ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಂದ ಭಾರತೀಯ ಉದ್ಯೋಗಿಗಳಿಗೆ ಕಡಿವಾಣ

0
1539

ವಾಷಿಂಗ್ಟನ್: ಎಚ್‌1-ಬಿ ವೀಸಾದಡಿ ಬರುವ ವಲಸಿಗ ನೌಕರರಿಗೆ ಡೊನಾಲ್ಡ್‌ ಟ್ರಂಪ್‌ ಆಳ್ವಿಕೆಯಲ್ಲಿ ಅಮೆರಿಕ ಸರ್ಕಾರ ಕಡಿವಾಣ ಹಾಕುವ ಸಾಧ್ಯತೆ ಇರುವುದರಿಂದ ಅಂತಹ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಐಟಿ ಕಂಪನಿಗಳು ಈಗಲೇ ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿವೆ.

ಅಮೆರಿಕದ ಸ್ಥಳೀಯ ಕಂಪನಿಗಳನ್ನು ಖರೀದಿಸಿ, ಅಲ್ಲಿನ ಉದ್ಯೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ಕ್ಯಾಂಪಸ್‌ಗಳಿಂದ ಅಮೆರಿಕನ್ನರನ್ನೇ ನೇಮಕ ಮಾಡಿಕೊಳ್ಳಲು ಮುಂದಾಗಿವೆ. ತನ್ಮೂಲಕ ಭಾರತದಿಂದ ಅಮೆರಿಕಕ್ಕೆ ಕಳುಹಿಸುವ ಎಂಜಿನಿಯರ್‌ಗಳ ಸಂಖ್ಯೆಯನ್ನು ಕಡಿತಗೊಳಿಸುವ ಸಂಭವವಿದೆ. ಟಿಸಿಎಸ್‌, ಇನ್ಫೋಸಿಸ್‌ ಹಾಗೂ ವಿಪ್ರೋಗೆ ಅಮೆರಿಕ ಅತಿದೊಡ್ಡ ಮಾರುಕಟ್ಟೆ. ಅಲ್ಲಿನ ಗ್ರಾಹಕರಿಗೆ ಸೇವೆ ಒದಗಿಸಲು ಕೌಶಲ್ಯ ಹೊಂದಿದ ಕಂಪ್ಯೂಟರ್‌ ಎಂಜಿನಿಯರ್‌ಗಳನ್ನು ತಾತ್ಕಾಲಿಕ ಅವಧಿಗೆ ಅಮೆರಿಕಕ್ಕೆ ಕಳುಹಿಸುತ್ತವೆ. ಇದಕ್ಕೆ ಎಚ್‌1-ಬಿ ವೀಸಾ ಬಳಸುತ್ತವೆ. 2005ರಿಂದ 2014ರ ಅವಧಿಯಲ್ಲಿ 86 ಸಾವಿರ ಎಂಜಿನಿಯರ್‌ಗಳನ್ನು ಇದೇ ವೀಸಾದಡಿ ಕಳುಹಿಸಿವೆ.

ಭಾರತೀಯ ಎಂಜಿನಿಯರ್ಗಳ ಪ್ರವೇಶ ಕಡಿತ ಕಾರಣಗಲು

1.H1-B ವೀಸಾ ಸಮಸ್ಯೆ H1-B ವೀಸಾದ ಅಡಿಯಲ್ಲಿ ಪ್ರತಿ ವರ್ಷ ಭಾರತದ ಐಟಿ ಇಂಡಸ್ಟ್ರಿ ಲಕ್ಷ ಲಕ್ಷ ಉದ್ಯೋಗಿಗಳನ್ನು ಯುಎಸ್ ಗೆ ಕಳುಹಿಸಿಕೊಡುತ್ತದೆ. ಅಲ್ಲಿ ತಮ್ಮ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿ ಹಿಂದಿರುಗುತ್ತಾರೆ. ಇದರಿಂದಾಗಿ ಅಮೆರಿಕನ್ನರ ಉದ್ಯೋಗದ ಅವಕಾಶಗಳಿಗೆ ಹಾನಿ ಮಾಡಿದಂತಾಗುತ್ತದೆ ಎನ್ನುವುದು ಡೊನಾಲ್ಡ್ ಟ್ರಂಪ್ ಅಭಿಪ್ರಾಯವಾಗಿದೆ. H1-B ವೀಸಾ ಅಮೆರಿಕಾದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶದಿಂದ ತಜ್ಞ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಕೆಲಸಗಾರರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಇತ್ತೀಚಿನ ದಿನಗಳಲ್ಲಿ ಚರ್ಚೆಯಾಗುತ್ತಿರುವ ಸಂಗತಿ ಅದರಲ್ಲೂ ಭಾರತೀಯ ತಜ್ಞ ಉದ್ಯೋಗಿಗಳು ಯುಸ್ ನಲ್ಲಿ ಹೆಚ್ಚಿನ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿರುವುದರಿಂದಾಗಿ ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಂಡರು. ಹೀಗಾಗಿ ಟ್ರಂಪ್ ಅಧ್ಯಕ್ಷರಾದರೆ ಭಾರತೀಯರಿಗೆ H1-B ವೀಸಾಗಳನ್ನು ಕೊಡುವುದನ್ನು ನಿಲ್ಲಿಸುವ ಸಾಧ್ಯತೆ ಅಲ್ಲಗಳೆಯಲು ಆಗುವುದಿಲ್ಲ.

