ಕರೋನ ಬಗ್ಗೆ ಅತಿಯಾದ ಆತಂಕ ಬೇಡ, ಕರೋನದಿಂದ ಸಂಪೂರ್ಣ ಗುಣಮುಖರಾದ ಗೂಗಲ್ ಉದ್ಯೋಯಿಯ ಅನುಭವ ಓದಿ, ನಿಮಗೆ ಧೈರ್ಯ ಬರುತ್ತೆ!!

0
1664

ಹನಿಮೂನ್ ಗೆ ತೆರಳಿದ ಬೆಂಗಳೂರಿನ ಟೆಕ್ಕಿಗೆ ಕೊರೊನಾ ಇರುವುದು ದೃಡಪಟ್ಟಿತ್ತು, ಆದರೆ ಈಗ ಅವರು ಚೇತರಿಸಿಕೊಂಡಿದ್ದು, ಅದರ ಅನುಭವನ್ನುಮಾಧ್ಯಮಕ್ಕೆ ಹಂಚಿಕೊಂಡಿದ್ದಾರೆ. ಕರಣ್ ಎನ್ನುವ ಟೆಕ್ಕಿ ಬೆಂಗಳೂರಿನ ಜಯನಗರ ಜನರಲ್ ಆಸ್ಪತ್ರೆಯಲ್ಲಿ ಒಂದು ವಾರಗಳ ವರೆಗೆ ಚಿಕಿತ್ಸೆ ಪಡೆದು ಕೊರೊನಾದಿಂದ ಪಾರಾಗಿದ್ದಾರೆ, ಇವರು ವಿದೇಶದ ಟ್ರಿಪ್ ಮುಗಿಸಿಕೊಂಡು ಬಂದ ನಂತರ ಕೊರೊನಾ ಇರುವ ಅನುಮಾನ ಮೂಡಿತು ಈ ವೇಳೆ ಟೆಕ್ಕಿಯ ಹೆಂಡತಿ ತವರು ಮನೆಗೆ ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಎಚ್ಚರಿಕೆಯನ್ನು ಕೂಡ ನಿಡಲಾಗಿತ್ತು.

ಹೌದು ಬೆಂಗಳೂರಿನ ಕರಣ್ ಎನ್ನುವ ಟೆಕ್ಕಿ ಹನಿಮೂನ್ ಗೆ ಗ್ರೀಸ್, ಸ್ವಿಟ್ಜರ್ಲೆಂಡ್ ಮತ್ತು ಫ್ರಾನ್ಸ್‌ಗೆ ತೆರಳಿ ಮಾರ್ಚ್ 6 ರಂದು ಮುಂಬೈಗೆ ಹಿಂದಿರುಗಿದರು. ಆ ಸಮಯದಲ್ಲಿ ಭಾರತ ಸರ್ಕಾರ ಹೊರಡಿಸಿದ ಸೂಚನೆಗಳನ್ನ ಪಾಲಿಸದೇ ಬೆಂಗಳೂರಿಗೆ ಮರಳಿದರು ನಂತರ ಟೆಕ್ಕಿ ಪತ್ನಿ ಹೋಳಿ ಹಬ್ಬಕ್ಕೆಂದು ಅವರ ಪಾಲಕರ ಜೊತೆಗೆ ಆಗ್ರಾಕ್ಕೆ ತೆರಳಿದರು. ಅದರಂತೆ ಕರಣ್ ಕೂಡ ಎಂದಿನಂತೆ ಕೆಲಸಕ್ಕೆ ಮರಳಿದರು ನಂತರ ರೋಗ ಲಕ್ಷಣಗಳು ಕಂಡು ಬಂದು ತಲೆನೋವು ಪ್ರಾರಂಭವಾಗಿ ಜ್ವರ ಮತ್ತು ಗಂಟಲು ನೋವು ಬಂದಿತು. ಎರಡು ದಿನಗಳಲ್ಲಿ, ಪರಿಸ್ಥಿತಿ ಹೆಚ್ಚಾಗಿತು. ದೇಹದಲ್ಲಿ ಯಲೆಲ್ಲ ಸುಸ್ತು ಆಯಾಸ, ರಕ್ತದೊತ್ತಡ ಹೆಚ್ಚಾಯಿತು . ಮೊದಲ ದಿನ, ರೋಗಲಕ್ಷಣಗಳನ್ನು ಹುಟ್ಟಿರುವ ಪರಿಸ್ಥಿತಿಗಳಿಗೆ ಇಳಿಯಿತು, ಆದರೆ 2-3 ದಿನಗಳಲ್ಲಿ, ರೋಗಲಕ್ಷಣಗಳು ಸಾಕಷ್ಟು ವಿಭಿನ್ನವಾದವು ಇದು ಸಾಮಾನ್ಯ ಜ್ವರವಲ್ಲ ಎನ್ನುವುದು ಕೂಡ ಗಮನಕ್ಕೆ ಬಂತು.

