ಹಿರಿಯರು ಹೇಳೋ ಥರ ರಾತ್ರಿ ಸೂಜಿ-ದಾರದ ಕೆಲಸ ಮಾಡಿದ್ರೆ ದಾರಿದ್ರ್ಯ ಬರುತ್ತಾ? ಇದು ಬರೀ ಮೂಢನಂಬಿಕೆನಾ??

0
1226

“ಹಿರಿಯರು ಮಾಡಿದ ಹಿರಿಕಾಯಿಗೆ ಹೆಚ್ಚು ಕಣ್ಣು” ಎಂಬ ಗಾದೆಯಲ್ಲಿ ಬರಿ ಮಾತಿನ ವ್ಯಂಗ್ಯ ಅಡಗಿಲ್ಲ, ಅದರಲ್ಲಿ ಬಲವಾದ ಕಾರಣಗಳ ಜತೆ ವೈಜ್ಞಾನಿಕ ವಿಷಯವು ಮತ್ತು ಭದ್ರತೆಯ ವಿಷಯವು ಅಡಗಿದೆ. ಹಳೆಯ ಯಾವುದೇ ವಿಷ್ಯ ತೆಗೆದುಕೊಂಡರು ಸಹಿತ ಅದರಲ್ಲಿ ಅನುಭವವಿರುತ್ತೆ ಇದು ಒಂದು ಸಂಶೋಧನೆ ಅಂತ ಹೇಳಬಹುದು. ಅದರಲ್ಲಿ ರಾತ್ರಿ ಸಮಯಕ್ಕೆ ಬಂದರೆ ಕೆಲವೊಂದು ಅಪಾಯದ ವಸ್ತುಗಳನ್ನು ಮುಟ್ಟುತ್ತಿರಲಿಲ್ಲ ಅದನ್ನು ಮುಟ್ಟುವುದು ಒಳ್ಳೆಯದು ಅಲ್ಲ, ಒಂದು ವೇಳೆ ಹಿರಿಯರ ಮಾತು ಮೀರಿ ಮುಟ್ಟಿದರೆ ಆ ಮಗ ಮತ್ತು ವ್ಯಕ್ತಿ ಕೆಟ್ಟವನು ಅವನು ಹಿರಿಯರಿಗೆ ಬೆಲೆ ಕೊಡುವುದಿಲ್ಲ ಎಂದು ಒಂದು ಧಾರ್ಮಿಕ ಜೈಲಿನಲ್ಲಿ ಭಂದಿಸುತ್ತಿದ್ದರು.

Also read: ಮೂಢನಂಬಿಕೆಗಳ ಹಿಂದೆ ಇರುವ ಕರಾಳ ಸತ್ಯಗಳು…!

ಈ ಆಚಾರಗಳ ಮೂಲ ಹುಡುಕೋಕ್ಕೆ ತುಂಬಾ ಹಿಂದೆ ಹೋಗಬೇಕಾಗಿಲ್ಲ, ಬರಿ 10-20 ವರ್ಷಗಳ ಹಿಂದೆ ಹೋದರೆ ತಿಳಿಯುತ್ತೆ, ಅಲ್ಲಿ ಎಷ್ಟೊಂದು ಸಂಪ್ರದಾಯಗಳು ಮತ್ತು ನೈತಿಕ ಕತೆಗಳಿದ್ದವು ಎಂದು. ಅವುಗಳಲ್ಲಿ ಕೆಲವೊಂದು ಕೇಳಲು ಹಿತವಾದರು ಕೂಡ ರೂಡಿಸಿಕೊಳ್ಳಲು ಬೇಜಾರೇ ಆಗುತ್ತೆ. ಕೆಲವೊಂದು ಸಂಶೋಧನೆಯಿಂದ ತಿಳಿಯುತ್ತೆ, ಹಿರಿಯರು ಮಾಡಿದ ಸಂಪ್ರದಾಯಗಳನ್ನು ಗ್ರಹಿಸಿಸಲು ಆಗದ ವ್ಯಕ್ತಿಗೆ ಜೀವನದಲ್ಲಿ ಕ್ಷಮಿಸುವ ಬೇರೆಯವರನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇರುವುದಿಲ್ಲ ಅಂತ ಹೇಳಿದ್ದಾರೆ. ಅಂತಹ ಸಾಲಿನಲ್ಲಿ ಬರುವ ಸಣ್ಣದಾದ ಸೂಕ್ಷ್ಮ ವಿಷಯವೊಂದಿದೆ ನೋಡಿ.

ನಿಮ್ಮ ಮೆನೆಯಲ್ಲಿ ಹಿರಿಯರಿದ್ದರೆ ಖಂಡಿತ ಇದನ್ನು ಹೇಳಿರುತ್ತಾರೆ. ಕತ್ತಲಾದ ಮೇಲೆ ಸೂಜಿ ಮುಟ್ಟಬಾರದು, ಬಟ್ಟೆ ಹೊಲಿಯಬಾರದು, ಹೀಗೆ ಮಾಡಿದರೆ ಮನೆಗೆ ದಾರಿದ್ರ್ಯ ಬರುತ್ತದೆ ಎಂಬುವುದು ಅವರ ನಂಬಿಕೆ. ಊಟವಾದ ಮೇಲೆ ಕ್ಷೌರ ಮಾಡಿಸಿಕೊಳ್ಳಬಾರದು, ಉಗುರು ತೆಗೆಯಬಾರದು ಇತ್ಯಾದಿ ಸಂಪ್ರದಾಯಗಳಿವೇಯಲ್ಲ, ಇದೂ ಹಾಗೆಯೇ. ಬೆಂಗಳೂರಿನಂತಹ ನಗರಗಳಲ್ಲೂ ಕೆಲ ಅಂಗಡಿಗಳಲ್ಲಿ ಕತ್ತಲಾದ ಮೇಲೆ ಸೂಜಿ ಮಾರಾಟ ಮಾಡುವುದಿಲ್ಲ.