2.ಈ ವರ್ಷದ ಪ್ರಾರಂಭದಲ್ಲಿ, ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ ನಂತರ ಭಾರತೀಯ ಕಂಪನಿಗಳಿಂದ ಅಗ್ಗದ ವಲಸೆ ನೌಕರರನ್ನು ನೇಮಿಸಿಕೊಳ್ಳುವುದರ ವಿರುದ್ದ ಯುಎಸ್ ನಲ್ಲಿ ಮೊಕದ್ದಮೆಗಳನ್ನು ಹೂಡಲಾಯಿತು. ವಾಲ್ಟ್ ಡಿಸ್ನಿ ವರ್ಲ್ಡ್ ನಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡಿ ಈಗ ವಜಾಗೊಂಡಿರುವ ದೇನಾ ಮೂರ್ “I don’t have to be angry or cause drama,” ಎಂದು ನ್ಯೂಯಾರ್ಕ್ ಟೈಮ್ಸ್ ಗೆ ಹೇಳಿದ್ದಾರೆ. H1-B ವೀಸಾ ಸಮಸ್ಯೆಯಿಂದಾಗಿ ವಿದೇಶಿಗರು ಯುಎಸ್ ನಲ್ಲಿ ಕೆಲಸ ಪಡೆದು ಶ್ರೀಮಂತರಾಗುತ್ತಿದ್ದು, ಇದರಿಂದಾಗಿ ಅಮೆರಿಕನ್ನರನ್ನು ಬಡವರಾಗುತ್ತಿದ್ದಾರೆ ಎಂದು ವಾಲ್ಟ್ ಡಿಸ್ನಿ ವರ್ಲ್ಡ್ ನಲ್ಲಿ ಕೆಲಸ ಕಳೆದುಕೊಂಡ ಹಿನ್ನಲೆಯಲ್ಲಿ ಹೇಳಲಾಗಿದೆ.

3.H1-B ವೀಸಾ ಉದ್ಯೋಗಿಗಳಿಗೆ ಒಳ್ಳೆದು ಆದರೆ ವಾಸ್ತವದಲ್ಲಿ ಯುಎಸ್ ಉದ್ಯೋಗಿಗಳಿಗೆ ಇದು ಪ್ರಯೋಜನಕಾರಿಯಲ್ಲ ಎಂದು ನಂತರ H1-B ವೀಸಾ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿದರು. ನಮಗೆ ಈ ದೇಶದಲ್ಲಿ ಅತ್ಯಂತ ನುರಿತ ಜನರ ಅಗತ್ಯವಿದೆ. ನಾವು ಇದನ್ನು ಮಾಡಲು ಸಾಧ್ಯವಾದರೆ ನಮ್ಮ ಉದ್ಯೋಗವನ್ನು ಯಾರು ಪಡೆಯಲು ಸಾಧ್ಯವಿಲ್ಲ. ನಾನು ಇದನ್ನು ಬದಲಾಯಿಸುತ್ತೇನೆ. ನಮ್ಮ ದೇಶದಲ್ಲಿ ತುಂಬಾ ಪ್ರತಿಭಾವಂತ ಜನರಿದ್ದಾರೆ ಎಂದು ಟ್ರಂಪ್ ಡೆಟ್ರಾಯಿಟ್ ನಲ್ಲಿನ ಫಾಕ್ಸ್ ನ್ಯೂಸ್ ರಿಪಬ್ಲಿಕನ್ ಸಂವಾದದಲ್ಲಿ ಅಭಿಪ್ರಾಯ ಪಟ್ಟಿದ್ದರು.

