ತೂಕ ಇಳಿಸಲು ಡಯಟ್ ಮಾಡುತ್ತಿದ್ದೀರಾ? ಹಾಗಾದರೆ ತಪ್ಪದೇ ಇಲ್ಲಿ ನೋಡಿ..!

0
1548

ಹಲವು ಮಂದಿ ತೂಕ ಇಳಿಸಿಕೊಳ್ಳಲು ಏನೇನೋ ಸರ್ಕಸ್ ಮಾಡುತ್ತಾರೆ. ತಮ್ಮ ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ.                                                                                     ಆದರೆ ಅವರಿಗೆ ಗೊತ್ತಿಲ್ಲ ಡಯಟ್ ಆಹಾರಗಳಿಂದ ತೊಂದರೆಯೂ ಇದೆ ಎಂದು ತಿಳಿದುಬಂದಿದೆ.

Image result for Doing Diet for Weight Loss

ಈ ರೀತಿ ತೂಕ ಇಳಿಸಿಕೊಳ್ಳಲು ತೆಗೆದುಕೊಳ್ಳುವ ಡಯಟ್ ಆಹಾರ ಉತ್ಪನ್ನಗಳು ತೂಕ ಕಡಿಮೆ ಮಾಡುವ ಬದಲು ತೂಕ ಹೆಚ್ಚಿಸಲೂ ಕಾರಣವಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Image result for Doing Diet for Weight Loss

ಹೆಚ್ಚು ಸಕ್ಕರೆ ಅಂಶ ಅಥವಾ ಕಡಿಮೆ ಕೊಬ್ಬಿನ ಅಂಶವಿರುವ ಆಹಾರ ಉತ್ಪನ್ನಗಳು ಬೊಜ್ಜು ಬೆಳೆಯಲು ಕಾರಣವಾಗಬಹುದಂತೆ. ಹಾಗಂತ ಜಾರ್ಜಿಯಾನಾ ವಿವಿಯ ಸಂಶೋಧಕರು ಕಂಡುಕೊಂಡಿದ್ದಾರೆ.

Image result for Doing Diet for Weight Loss

ಇಂತಹ ಆಹಾರ ವಸ್ತುಗಳಲ್ಲಿ ಸಕ್ಕರೆ ಅಂಶ ಹೆಚ್ಚು. ಇದು ಫಲಕಾರಿಯಾಗುವುದಕ್ಕಿಂತ ಹೆಚ್ಚು, ಪಿತ್ತಜನಕಾಂಗ ಸಂಬಂಧಿ ರೋಗ ಮತ್ತು ಬೊಜ್ಜು ಬೆಳೆಯುವುದಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಸಾಕಷ್ಟು ಅಧ್ಯಯನ ಮಾಡಿದ ನಂತರ ಈ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.