Also read: ದೇವರ ಪೂಜೆಗೆ ಹೂವುಗಳನ್ನೇಕೆ ಏರಿಸುತ್ತಾರೆ? ಇದಕ್ಕೆ ಹಿಂದಿನ ಕಾಲದಿಂದಲೂ ಬಂದಿರುವ ಬಲವಾದ ಕಾರಣ ಇಲ್ಲಿದೆ ನೋಡಿ..

ಏಕೆ ಸೂಜಿ, ಹೊಲಿಗೆ ಮತ್ತು ಕತ್ತಲಿಗೆ ಆಗಿಬರುವುದಿಲ್ಲ? ಕಾರಣ ಬಹಳ ಸರಳ. ವಿದ್ಯುತ್ ಇಲ್ಲದಿದ್ದ ಹಳೆಯ ಕಾಲದಲ್ಲಿ ಕತ್ತಲಾದ ಮೇಲೆ ಹೋಲಿಯಬೇಕು ಅಂದರೆ ದೀಪದ ಬೆಳಕಿನಲ್ಲಿ ಹೋಲಿಯಬೇಕಿತ್ತು . ಆಗ ಕೈಗೆ ಸೂಜಿ ಚುಚ್ಚುವ ಅಪಾಯವಿರುತ್ತಿತು. ಸೂಜಿ ಕೈತಪ್ಪಿ ಕೆಳಗೆ ಬಿದ್ದರೆ ಹುಡುಕುವುದೂ ಕಷ್ಟವಿತ್ತು. ಅದು ಇನ್ನಾರದ್ದೋ ಕಾಲಿಗೆ ಚುಚ್ಚಬಹುದಿತ್ತು. ಇನ್ನು , ಹೋಲಿಗೆಯೇನೆಂಬುದು ಸೂಕ್ಷ್ಮ ಕೆಲಸವಾಗಿರುವುದರಿಂದ. ಮಂದ ಬೆಳಕಿನಲ್ಲಿ ಅದನ್ನು ಮಾಡುವುದಾದರೆ ದೊಡ್ಡದಾಗಿ ಕಣ್ಣರಳಿಸಿ ಕಷ್ಟ ಪಟ್ಟು ಮಾಡಿದ ಮೇಲೂ ಕತ್ತಲೆಯಲ್ಲಿ ಹೊಲಿಗೆ ಸರಿಯಾಗಿ ಬಿಳ್ಳುತ್ತದೆ, ಎಂಬ ಗ್ಯಾರಂಟಿಯಿರಲಿಲ್ಲ.

Also read: ಮಹಿಳೆಯರು ಕಿವಿಗೆ ಚುಚ್ಚುವ ಹಿಂದಿರುವ ವೈಜ್ಞಾನಿಕ ಅರಿವು ಮತ್ತು ಲಾಭಗಳನ್ನು ಕೇಳಿದ್ರೆ ಪ್ರತಿಯೊಬ್ರು ಕಿವಿ ಚುಚ್ಚಿಕೊಳ್ತಿರ!!

ಇದರಿಂದ ಬಟ್ಟೆ ಹಾಳಾಗಬಹುದಿತ್ತು. ಹಾಗಾಗಿ ಕತ್ತಲಾದ ಮೇಲೆ ಸೂಜಿ ಮುಟ್ಟುವಂತಿಲ್ಲ ಮತ್ತು ಹೊಲಿಗೆ ಮಾಡುವಂತಿಲ್ಲ ಎಂದು ಹಿರಿಯರು ನಿಯಮ ಮಾಡಿಟ್ಟರು. ಈಗ ಈ ಸಂಪ್ರದಾಯ ಪಾಲಿಸುವ ಅಗತ್ಯವಿಲ್ಲ ವಿದ್ಯುತ್ ಬೆಳಕಿನಲ್ಲಿ ಹಗಲಿನಷ್ಟೇ ಸುಲಭವಾಗಿ ರಾತ್ರಿಯೂ ಹೊಲಿಗೆ ಮಾಡಬಹುದು. ಹಾಗೆ ನೋಡಿದರೆ, ಬಹಳ ಜನ ದರ್ಜಿಗಳು ರಾತ್ರಿ ಹೊತ್ತೆ ಜಾಸ್ತಿ ಹೋಲಿಯುತ್ತಾರೆ. ಅದರಲ್ಲೇನೂ ತಪ್ಪಿಲ್ಲ. ಇನ್ನುಮುಂದೆ ಮನೆಯಲ್ಲಿ ಹಿರಿಯರು ರಾತ್ರಿ ಹೊತ್ತು ಹೋಲಿಯಬಾರದು ಎಂದು ಹೇಳಿದರೆ ಹಿಂದಿನ ಕಾಲದವರು ಏಕೆ ಹೀಗೆ ಹೇಳುತ್ತಿದ್ದರು ಮತ್ತು ಈಗ ಏಕೆ ಇದು ಪ್ರಸ್ತುತವಲ್ಲ ಎಂಬುವುದನ್ನು ತಿಳಿಹೇಳಬಹುದು.