ನಂತರ ಜ್ವರದ ಪ್ರಮಾಣ ಅತೀಯಾದ ಹೇರಿಕೆ ಕಂಡಿತು, ಆಗ ಸಲಹೆ ಮೇರಿಗೆ ಥರ್ಮಲ್ ಕ್ರಿನಿಂಗ್ ಮಾಡಿಸಿಕೊಂಡೆ ಆಗ ಸೋಂಕು ಕಡಿಮೆ ಹಂತದಲ್ಲಿತ್ತು, ಮಾರ್ಚ್ 10 ರಂದು ಪರೀಕ್ಷೆಗೆ ಹೋದ ನಂತರ, ಮಾರ್ಚ್ 11 ರಂದು ರಿಪೋರ್ಟ್ ಬಂತು, ಅದರಲ್ಲಿ ಅನುಮಾನಸ್ಪಂದವಾಗಿದೆ ಅದಕ್ಕಾಗಿ ಆಸ್ಪತ್ರೆಗೆ ಸೇರಿವುದು ಸೂಕ್ತ ಎಂದು ಹೇಳಿದರು, ಆಂಬ್ಯುಲೆನ್ಸ್ ಬಂದು ಪರೀಕ್ಷಾ ಸ್ಥಳಕ್ಕೆ ಕರೆದೊಯ್ಯಿತು, ಮತ್ತು ಇನ್ನೊಬ್ಬರು ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಮರುದಿನ – ಮಾರ್ಚ್ 12 – COVID-19 ಇರುವುದು ದೃಡಪಟ್ಟಿತು. ನಂತರ ಜಯನಗರದ ಆಸ್ಪತ್ರೆಯ ವ್ಯೆದ್ಯರು ಹೆಚ್ಚಿನ ಕಾಳಜಿವಹಿಸಿದರಿಂದ. ಈ ವೇಳೆ ನನ್ನೊಂದಿಗೆ ಯಾರು ಅನವಶ್ಯಕ ವಿಷಯದ ಬಗ್ಗೆ ಚರ್ಚಿಸಲು ನನ್ನ ವಾರ್ಡ್-ಗೆ ಬರುತ್ತಿರಲಿಲ್ಲ.

ಏನೇ ಕೇಳುವುದು ಹೇಳುವುದು ಇದ್ದರು ಫೋನ್ ಮೂಲಕವೇ ಹೇಳುತ್ತಿದ್ದರು. ಆಸ್ಪತ್ರೆಯ ಊಟ ಉತ್ತಮವಾಗಿತ್ತು, ಅದರಂತೆ ಅತೀಯಾದ ಸ್ವಚ್ಚತೆ ಕೂಡ ಇತ್ತು. ಬೆಳಿಗ್ಗೆ 7 ಘಂಟೆಗೆ ಹಾಲು ಮತ್ತು ಬ್ರೆಡ್ ಬರುತ್ತಿತು. ನಂತರ ಬೆಳಿಗ್ಗೆ 10ಘಂಟೆಗೆ ಕಾಫಿ ದೋಸೆ/ ಇಡ್ಲಿ. ಮಧ್ಯಾಹ್ನ 1 ಘಂಟೆಗೆ ರೈಸ್ ಮತ್ತು ದಾಲ್ / ಗ್ರೇವಿ, ಮೊಟ್ಟೆ, ಹಾಲು, ಬಾಳೆಹಣ್ಣು, ಸಂಜೆ 5ಕ್ಕೆ ಚಹಾ ಮತ್ತು ಬ್ರೆಡ್/ ಬಿಸ್ಕತ್ತು ರಾತ್ರಿ 8ಕ್ಕೆ ರೈಸ್ ಮತ್ತು ದಾಲ್ / ಗ್ರೇವಿ, ಮೊಟ್ಟೆ ಬರುತಿತ್ತು, ಎಂದು TNM ಗೆ ಮಾಹಿತಿ ನೀಡಿದ್ದಾರೆ.

ಅದರಂತೆ ನನ್ನ ಜೀವನದಲ್ಲಿ ಕೊನೆಗೆ ದಿನ ಎನ್ನುವ ಅನುಭವ ವ್ಯಕ್ತವಾಯಿತು. ಈ ವೇಳೆ ಸರಿಯಾದ ನಿದ್ದೆ ಮತ್ತು ವಿಶ್ರಾಂತಿ ಮಾಡಿದೆ. ಈ ವೇಳೆ ನನ್ನ ಕುಟುಂಬದವರು ವೀಡಿಯೋ ಕಾಲ್ ಮಾಡಿ ದೈರ್ಯ ತುಂಬುತ್ತಿದ್ದರು, ಹೆಂಡತಿ ಕೂಡ ಭಯದಲ್ಲಿದ್ದಳು ನಾನೇ ಅವಳಿಗೆ ದೈರ್ಯ ತುಂಬಿದೆ. ಈ ವೇಳೆ ಆತ್ಮಿಯ ಸ್ನೇಹಿತರು ತೋರಿದ ಪ್ರೀತಿಯಿಂದ ಬೇಗನೆ ಹೊರಬರಬೇಕು ಎನ್ನುವ ಆಸೆ ಹುಟ್ಟಿತು, ಅದರಿಂದ ವ್ಯೆದ್ಯರು ಹೇಳಿದ ಎಲ್ಲ ಸಲಹೆ, ಸೂಚನೆಯನ್ನು ಸರಿಯಾಗಿ ಪಾಲಿಸಿದೆ. ಈ ವೇಳೆ ಸಾಕಷ್ಟು ಮಾನಸಿಕ ಒತ್ತಡವನ್ನು ಕೂಡ ಅನುಭವಿಸಿದೆ ಎಂದು ಕರಣ್ ಹೇಳಿದ್ದಾರೆ.

Also read: ಗಾಳಿಯ ಮೂಲಕ ಹರಡುತ್ತಾ ಕೊರೊನಾ? ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು ಅಂತ ಇಲ್ಲಿದೆ ತಪ್ಪದೆ ಓದಿ.!