ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷ, ಅಬ್ ಕಿ ಬಾರ್ ಟ್ರಂಪ್ ಸರ್ಕಾರ್

0
1120

ಡೊನಾಲ್ಡ್ ಟ್ರಂಪ್ ಈಗ ಅಮೆರಿಕದ ನೂತನ ಅಧ್ಯಕ್ಷ , [ನಮ್ಮ  ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ : ಮೋದಿ follower ಆದ ಡೊನಾಲ್ಡ್ ಟ್ರಂಪ್ ಆರ್ಟಿಕಲ್ ನೋಡಿ ]

ಡೆಮಾಕ್ರಾಟ್ ಪಕ್ಷದ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಭರ್ಜರಿ ಹಾಗೂ ಅನಿರೀಕ್ಷಿತ ಗೆಲುವು ಸಾಧಿಸಿದ್ದಾರೆ. ಗೆದ್ದ ನಂತರ ಅವರು ನೀಡಿದ ಮೊದಲ ಭಾಷಣ ವಿಡಿಯೋ ನೋಡಿ.

ಮೊದಲಿಂದಲೂ ಹಲವು ವಿವಾದಗಳಿಗೆ ಈಡಾಗಿದ್ದ, ಸಮೀಕ್ಷೆಗಳಲ್ಲಿ ಸೋಲನುಭವಿಸಬಹುದೆಂದು ಅಂದಾಜಿಸಲ್ಪಟ್ಟಿದ್ದ ಡೊನಾಲ್ಡ್ ಟ್ರಂಪ್ ಈಗ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದ್ದಾರೆ. ಡೆಮಾಕ್ರಾಟ್ ಪಕ್ಷದ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಭರ್ಜರಿ ಹಾಗೂ ಅನಿರೀಕ್ಷಿತ ಗೆಲುವು ಸಾಧಿಸಿದ್ದಾರೆ. ಬಹುಮತಕ್ಕೆ ಬೇಕಾದ 270 ಮತಗಳಿಗಿಂತ 6 ಮತ ಹೆಚ್ಚಿಗೆ ಪಡೆದು ಟ್ರಂಪ್ ಗೆದ್ದಿದ್ದಾರೆ. ಡೊನಾಲ್ಡ್ ಟ್ರಂಪ್ 276 ಮತ ಪಡೆದರೆ, ಹಿಲರಿ ಕ್ಲಿಂಟನ್ 218 ಮತಗಳಿಗೆ ತೃಪ್ತಿಪಟ್ಟರು. ಈ ಮೂಲಕ 58 ಮತಗಳ ಅಂತರದಿಂದ ಗೆಲುವು ಪಡೆದು ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಫ್ಲೋರಿಡಾ ರಾಜ್ಯದ ಮತದಾರರು ಟ್ರಂಪ್’ಗೆ ಒಲವು ತೋರಿದ್ದು ನಿರ್ಣಾಯಕವೆನಿಸಿದೆ. ನಮ್ಮಲ್ಲಿ ಉತ್ತರಪ್ರದೇಶವಿದ್ದಂತೆ ಅಮೆರಿಕಾದಲ್ಲಿ ಫ್ಲೋರಿಡಾ ರಾಜ್ಯವಿದೆ. ಈ ರಾಜ್ಯದಲ್ಲಿ ಸಿಕ್ಕ ಗೆಲುವು ಟ್ರಂಪ್ ಅವರನ್ನು ಸರಿಯಾದ ಹಳಿಗೆ ತಂದು ನಿಲ್ಲಿಸಿತೆನ್ನಲಾಗಿದೆ..

capture

ಟ್ರಂಪ್ ಗೆದ್ದ ರಾಜ್ಯಗಳು:

ಫ್ಲೋರಿಡಾ, ಸೌಥ್ ಡಕೋಟಾ, ವ್ಯೋಮಿಂಗ್, ಟೆಕ್ಸಾಸ್, ಕಾನ್ಸಾಸ್, ನೆಬ್ರಾಸ್ಕಾ, ಅರ್ಕಾನಾಸ್, ಓಕ್ಲಾಹಾಮಾ, ಸೌಥ್ ಕರೋಲಿನಾ ಮತ್ತು ಟೆನ್ನೆಸ್ಸೀ
ಹಿಲರಿ ಗೆದ್ದ ರಾಜ್ಯಗಳು:

ಇಲಿನಾಯ್ಸ್, ನ್ಯೂಯಾರ್ಕ್, ಮೇರಿಲ್ಯಾಂಡ್, ನ್ಯೂಜೆರ್ಸಿ, ಮಸಾಚುಸೆಟ್ಸ್, ಡೆಲಾವೇರ್, ಕೊಲಂಬಿಯಾ

currency-notes

ಡೊನಾಲ್ಡ್ ಟ್ರಂಪ್  ನಿಮಗೆ ಶುಭವಾಗಲಿ,ಎಲ್ಲ ಅಮೆರಿಕಾರ President ಆಗಿ ,   Long live america and let peace prevail