4.ಐಟಿ ರಂಗದಲ್ಲಿ ಎಲ್ಲೆಡೆ ಇರುವ ಸುಳ್ಳೆ ದೊಡ್ಡ ಸಮಸ್ಯೆಯಾಗಿದೆ. ಐಟಿ ಕಂಪನಿಗಳ ಈ ತ್ರೈಮಾಸಿಕದ ಫಲಿತಾಂಶ ತೀರಾ ಕಳಪೆ ಮಟ್ಟದ್ದಾಗಿತ್ತು. ಬಹುತೇಕ ಐಟಿ ಕಂಪನಿಗಳು ಮಂದಗತಿಯ ಚಲನೆಯನ್ನು ಸಾಗುತ್ತಿರುವುದನ್ನು ಅಂದಾಜು ಮಾಡಲಾಗಿದೆ. ಅಲ್ಲದೇ ಇನ್ಫೋಸಿಸ್ ನಂತಹ ಅನೇಕ ಕಂಪನಿಗಳು ಮಾರ್ಗದರ್ಶನದ ಆದಾಯವನ್ನು ಕಡಿತಗೊಳಿಸಿವೆ. ಬಿಎಫ್ಎಸ್ಐ ಹಾಗೂ ಎನರ್ಜಿ ನಿಜವಾದ ಸಮಸ್ಯೆಯಾಗಿದ್ದು, ಇವು ಕೆಲವೊಮ್ಮೆ ಮಾತ್ರ ಉತ್ತಮ ಪ್ರದರ್ಶನ ನೀಡುತ್ತವೆ. ಇಂತಹ ಹಲವು ಸಂಗತಿಗಳು ಉದ್ಯಮಕ್ಕೆ ಭಾರೀ ನಷ್ಟವನ್ನುಂಟು ಮಾಡುತ್ತಿವೆ.

5.ವೇಗದ ತಂತ್ರಜ್ಞಾನ ಸ್ವಾಗತಿಸಬೇಕು ಆದ್ದರಿಂದ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಯಾರು ಗೆಲ್ಲುತ್ತಾರೆ ಎನ್ನುವುದು ವಿಷಯವಲ್ಲದಿದ್ದರೂ, ಈ ಹಲವು ಕಾರಣಗಳನ್ನು ಗಮನಿಸಿದರೆ ಭಾರತೀಯ ಐಟಿ ಉದ್ಯಮಕ್ಕೆ ಬಹುಶಃ ಕಠಿಣ ಸಮಯ ಎಂದೇ ಹೇಳಬೇಕಾಗುತ್ತದೆ. ಪ್ರಸ್ತುತ ಇರುವ ಕುಸಿತ/ಇಳಿಮುಖ ಚಲನೆ ಭಾರತೀಯ ತಂತ್ರಜ್ಞಾನ ಉದ್ಯಮವನ್ನು ತಡೆಯಲು ಸಾಧ್ಯವಿಲ್ಲ. ಸೋಷಿಯಲ್, ಮೊಬೈಲ್, ಅನಾಲಿಟಿಕ್ಸ್ ಮತ್ತು ಕ್ಲೌಡ್ ಆಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ ಎಂದು ಅಂಕಣಕಾರರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಇಂತಹ ದೇಶದ ಜೊತೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುವುದು ಅಮೆರಿಕಕ್ಕೆ ಹೆಮ್ಮೆ ತರುವ ವಿಚಾರ ಎಂದು ಟ್ರಂಪ್‌ಹೇಳಿದ್ದರು ಆದರೆ ಈಗ  ಭಾರತೀಯ ವಲಸಿಗ ನೌಕರರಿಗೆ ಡೊನಾಲ್ಡ್ ಟ್ರಂಪ್ ಆಳ್ವಿಕೆಯಲ್ಲಿ ಅಮೆರಿಕ ಸರ್ಕಾರ ಕಡಿವಾಣ ಹಾಕುವ ಸಾಧ್ಯತೆ ಇರುವುದರಿಂದ ಅಂತಹ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಐಟಿ ಕಂಪನಿಗಳು ಈಗಲೇ ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿವೆ.