ಪ್ರತಿನಿತ್ಯ ಯಾವ ಭಂಗಿಯಲ್ಲಿ ಮಲಗಬೇಕು? ಎಡಕ್ಕೆ ಮಲಗುವುದರಿಂದ ಏನೆಲ್ಲಾ ಆರೋಗ್ಯಕರ ಲಾಭ??

0
662

ಮನುಷ್ಯನಿಗೆ ಹೇಗೆ ಕೆಲಸ, ಹಣ, ಅಸ್ತಿ, ಊಟ ಮುಖ್ಯವೂ ಹಾಗೆಯೇ ವಿಶ್ರಾಂತಿ, ನಿದ್ದೆ ಮುಖ್ಯವಾಗಿದೆ. ಒಂದು ವೇಳೆ ನಿದ್ದೆ ಸರಿಯಿಲ್ಲದೆ ಇದ್ರೆ ಆ ದಿನ ಪೂರ್ತಿ ನಾನಾ ರೀತಿಯ ತೊಂದರೆಗಳು ಕಿರಿಕಿರಿ ಅನುಭವಿಸಬೇಕಾಗುತ್ತೆ. ಅದಕ್ಕಾಗಿ ಪ್ರತಿಯೊಬ್ಬರೂ ನಿದ್ದೆಗೆ ಜಾರುವುದು ಸತ್ಯವಾದರೆ. ನಿದ್ದೆ ಮಾಡುವುದು ಹೇಗೆ ಎನ್ನುವುದು ಮುಖ್ಯವಾದ ಸಂಗತಿಯಾಗಿದೆ. ಕೆಲವು ಸಂಶೋಧನೆಗಳು ಹೇಳುವ ಪ್ರಕಾರ ಯಾವ ಮಗ್ಗುಲು ಮಲಗಿದರೆ ಒಳ್ಳೆಯದು ಎನ್ನುವುದು ಕೂಡ ಪ್ರಶ್ನೆಯಾಗಿದೆ. ಅದರಂತೆ ನಮ್ಮ ಶರೀರದ ಅಂಗಗಳ ರಚನೆಯನ್ನು ಗಮನಿಸಿದರೆ ಎಡಕ್ಕೆ ಮಲಗುವುದರಿಂದ ಪಚನಾಂಗಗಳಿಗೆ ಅತಿ ಕಡಿಮೆ ಭಾರ ಬಿದ್ದು ಅವುಗಳ ಕ್ರಿಯೆ ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ.

ಎಡಮಗ್ಗಲಲ್ಲಿ ಮಲಗುವುದರಿಂದ ಪಚನಕ್ರಿಯೆಗೂ ಹೊರತಾಗಿ ಇನ್ನೂ ಹಲವು ಪ್ರಯೋಜನಗಳಿವೆ. ಆದರೆ ಇದಕ್ಕೆ ವಿರುದ್ಧವಾಗಿ ಬಲಮಗ್ಗಲಿಗೆ ಮಲಗಿಕೊಂಡರೆ ಪಚನಕ್ರಿಯೆಯ ಬಳಿಕ ದೇಹದಲ್ಲಿ ಸಂಗ್ರಹವಾದ ವಿಷಕಾರಿ ವಸ್ತುಗಳು ಪೂರ್ಣವಾಗಿ ವಿಸರ್ಜನೆಯಾಗದೇ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತವೆ. ಹಾಗಾದ್ರೆ ಯಾವ ರೀತಿಯಲ್ಲಿ ನಿದ್ದೆ ಒಳ್ಳೆಯದು?
ಇದರಿಂದ ಏನೆಲ್ಲಾ ಪ್ರಯೋಜನ ಇಲ್ಲಿದೆ ನೋಡಿ.

ಎಡಗಡೆ ಹೊರಳಿ ಮಲಗಿದರೆ ಏನು ಪ್ರಯೋಜನ?

1. ಮೂತ್ರಪಿಂಡ, ಯಕೃತ್‌ಗಳ ಸ್ವಚ್ಚಗೊಳಿಸುತ್ತೆ.

