ಪಿ.ಎಫ್. ವಿತ್-ಡ್ರಾ ಮಾಡಬೇಕಾದರೆ ಈ ವಿಷಯ ಗಮನದಲ್ಲಿ ಇಲ್ಲ ಅಂದ್ರೆ ಹಣ ಕಳೆದುಕೊಳ್ಳುತ್ತೀರಿ!!

0
1510

ಯಾವುದೇ ಖಾಸಗಿ ಕಂಪನಿ ಆಗಲಿ ಸರ್ಕಾರಿ ಕಂಪನಿಯೇ ಆಗಿರಲಿ ಉದ್ಯೋಗಿಯ ಭವಿಷ್ಯ ನಿಧಿ, ಸಂಬಳದಲ್ಲಿ ಕಡಿತ ಮಾಡಲಾಗುತ್ತದೆ. ಈ ಹಣ ಉದ್ಯೋಗಿಗೆ ಕಷ್ಟಕಾಲದಲ್ಲಿ ಆಗುತ್ತದೆ. ಇದಕ್ಕೆ ಸರ್ಕಾರ ಬಡ್ಡಿಯನ್ನು ಸಹ ನೀಡುತ್ತದೆ. ನಿಮ್ಮ ಪಿಎಫ್​​ ಅಕೌಂಟ್​​ನಲ್ಲಿನ ಹಣವನ್ನು ಪಡೆಯಲು ನೀವು ಏನು ಮಾಡಬೇಕು ಇಲ್ಲಿದೆ ಮಾಹಿತಿ.

ಯಾವ ಸಂದರ್ಭದಲ್ಲಿ ವಿತ್​ ಡ್ರಾ ಮಾಡಿದ್ರೆ ಟಿಡಿಎಸ್​ ಕಡಿತವಾಗುವುದಿಲ್ಲ ಎಂಬುದು ಗೊತ್ತೆ?

ಉದ್ಯೋಗದಲ್ಲಿ ನೌಕರ ಹೆಚ್ಚು ಹಣ ಅಥವಾ ನೆಮ್ಮದಿಗಾಗಿ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಹಾರುತ್ತಾನೆ. ಈ ವೇಳೆ ಉದ್ಯೋಗಿ ಹಳೆಯ ಕಂಪನಿಯ EPF ಟ್ರಾನ್ಸ್​ಫರ್​ ಮಾಡಿಸಿದ್ರೆ, TDS ಕಟ್ಟಾಗದು.
ಉದ್ಯೋಗಿ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು, ತುರ್ತು ಹಣದ ಅವಶ್ಯಕತೆ ಇದ್ದಲ್ಲಿಯೂ ಆತ EPF ಪಡೆದ್ರೆ, TDS ಕಟ್ಟಾಗದು.

EPF ಹೊಂದಿದ ಉದ್ಯೋಗಿ 5 ವರ್ಷದ ಮೇಲೆ ವಿತ್​ ಡ್ರಾ ಮಾಡಿದ್ರೆ TDS ಕಾಟ್ಟಾಗುವುದಿಲ್ಲ. ಒಂದು ವೇಳೆ ಅದಕ್ಕೂ ಮೊದಲೇ ಹಣವನ್ನು ಪಡೆದ್ರೆ TDS ಕಟ್ಟಾಗುತ್ತದೆ. ಕನಿಷ್ಠ 5 ವರ್ಷವಾದ್ರು ಖಾತೆ ಪೂರೈಸಿದ್ರೆ, ಟಿಡಿಎಸ್​ ಕಟ್​ ಆಗದು.

ನೌಕರ EPF ಖಾತೆಯಲ್ಲಿ 30 ಸಾವಿರಕ್ಕಿಂತಲೂ ಕಡಿಮೆ ಹಣ ಹೊಂದಿದ್ದರೆ, ಹಾಗೂ ಉದ್ಯೋಗಿಯು 5 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ವಿತ್​ ಡ್ರಾ ಮಾಡಿದ್ರೂ ಹಣ ಟಿಡಿಎಸ್​ನಲ್ಲಿ ಕಟ್ಟಾಗದು.

30 ಸಾವಿರಕ್ಕಿಂತಲೂ ಹೆಚ್ಚಿನ ಹಣವನ್ನು ಉದ್ಯೋಗಿ ವಿತ್​ ಡ್ರಾ ಮಾಡುವುದಾದರೆ 15G/ 15H ನೀಡಬೇಕು. ಇದ್ರಿಂದ ಟಿಡಿಎಸ್​ನಿಂದ ಮುಕ್ತಿ ಸಾಧ್ಯ. ಫಾರ್ಮ್​ ಫಿಲ್​ ಮಾಡುವಾಗ ಸೂಚನೆಗಳನ್ನು ಕಡ್ಡಾಯವಾಗ ಸರಿಯಾಗಿ ಓದಲೇ ಬೇಕು.

ಇನ್ನು 30 ಸಾವಿರಕ್ಕಿಂತಲೂ ಹೆಚ್ಚಿನ ಹಣವನ್ನು ಉದ್ಯೋಗಿ ಪಡೆದುಕೊಳ್ಳಲು ಬಯಿಸಿ, ಆತನ ಖಾತೆ 5 ವರ್ಷ ಪೂರೈಸದೆ ಇದ್ದಲ್ಲಿಯೂ ಆತನಿಗೆ ಟಿಡಿಎಸ್​ ಹೊಡೆತ ಬೀಳುತ್ತದೆ. 15G/ 15H ಹಾಜರು ಪಡಿಸದೇ ಇದಲ್ಲಿ ಶೇ. 10 ರಷ್ಟು ಟಿಡಿಎಸ್ ಕಟ್ಟಬೇಕಾಗುತ್ತದೆ.