾಗಿದೆ ಇದರಿಂದ ಕೂದಲುಗಳು ಯಾವಾಗಲೂ ಒಣಗಿ, ಒರಟಾಗಿ ಎಷ್ಟೇ ಸೆಟ್ಟಿಂಗ್ ಮಾಡಿದರು ಕೂಡ ನಿಟ್ಟಾಗಿ ಕೂರುವುದಿಲ್ಲ ಇದರಿಂದ ಪ್ರತಿನಿತ್ಯವೂ ಕೂದಲನ್ನು ತೊಳೆಯಬೇಕಾಗುತ್ತದೆ. ತೊಳೆಯದೇ ಬಿಟ್ಟರೆ ಜಿಡ್ಡು, ಎಣ್ಣೆಯಂಶದಿಂದ ಕೂಡಿ ಕಿರಿಕಿರಿ ವುಂಟಾಗುತ್ತದೆ. ಹಾಗಂತ ಪ್ರತಿನಿತ್ಯವೂ ತೊಳೆದರೆ ಕೂದಲಿಗೆ ಅಪಾಯ! ಹಾಗಾದ್ರೆ ಯಾವರೀತಿಯ ಆರೈಕೆ ಉತ್ತಮ ಎನುವುದು ಇಲ್ಲಿದೆ ನೋಡಿ.


Also read: ಕೂದಲು ಉದುರುತ್ತಿದೆಯೇ ಚಿಂತಿಸಬೇಡಿ ದಪ್ಪ ಹಾಗೂ ಉದ್ದನೆಯ ಕೂದಲಿಗೆ ಇಲ್ಲಿದೆ ಪರಿಹಾರ ನೋಡಿ..

ಕೂದಲು ಆರೈಕೆಗೆ ಪರಿಣಾಮಕಾರಿ ಹೇರ್ ಮಾಸ್ಕ್-ಗಳು:

ತೆಂಗಿನೆಣ್ಣೆ ಮತ್ತು ಜೇನುತುಪ್ಪದ ಮಾಸ್ಕ್:

ಕೂದಲಿನ ಆರೈಕೆಗೆ ತೆಂಗಿನ ಎಣ್ಣೆ ಹೆಚ್ಚಿನ ಪ್ರಮುಖ್ಯವಾಗಿದ್ದು ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಯಾಕೆಂದರೆ ಇದು ತಲೆಬುರುಡೆಗೆ ಆಳವಾಗಿ ಪೋಷಣೆ ನೀಡಲು ನೆರವಾಗುವುದು. ಇದರೊಂದಿಗೆ ಕೂದಲಿನ ಕಿರುಚೀಲಗಳನ್ನು ಕೂಡ ಬಲಪಡಿಸುವುದು. ಶಿಲೀಂಧ್ರ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿರುವಂತಹ ತೆಂಗಿನೆಣ್ಣೆಯು ತಲೆಹೊಟ್ಟು ಮತ್ತು ತಲೆಬುರುಡೆಯ ಇತರ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಜೇನುತುಪ್ಪದಲ್ಲಿ ಕೂಡ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಇದು ಕೂದಲು ಹಾಗೂ ತಲೆಬುರುಡೆಯನ್ನು ತೇವಾಂಶ ಹಾಗೂ ಮೊಶ್ಚಿರೈಸ್ ಆಗಿಡುವುದು.
ಬೇಕಾಗುವ ಸಾಮಗ್ರಿಗಳು:
½ ಕಪ್ ತೆಂಗಿನೆಣ್ಣೆ.
¼ ಕಪ್ ಜೇನುತುಪ್ಪ.

ತಯಾರಿಸುವ ವಿಧಾನ:


Also read: ಉದ್ದ ಕೂದಲಿಗೆ ದುಬಾರಿ ಕ್ರೀಮ್/ಶಾಂಪೂ ಬಿಟ್ಟುಬಿಡಿ… ಈ ಮನೆಮದ್ದುಗಳನ್ನು ಪಾಲಿಸಿ ಸಾಕು..!

ಒಂದು ಬಟ್ಟಲಲ್ಲಿ ತೆಂಗಿನೆಣ್ಣೆ ಮತ್ತು ಜೇನುತುಪ್ಪ ಹಾಕಿ. ತೆಂಗಿನೆಣ್ಣೆಯು ಗಟ್ಟಿಯಾಗಿದ್ದರೆ ಅದನ್ನು ಬಿಸಿಯಲ್ಲಿ ಕರಗಿಸಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಕೂದಲು ಎಷ್ಟು ಉದ್ದವಿದೆ ಎನ್ನುವ ಮೇಲೆ ನೀವು ಹಾಕುವ ಪ್ರಮಾಣವು ನಿರ್ಧಾರವಾಗುವುದು. ಬ್ರಷ್ ಬಳಸಿಕೊಂಡು ಕೂದಲಿಗೆ ಮಾಸ್ಕ್ ನ್ನು ಸರಿಯಾಗಿ ಹಚ್ಚಿಕೊಳ್ಳಿ. ಕೂದಲನ್ನು ಸಂಪೂರ್ಣವಾಗಿ ಈ ಮಾಸ್ಕ್ ನಿಂದ ಮುಚ್ಚಿಕೊಳ್ಳಿ. ಮಲಗುವ ಮೊದಲು ಕೂದಲನ್ನು ಬನ್ ಆಕಾರದಲ್ಲಿ ಕಟ್ಟಿಕೊಂಡು ಅದಕ್ಕೆ ಶಾವರ್ ಕ್ಯಾಪ್ ಅಥವಾ ಮೆತ್ತಗಿನ ಬಟ್ಟೆ ಸುತ್ತಿಕೊಳ್ಳಿ. ರಾತ್ರಿ ನೀವು ಈ ಮಾಸ್ಕ್ ನ್ನು ಹಾಗೆ ಬಿಡಿ. ಬೆಳಗ್ಗೆ ಎದ್ದ ಬಳಿಕ ಸಲ್ಫೇಟ್ ರಹಿತ ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ.

ತೆಂಗಿನೆಣ್ಣೆ ಮತ್ತು ಮೊಸರು:

ತೆಂಗಿನೆಣ್ಣೆಯು ಕೂದಲಿನ ಬೆಳವಣಿಗೆ ಉತ್ತೇಜಿಸಲು ಪ್ರಮುಖ ಪಾತ್ರ ವಹಿಸುವುದು. ಮೊಸರಿನಲ್ಲಿ ಇರುವಂತಹ ಕಿಣ್ವಗಳು ಕೂದಲಿಗೆ ಪೋಷಣೆ ಹಾಗೂ ಮೊಶ್ಚಿರೈಸ್ ನೀಡುವುದು. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಪ್ರೋಟೀನ್ ಮತ್ತು ಕೊಬ್ಬು ಕೂದಲಿನ ತುದಿ ಒಡೆಯುವುದನ್ನು ತಪ್ಪಿಸುವುದು. ತಲೆಬುರುಡೆಯ ಪಿಎಚ್ ಮಟ್ಟವನ್ನು ಕಾಪಾಡುವಲ್ಲಿ ಮೊಸರು ಪ್ರಮುಖ ಪಾತ್ರ ನಿರ್ವಹಿಸುವುದು.

ಬೇಕಾಗುವ ಸಾಮಗ್ರಿಗಳು:

½ ಕಪ್ ಮೊಸರು
2 ಚಮಚ ತೆಂಗಿನೆಣ್ಣೆ
Most Read: ಕೂದಲು ದಪ್ಪವಾಗಿ ಬೆಳೆಯಬೇಕೇ? ಮೊಟ್ಟೆ, ತೆಂಗಿನೆಣ್ಣೆ ಹೇರ್ ಮಾಸ್ಕ್ ಬಳಸಿ.


Also read: ಉದುರುವ ಕೂದಲಿಗೆ ಮನೆಮದ್ದು

ತಯಾರಿಸುವ ವಿಧಾನ:

ಮೊಸರು ಹಾಗೂ ತೆಂಗಿನೆಣ್ಣೆಯನ್ನು ಒಂದು ಶುದ್ಧವಾಗಿರುವಂತಹ ಪಿಂಗಾಣಿಯಲ್ಲಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಮೃಧುವಾಗುವ ತನಕ ಸರಿಯಾಗಿ ಮಿಶ್ರಣ ಮಾಡಿ. ಈಗ ಕೂದಲನ್ನು ಎರಡು ವಿಭಾಗ ಮಾಡಿಕೊಂಡು ಕೂದಲಿನ ಎಲ್ಲಾ ಭಾಗಗಳಿಗೆ ಸರಿಯಾಗಿ ಇದನ್ನು ಹಚ್ಚಿಕೊಳ್ಳಿ. ಕೂದಲಿಗೆ ಶಾವರ್ ಕ್ಯಾಪ್ ಹಾಕಿಕೊಂಡು ರಾತ್ರಿಯಿಡಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ನಿಮಗೆ ಬೇಕಿರುವಂತಹ ಶಾಂಪೂ ಬಳಸಿಕೊಂಡು ಸಾಮಾನ್ಯ ನೀರಿನಿಂದ ಕೂದಲು ತೊಳೆಯಿರಿ. ಇದರಿಂದ ಕೂದಲು ಆರೋಗ್ಯ ಮತ್ತು ಹೊಳಪನ್ನು ಹೊಂದಿರುತೇವೆ.