ನಮ್ಮ ಶರೀರದ ಅನೈಚ್ಛಿಕ ಕಾರ್ಯದಲ್ಲಿ ಮೂತ್ರಪಿಂಡ ಮತ್ತು ಯಕೃತ್ ಪ್ರಮುಖ ಪಾತ್ರ ವಹಿಸುತ್ತವೆ. ಇವು ನಮ್ಮ ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ಸಂಗ್ರಹಿಸಿ ಹೊರಹಾಕುವ ಕೆಲಸವನ್ನು ನಿದ್ದೆಯ ಸಮಯದಲ್ಲಿ ಹೆಚ್ಚಾಗಿ ಮಾಡುತ್ತವೆ. ಎಡಮಗ್ಗಲಲ್ಲಿ ಮಲಗುವುದರಿಂದ ಇವುಗಳ ಮೇಲೆ ಯಾವುದೇ ಭಾರ ಬೀಳದ ಕಾರಣ ಇವುಗಳ ಕ್ಷಮತೆ ಅತಿ ಹೆಚ್ಚಾಗಿ ದೇಹದಿಂದ ಸಂಗ್ರಹವಾದ ಎಲ್ಲಾ ವಿಷಕಾರಿ ವಸ್ತುಗಳು ಹೊರಹಾಕಲು ಸಾಧ್ಯವಾಗುತ್ತದೆ.

2. ಎದೆಯುರಿ, ಹೊಟ್ಟೆಯಲ್ಲಿ ಆಮ್ಲೀಯತೆ

ಎಡಮಗ್ಗಲಲ್ಲಿ ಮಲಗುವುದರಿಂದ ಪಚನಗೊಂಡ ಆಹಾರ ಮುಂದೆ ಸಾಗಲು ಸುಲಭವಾಗುತ್ತದೆ. ಅಲ್ಲದೇ ಹಿಂದೆ ಸರಿಯುವ ಸಾಧ್ಯತೆಗಳೂ ಕಡಿಮೆಯಾಗುತ್ತದೆ. ಹಿಂದೆ ಸರಿದ ಆಹಾರ ಹೆಚ್ಚು ಆಮ್ಲೀಯವಾಗಿ ಹುಳಿತೇಗು, ಎದೆಯುರಿ, ಹೊಟ್ಟೆಯುರಿ ಮೊದಲಾದವುಗಳನ್ನು ಉಂಟುಮಾಡುತ್ತವೆ. ಎಡಮಗ್ಗಲಲ್ಲಿ ಮಲಗುವುದರಿಂದ ಇವೆಲ್ಲಾ ತೊಂದರೆಗಳು ಇಲ್ಲವಾಗುತ್ತವೆ ಮಾಡುತ್ತೆ.

3. ಯಕೃತ್‌ನಲ್ಲಿ ಕೊಬ್ಬು ಸಂಗ್ರಹ ತಪ್ಪಿಸುತ್ತೆ

ಆಹಾರದಲ್ಲಿನ ಕೊಬ್ಬು ಕರಗಲು ಯಕೃತ್ ಮತ್ತು ಪಿತ್ತಕೋಶಗಳು ಸ್ರವಿಸುವ ಪಿತ್ತರಸ ಅಗತ್ಯವಾಗಿದೆ. ಇದಕ್ಕೆ emulsification ಎನ್ನುತ್ತಾರೆ. ಒಂದು ವೇಳೆ ಪಿತ್ತರಸದ ಪ್ರಮಾಣ ಸಾಕಷ್ಟು ಇಲ್ಲದಿದ್ದರೆ ಕೊಬ್ಬು ಕರಗದೇ ಯಕೃತ್ ನೊಳಗೇ ಉಳಿದುಬಿಡುತ್ತದೆ. ಇದಕ್ಕೆ fatty liver ಎಂದು ಕರೆಯುತ್ತಾರೆ. ಎಡಮಗ್ಗಲಲ್ಲಿ ಮಲಗುವುದರಿಂದ ಕೊಬ್ಬು ಉಳಿಯದಿರಲು ನೆರವಾಗಿ ಈ ಸ್ಥಿತಿಗೆ ಬರುವುದರಿಂದ ತಪ್ಪಿದಂತಾಗುತ್ತದೆ.

4. ಜೀರ್ಣಕ್ರಿಯೇಗೆ ಸಹಕಾರಿ

Stomach ache

ಅನೈಚ್ಛಿಕ ಕಾರ್ಯಗಳಲ್ಲಿ ಇನ್ನೊಂದು ಅತಿ ಪ್ರಮುಖವಾದ ಕಾರ್ಯವೆಂದರೆ ಜೀರ್ಣಕ್ರಿಯೆ. ಎಡಮಗ್ಗಲಲ್ಲಿ ಮಲಗುವುದರಿಂದ ಜಠರ ಮತ್ತು ಮೇದೋಜೀರಕಾಂಗಗಳ ಮೇಲೆ ಯಾವುದೇ ಒತ್ತಡ ಬೀಳದೇ ಇವುಗಳು ತಮ್ಮ ಪೂರ್ಣ ಕ್ಷಮತೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಮೇದೋಜೀರಕ ಗ್ರಂಥಿಯಿಂದ ಸ್ರವಿತವಾಗುವ ರಸಗಳೂ ಪೂರ್ಣ ಪ್ರಮಾಣದಲ್ಲಿದ್ದು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ. ಜಠರದಲ್ಲಿ ಪೂರ್ಣಪ್ರಮಾಣದಲ್ಲಿ ಜೀರ್ಣವಾದ ಆಹಾರ ಕರುಳುಗಳ ಕೆಲಸವನ್ನು ಸುಲಭಗೊಳಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

5. ಸುಖವಾದ ವಿಸರ್ಜನೆಗೆ ಸಹಕರಿಸುತ್ತದೆ.

ನಮ್ಮ ಆಹಾರದ ಬಹುಪಾಲು ಜೀರ್ಣಗೊಂಡ ಬಳಿಕ ಅಗತ್ಯ ಕೆಲಸಗಳಿಗಾಗಿ ಹೀರಿಕೊಳ್ಳಲ್ಪಡುವುದು ಸಣ್ಣಕರುಳಿನಲ್ಲಿ. ಬಳಿಕ ಉಳಿದ ತ್ಯಾಜ್ಯ ದೊಡ್ಡ ಕರುಳಿಗೆ ರವಾನೆಯಾಗುತ್ತದೆ. ಎಡಮಗ್ಗಲಲ್ಲಿ ಮಲಗುವ ಮೂಲಕ ಈ ರವಾನೆ ಕೆಲಸಕ್ಕೆ ಗುರುತ್ವಾಕರ್ಷಣೆ ನೆರವಾಗುವುದರಿಂದ ಯಾವುದೇ ಕಷ್ಟವಿಲ್ಲದೇ ಸಣ್ಣಕರುಳಿನಿಂದ ತ್ಯಾಜ್ಯ ದೊಡ್ಡ ಕರುಳಿಗೆ ಬರುತ್ತದೆ. ಮರುದಿನ ದೊಡ್ಡ ಕರುಳಿನಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಸುಲಭವಾಗಿ, ಕಡಿಮೆ ಒತ್ತಡದಲ್ಲಿ ವಿಸರ್ಜನೆಗೊಳ್ಳಲು ಸಹಕಾರಿಯಾಗಿದೆ.

6. ಹೃದಯದ ಕ್ಷಮತೆ ಹೆಚ್ಚುತ್ತದೆ

ಎಡಮಗ್ಗಲಲ್ಲಿ ಮಲಗುವುದರಿಂದ ಶರೀರದ ಅನೈಚ್ಛಿಕ ಕಾರ್ಯದಲ್ಲಿ ನಿರತರಾಗಿರುವ ಎಲ್ಲಾ ಅಂಗಗಳು ಕಡಿಮೆ ಹೊರೆ ಹೊತ್ತಿರುವ ಕಾರಣ ಇವುಗಳಿಗೆ ರಕ್ತ ಪೂರೈಸಲು ಹೃದಯಕ್ಕೆ ಹೆಚ್ಚಿನ ಶ್ರಮ ಬೇಕಾಗಿಲ್ಲ. ಅಲ್ಲದೇ ಗುರುತ್ವಾಕರ್ಷಣೆಯ ಬಲದಿಂದಲೇ ಹೆಚ್ಚಿನ ಪ್ರಮಾಣ ಅಂಗಗಳಿಗೆ ಲಭ್ಯವಾಗುವುದರಿಂದ ಅಷ್ಟರ ಮಟ್ಟಿಗೆ ಹೃದಯದ ಭಾರ ಕಡಿಮೆಯಾಗುತ್ತದೆ. ಹೆಚ್ಚಿನ ಒತ್ತಡ ಅಗತ್ಯವಿಲ್ಲದಿರುವುದರಿಂದ ಹೃದಯಕ್ಕೆ ರಕ್ತ ಒಯ್ಯುವ ರಕ್ತನಾಳಗಳು ಸಹಾ ಕಡಿಮೆ ಒತ್ತಡವನ್ನು ಅನುಭವಿಸುತ್ತವೆ. ಇದು ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ.